Loading Events

« All Events

  • This event has passed.

ಸುಪ್ರಿಯಾ ಆಚಾರ್ಯ

October 23, 2023

೨೩.೧೦.೧೯೮೨ ಸುಪ್ರಸಿದ್ಧ ಸುಗಮಸಂಗೀತ ಗಾಯಕಿ ಸುಪ್ರಿಯಾ ಆಚಾರ್ಯರವರು ಹುಟ್ಟಿದ್ದು ಉಡುಪಿಯಲ್ಲಿ. ತಂದೆ ರಾಜಗೋಪಾಲಾಚಾರ್ಯ. ತಾಯಿ ರಮಾ ಆಚಾರ್ಯ. ಓದಿದ್ದು ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕಪದವಿಗಾಗಿ. ರೂಢಿಸಿಕೊಂಡಿದ್ದು ಹಾಡುಗಾರಿಕೆ. ವಿದ್ವಾನ್‌ ತಿರುಮಲೆ ಶ್ರೀನಿವಾಸ್‌ರಿಂದ ಕರ್ನಾಟಕ ಸಂಗೀತ, ರಾಜು ಅನಂತಸ್ವಾಮಿ ಅವರಿಂದ ಸುಗಮಸಂಗೀತ, ಪಂಡಿತ ಪರಮೇಶ್ವರ ಹೆಗಡೆಯವರಿಂದ ಹಿಂದೂಸ್ತಾನಿ ಸಂಗೀತ ಶಿಕ್ಷಣ. ರಾಜ್ಯದ ಹಲವಾರು ಕಡೆ ಸುಗಮಸಂಗೀತ ಕಾರ್ಯಕ್ರಮ. ಸಿ.ಅಶ್ವಥ್‌ರವರ ‘ಕನ್ನಡವೇ ಸತ್ಯ’ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗಿ. ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಕದಂಬೋತ್ಸವಗಳಲ್ಲಿ ಹಾಡಿದ ಖ್ಯಾತಿ. ಶಿವಮೊಗ್ಗ ಸುಬ್ಬಣ್ಣ, ರಾಜು ಅನಂತಸ್ವಾಮಿ, ರತ್ನಮಾಲಾ ಪ್ರಕಾಶ್‌, ಪುತ್ತೂರು ನರಸಿಂಹನಾಯಕ್‌ ಮುಂತಾದ ಗಾಯಕರೊಡನೆ ಗಾಯಕಿಯಾಗಿ ಭಾಗಿ. ಜಿ ಟಿವಿ, ಈ ಟಿವಿ (ಎದೆತುಂಬಿ ಹಾಡುವೆನು) ಉದಯ ಟಿವಿ, ದೂರದರ್ಶನ ವಾಹಿನಿಗಳಲ್ಲಿ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ಕಿಚ್ಚು, ಮನೆಯೊಂದು ಮೂರುಬಾಗಿಲು, ಕನ್ನಡಿ ಇಲ್ಲದ ಮನೆ, ಸ್ವಾಭಿಮಾನ ಮುಂತಾದ ಧಾರಾವಾಹಿಗಳ ಪ್ರಾರಂಭಗೀತೆಯ ಹಾಡುಗಾರ್ತಿ. ಅಮೃತಧಾರೆ, ಪ್ರೀತಿ ಏಕೆ ಭೂಮಿ ಮೇಲಿದೆ. ಮೀರಾ ಮಾಧವ ರಾಘವ ಚಲನಚಿತ್ರಗಳ ಗಾಯಕಿ. ಹಂಸಲೇಖ, ಮನೋಮೂರ್ತಿ, ಗುರುಕಿರಣ್‌, ಸ್ಟಿಫನ್‌ಪ್ರಯಾಗ್‌, ಪ್ರವೀಣ್‌ ಗೋಡ್ಕಿಂಡಿ, ಪ್ರವೀಣ್‌ ಡಿ.ರಾವ್‌ ಮುಂತಾದವರುಗಳ ನಿರ್ದೇಶನದಲ್ಲಿ ಹಾಡುಗಾರಿಕೆ. ಉಡುಪಿಯ ಫಲಿಮಾರು ಮಠದಿಂದ ‘ಗಾನಸಿರಿ’, ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ, ಜಿ ಟಿವಿಯ ಸರೆಗಮ ಪ್ರಶಸ್ತಿ, ಕುಮಾರನ್‌ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಯುವ ಪ್ರತಿಭೆಗಳಿಗೆ ನೀಡುತ್ತಿರುವ ಸುಗಮಸಂಗೀತ ಶಿಕ್ಷಣ.

* * *

ಇದೇದಿನಹುಟ್ಟಿದಕಲಾವಿದರು: ಚಿಂತನಪಲ್ಲಿ ಕೃಷ್ಣಮೂರ್ತಿ – ೧೯೨೦ ಚಂದ್ರಕಾಂತ ಕುಸನೂರ – ೧೯೩೧ ರಾಮೇಶ್ವರಿ ವರ್ಮ – ೧೯೩೬ ಶ್ರೀನಿವಾಸ ಪ್ರಭು – ೧೯೫೫

* * *

Details

Date:
October 23, 2023
Event Category: