ಸು. ರುದ್ರಮೂರ್ತಿಶಾಸ್ತ್ರಿ

Home/Birthday/ಸು. ರುದ್ರಮೂರ್ತಿಶಾಸ್ತ್ರಿ
Loading Events

೧೧-೧೧-೧೯೪೮ ಸಾಮಾಜಿಕ, ಚಾರಿತ್ರಿಕ, ಐತಿಹಾಸಿಕ, ಎಲ್ಲ ಪ್ರಕಾರಗಳಲ್ಲೂ ಕಾದಂಬರಿ ರಚಿಸಿ ಹೆಸರು ಗಳಿಸಿರುವ ರುದ್ರಮೂರ್ತಿ ಶಾಸ್ತ್ರಿಯವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿ. ತಂದೆ ಎಸ್.ಎನ್. ಶಿವರುದ್ರಯ್ಯ, ತಾಯಿ ಸಿದ್ದಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಪ್ರೌಢಶಾಲೆ ರಾಮನಗರ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ. ೧೯೭೨ರಿಂದ ೧೯೮೨ರವರೆಗೂ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ‍್ಯ ನಿರ್ವಹಣೆ. ಹುಟ್ಟಿದ ಸಾಹಿತ್ಯದ ತುಡಿತದಿಂದ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಆರಿಸಿಕೊಂಡದ್ದು ಪೂರ್ಣಾವ ಸಾಹಿತ್ಯ ರಚನಾಕಾರ್ಯ. ಚಿಕ್ಕಂದಿನಿಂದಲೂ ಸಾಹಿತ್ಯ ರಚನೆಯ ಗೀಳು. ಮೊದಲ ಕವನ ಸಂಕಲನ ‘ಭಾವ ಲಹರಿ’ ೧೯೬೯ರಲ್ಲಿ ಪ್ರಕಟಿತ. ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ೧೬ ಕಾವ್ಯ ಕೃತಿಗಳು. ಕಾದಂಬರಿ-ಧರ್ಮಚಕ್ರವರ್ತಿ ಅಶೋಕ, ಔರಂಗಜೇಬ, ಕುಮಾರರಾಮ, ಚಾಣಕ್ಯ, ಸರ್ವಜ್ಞ, ಚಾರುದತ್ತ, ಬಣ್ಣದ ಹಕ್ಕಿ, ಸ್ವಪ್ನಗಾನ, ರಾಧಾರಜನಿ, ಮಣ್ಣಿನ ಋಣ ಹೀಗೆ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು ಸೇರಿ ೩೦ ಕೃತಿ ರಚನೆ. ಮಕ್ಕಳ ಸಾಹಿತ್ಯಕ್ಕೂ ಅಪಾರ ಕೊಡುಗೆ- ಒಳ್ಳೆಯದು ಗೆಲ್ಲುತ್ತದೆ, ಕಷ್ಟಪಟ್ಟರೆ ಫಲವುಂಟು, ಬೀರಬಲ್ಲನ ಕಥೆಗಳು, ಗೌತಮ ಬುದ್ಧ, ಕನಕದಾಸರು, ರಂಗನ ವಿದೇಶಯಾತ್ರೆ, ಸತ್ಯ ಹರಿಶ್ಚಂದ್ರ ಸೇರಿ ಸುಮಾರು ೨೩ ಕೃತಿಗಳು. ಅನುವಾದ- ವ್ಯವಹಾರ ಅಧ್ಯಯನ-೧, ೨, ಕರ್ನಾಟಕ ಜಾನಪದ ಕಥೆಗಳು, ತಮಿಳುನಾಡಿನ ಜಾನಪದ ಕಥೆಗಳು, ವಿಶ್ವವಿಖ್ಯಾತ ವಿಜ್ಞಾನಿಗಳು ಮುಂತಾದ ೧೭ ಕೃತಿಗಳು. ಸಂಗ್ರಹಗಳು-ಬಸವಣ್ಣನವರ ವಚನ, ಸರ್ವಜ್ಞನ ವಚನಗಳು, ವಚನ ಸೂಕ್ತಿಗಳು, ಸಾವಿರಾರು ವಚನಗಳು ಮುಂತಾದ ೭ ಕೃತಿಗಳು. ಹಲವಾರು ಗದ್ಯಾನುವಾದಗಳು. ನಾಟಕ-ರಂಪರಾಮಾಯಣ, ಧರ್ಮವಿಜಯ. ಇತರ- ಮಾತನಾಡುವ ಬೆಕ್ಕು, ಶಬ್ದಾರ್ಥಮಂಜರಿ, ವಚನ ಕಥನ ಮುಂತಾದುವು ಸೇರಿ ಒಟ್ಟು ೧೩೦ ಕೃತಿ ಪ್ರಕಟಿತ. ಸುಮಾರು ನೂರು ಚಲನಚಿತ್ರಗಳಿಗೆ ಚಿತ್ರಗೀತೆ, ಹತ್ತು ಚಲನಚಿತ್ರಗಳಿಗೆ ಕಥೆ-ಸಂಭಾಷಣೆ, ಇತ್ತೀಚಿನ ಗಂಡುಗಲಿ ಕುಮಾರರಾಮ, ಚಲನಚಿತ್ರಕ್ಕೆ ಬರೆದ ಚಿತ್ರಕಥೆ ಸಂಭಾಷಣೆ. ಅಣ್ಣ ಬಸವಣ್ಣ, ವೆಂಕಟೇಶ ಮಹಿಮೆ, ನಳದಮಯಂತಿ, ವಿಕ್ರಮ ಮತ್ತು ಬೇತಾಳ ಮುಂತಾದ ಟಿ.ವಿ. ಧಾರಾವಾಹಿಗಳಿಗೆ ಬರೆದ ಚಿತ್ರಕಥೆ-ಸಂಭಾಷಣೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಮಂಗಳವೇಢೆ ಶ್ರೀನಿವಾಸರಾಯರು – ೧೮೯೫-೪.೧೨.೧೯೮೦ ಗಂಡಸಿ ವಿಶ್ವೇಶ್ವರ – ೧೯೪೨ ಸತ್ಯನಾರಾಯಣ ಉರಾಳ – ೧೯೬೦ ಲಲಿತಾ. ಬಿ. ರಾವ್ – ೧೯೪೪ ಹುಲಿಮನೆ ಸೀತಾರಾಮಶಾಸ್ತ್ರಿ – ೧೯೦೬-೧೫.೫.೧೯೮೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top