೨೦-೧-೧೯೨೩ ಹುಟ್ಟಿದ್ದು ಧಾರವಾಡ ಜಿಲ್ಲೆಯ ರಾಣಿಬೆನ್ನೂರು. ತಂದೆ ರಂಗನಾಥ, ತಾಯಿ ರಾಜಕ್ಕ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹುಬ್ಬಳ್ಳಿಯಲ್ಲಿ. ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಓದು. ಹೈದರಾಬಾದಿನಲ್ಲಿ ಸಿ.ಐ. ಪದವಿ. ಕಾಲೇಜು ದಿನಗಳಲ್ಲೇ ಸಾಹಿತ್ಯದ ಗೀಳು. ಇವರು ಬರೆದ ಮೊದಲ ಕವನ ಸಂಕಲನವನ್ನು ರಂ.ಶ್ರೀ. ಮುಗಳಿಯವರು ಪ್ರಕಟಿಸಿದರು. ಇವರ ಕವಿತೆಗಳು ಹೆಚ್ಚಾಗಿ ಕಥನ ಕವನಗಳಾಗಿದ್ದು ಅವುಗಳ ಪ್ರಧಾನ ಅಂಶವೆಂದರೆ ಮಾರ್ಕ್ಸ್ ಮತ್ತು ಮಾಧ್ವರು-ಇದು ವಿಮರ್ಶಕರ ಅಭಿಪ್ರಾಯ. ಕಾಲೇಜು ಶಿಕ್ಷಣ ಮುಗಿಸಿದ ನಂತರ ಉತ್ತರ ಕರ್ನಾಟಕ ಜಿಲ್ಲೆಯ ಬಂಕಿಕೊಂಡ್ಲದಲ್ಲಿ ಹೊಸದಾಗಿ ಆರಂಭವಾಗಿದ್ದ ಹೈಸ್ಕೂಲು ಉಪಾಧ್ಯಾಯರಾಗಿ ವೃತ್ತಿ ಆರಂಭ. ಅಲ್ಲೇ ಮುಖ್ಯೋಪಾಧ್ಯಾಯರಾಗಿ ಬಡ್ತಿ. ಇದರ ಜೊತೆಗೆ ರೋಮ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಕ. ಕಾಲೇಜು ದಿನಗಳಿಂದಲೂ ಹಲವಾರು ಸಾಹಿತಿ ಮಿತ್ರರ ಒಡನಾಟ. ಪ್ರಮುಖರೆಂದರೆ ಗಂಗಾಧರ ಚಿತ್ತಾಲ, ವರದರಾಜ ಹುಯಿಲಗೋಳ, ರಾ.ಯ. ಧಾರವಾಡಕರ, ವಿಜಿ ಭಟ್ಟ ಮುಂತಾದವರೊಡನೆ ‘ವರುಣ ಕುಂಜ’ ಎಂಬ ಬರಹಗಾರರ ಬಳಗದ ಪ್ರಾರಂಭ. ಇವರ ಸುಮಾರು ೧೫ ಕೃತಿಗಳಲ್ಲಿ ಕಾವ್ಯ, ವಿಮರ್ಶೆ, ನವ್ಯ ಕವಿತೆ, ಕಥಾಸಂಕಲನ, ಕಾದಂಬರಿ ಎಲ್ಲವೂ ಸೇರಿವೆ. ಕಥಾಸಂಕಲನ-ನೆರಳು ; ಕಾದಂಬರಿ-ವರುಣ ಕುಂಜ, ತಾಳ-ತಂಬೂರಿ; ಜೀವನ ಚರಿತ್ರೆ-ಮಧ್ವಮುನಿಗಳು ; ಕಥನ ಕವನ-ಕಥನಕವನ, ಬಕುಳದ ಹೂಗಳು, ಗೋಯ ತೆನೆಗಳು ; ಕವಿತೆ-ಸಂತಾನ, ಆನಂದತೀರ್ಥ, ಹಾವಾಡಿಗರ ಹುಡುಗ, ಮತ್ಸ್ಯಗಂ, ಬೆಳ್ಳಕ್ಕಿಗಳು. ಪು.ತಿ.ನರಸಿಂಹಾಚಾರ್ಯರ ಕುರಿತು ವಿಮರ್ಶೆ, ಅನುವಾದಿತ-ಎರಡು ರಷ್ಯನ್ ಕಾದಂಬರಿಗಳು. ಸಂದ ಪ್ರಶಸ್ತಿಗಳು ಹಲವಾರು-ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ರಾಜ್ಯಶಿಕ್ಷಕರ ಪ್ರಶಸ್ತಿ, ಕರ್ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಇವರು ನಿಧನರಾದದ್ದು ೨೦.೮.೧೯೯೫ರಲ್ಲಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಭಿಕಾಜಿ ಪರಶುರಾಮ ಕಾಳೆ – ೧೮೮೯ ಗುಂಡ್ಮಿ ಚಂದ್ರಶೇಖರ ಐತಾಳ – ೧೯೩೬ ಆನಂದಿ ಸದಾಶಿವರಾವ್ – ೧೯೨೯ ನರಸಿಂಹ ಪರಂಜಾಪೆ – ೧೯೪೪ ಹರಿಹರ ಪ್ರಿಯ – ೧೯೫೨ ಗಂಗಯ್ಯ ಹೊಸಮನಿ – ೧೯೫೦ ಸುಮನಾ – ೧೯೫೧ ನಾಗಂಬಾಳ್ ಟಿ.ಕೆ. – ೧೯೨೪ ಪಾರ್ವತಿ. ಕೃ. ನಾ. ಮೂರ್ತಿ – ೧೯೩೪

