೧೩-೨-೧೮೫೬ ಹುಟ್ಟಿದ್ದು ಹುಣಸೂರಿನಲ್ಲಿ. ಪ್ರಾರಂಭಿಕ ಶಿಕ್ಷಣ ಹುಣಸೂರು. ನಂತರ ಮೈಸೂರು. ಮದರಾಸು ವಿಶ್ವವಿದ್ಯಾಲಯದಲ್ಲಿನ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ವಕೀಲಿವೃತ್ತಿ ಆರಂಭಿಸಿದ್ದು ಬಳ್ಳಾರಿಯಲ್ಲಿ. ವಕೀಲಿ ವೃತ್ತಿಯಿಂದ ತೃಪ್ತಿ ಸಿಗದೆ ಪುನಃ ಹಳ್ಳಿಗೆ ಬಂದು ೧೫ ವರ್ಷಗಳ ಕಾಲ ಸತತ ವ್ಯಾಸಂಗ. ಜ್ಯೋತಿಷ್ಯ, ಖಗೋಳ ವಿಜ್ಞಾನ ಮುಂತಾದ ಶಾಸ್ತ್ರಗಳಲ್ಲಿ ಗಳಿಸಿದ್ದು ಅಪಾರ ಪಾಂಡಿತ್ಯ. ಹಿಂದೂಸ್ಥಾನದ ನಾನಾ ಭಾಗಗಳಲ್ಲಿ ಸಂಚಾರ. ಭಾರತೀಯ ಇತಿಹಾಸ-ಸಂಸ್ಕೃತಿಯ ಬಗ್ಗೆ ಭಾಷಣ-ಪ್ರವಚನದಿಂದ ಜನ ಜಾಗೃತಿಯ ಕಾರ್ಯಕ್ರಮ. ಭಾರತೀಯ ಜ್ಯೋತಿಷ ಶಾಸ್ತ್ರವನ್ನು ಪರಿಚಯಿಸಲು ತೆಗೆದುಕೊಂಡ ಅಪಾರ ಶ್ರಮ. ಹಲವಾರು ಗ್ರಂಥಗಳನ್ನು ರಚಿಸಿದರು. ಇತಿಹಾಸದ ಬಗ್ಗೆ ಇವರು ಬರೆದ ಗ್ರಂಥ “HISTORY OF VIJAYANAGAR OR NEVER TO BE FORGOTTON EMPIRE” ಅತ್ಯಂತ ಆಧಾರಗ್ರಂಥ, ಕನ್ನಡಿಗರಿಗೆ ಸೂರ್ತಿದಾಯಕ ಕೃತಿ. ದೇಶವಿದೇಶಗಳೊಡನೆ ಸಂಪರ್ಕ, ಲಂಡನ್ನಿನ ರಾಯಲ್ ಆಸ್ಟ್ರ ನಾಮಿಕಲ್ ಸೊಸೈಟಿ, ನ್ಯೂಯಾರ್ಕಿನ ಮೆಡಿಕೊ ಲೀಗಲ್ ಸೊಸೈಟಿ, ಬಂಗಾಲದ ರಾಯಲ್ ಏಶಿಯಾಟಿಕ್ ಸೊಸೈಟಿ ಸಂಸ್ಥೆಗಳಲ್ಲಿ ಗೌರವ ಸದಸ್ಯರು. ಬೆಂಗಳೂರಿನ ಅಸ್ಟ್ರಲಾಜಿಕಲ್ ಮಾಸಪತ್ರಿಕೆಯ ಸಂಸ್ಥಾಪಕರು. ಹಲವು ವರ್ಷ ಸಂಪಾದಕರ ಹೊಣೆ. ರಚಿಸಿದ ಕನ್ನಡ ಗ್ರಂಥಗಳು-ಅಕ್ಷಯ ಮತ್ತು ಪ್ರಭವದ ಪರಿಣಾಮ, ಸ್ವಯಂ ಜ್ಯೋತಿರ್ಬೋನಿ (ಗಣಿತಗ್ರಂಥ) ; ಇಂದ್ರಜಾಲ, ವಶಿಷ್ಠನಾರದ ತಪೋಬಲ-ವಿಶ್ವಾಮಿತ್ರ- ಕಾದಂಬರಿ ; ವಿಕ್ಟೋರಿಯಾ ಮಹಾರಾಣಿ, ಸುಖದ ಶೋಧ-ಮುಂತಾದುವು. ತೆಲುಗು ಭಾಷೆಯಲ್ಲಿ-ಮುದಿರಾಜರ ಇತಿಹಾಸ, ಸ್ವಯಂ ಜ್ಯೋತಿರ್ಬೋನಿ. ಇಂಗ್ಲಿಷ್ನಲ್ಲಿ-ಬೃಹತ್ಜಾತಕ, ವಿಜಯನಗರದ ಚರಿತ್ರೆ, ಜೈಮಿನಿಸೂತ್ರ, ಜಾತಕ ಚಂದ್ರಿಕಾ, ಜಾತಕ ಕಲಾನಿ, ಜ್ಯೋತಿಷ ಮಂಜರಿ, ಲೈಫ್ ಆಫ್ ಶಂಕರಾಚಾರ್ಯ, ಲೈಫ್ ಆಫ್ ವಿದ್ಯಾರಣ್ಯ, ಲೈಫ್ ಆಫ್ ವರಹಾಮಿಹಿರ, ಮ್ಯಾನುಯಲ್ ಆಫ್ ಚೆಸ್, ಸಾರಸ್ವತ ಚಿಂತಾಮಣಿ, ಫೈವ್ ಹಂಡ್ರೆಡ್ ಕಾಂಬಿನೇಷನ್ ಆಫ್ ಪ್ಲಾನೆಟ್ಸ್, ಆಟೋಬಯಾಗ್ರಫಿ ಮುಂತಾದ ೭೫ ಇಂಗ್ಲಿಷ್ ಗ್ರಂಥಗಳ ರಚನೆ. ಇವರು ನಿಧನರಾದದ್ದು ೧೯೩೭ರಲ್ಲಿ. ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಪಿ. ಶ್ರೀನಿವಾಸ್ – ೧೯೩೬ ನೀಲಾಂಬಿಕೆ. ಟಿ – ೧೯೫೩ ಅನುಪಮಾ ಚಿಪಳೂಣ್ಕರ್ – ೧೯೫೫
