ಹಟ್ಟಿಯಂಗಡಿ ನಾರಾಯಣರಾಯರು

Home/Birthday/ಹಟ್ಟಿಯಂಗಡಿ ನಾರಾಯಣರಾಯರು
Loading Events
This event has passed.

೧೧-೨-೧೮೬೩ ಹೊಸಗನ್ನಡದ ಅರುಣೋದಯ ಕಾಲದ ಆದ್ಯ ಲೇಖಕರಲ್ಲೊಬ್ಬರು. ಹುಟ್ಟಿದ್ದು ಮಂಗಳೂರಿನಲ್ಲಿ. ಪ್ರಾಥಮಿಕ ಶಿಕ್ಷಣ ಕಾರ್ಕಳದಲ್ಲಿ. ಮಂಗಳೂರಿನ ಸರಕಾರಿ ಕಾಲೇಜಿನಿಂದ ಮೆಟ್ರಿಕ್ಯುಲೇಶನ್, ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಪಡೆದ ಪದವಿ. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭ. ಆದರೆ ಅಧ್ಯಾಪಕ ವೃತ್ತಿಯಿಂದ ತೃಪ್ತರಾಗದೆ ವಕೀಲರಾಗಬೇಕೆಂಬ ಬಯಕೆ. ಕೆಲಸಕ್ಕೆ ರಾಜೀನಾಮೆ ನೀಡಿ ಮದರಾಸಿಗೆ ತೆರಳಿ ಕಾನೂನು ಪದವೀಧರರಾದರು. ನಂತರ ವಕೀಲಿ ವೃತ್ತಿ ಪ್ರಾರಂಭ. ಸಾಹಿತ್ಯ, ಕಲೆ, ಸಾಮಾಜಿಕ ವಿಷಯಗಳಲ್ಲಿ ಬೆಳೆದ ಅಭಿರುಚಿ. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಹವ್ಯಾಸ. ಪತ್ರಿಕಾ ಪ್ರಪಂಚ ಪ್ರವೇಶ. INDIAN SOCIAL REFORMER ಸುಪ್ರಸಿದ್ಧ ವಾರಪತ್ರಿಕೆಯ ಸಂಪಾದಕತ್ವ. ನಂತರ ಮುಂಬೈಗೆ ಹೋಗಿ ಪ್ರಮುಖ ಸುಧಾರಕರಾಗಿದ್ದ ಬಿ.ಎಂ. ಮಲಬಾರಿಯವರ ಸಹಕಾರಿಯಾಗಿ EAST AND WEST ಮತ್ತು INDIAN SPECTATOR ಪತ್ರಿಕೆಗಳ ಸಂಪಾದಕತ್ವ. ಮದ್ರಾಸ್ ಮತ್ತು ಮುಂಬೈ ವಿಶ್ವವಿದ್ಯಾಲಯಗಳ ಕನ್ನಡ ಪರೀಕ್ಷಕ ಜವಾಬ್ದಾರಿ. ಕನ್ನಡದಲ್ಲಿ ಬರವಣಿಗೆ ಪ್ರಾರಂಭಿಸಿದ್ದೇ ೧೯೧೫ರ ವೇಳೆಗೆ. ಅದೇ ವೇಳೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾರಂಭ. ಕನ್ನಡ ಬರವಣಿಗೆಗೆ ಸಿಕ್ಕ ಪ್ರೇರಣೆ. ಮಂಗಳೂರಿನ ‘ಸ್ವದೇಶಾಭಿಮಾನ’, ಧಾರವಾಡದ ವಾಗ್ಭೂಷಣ ಪತ್ರಿಕೆಗಳಲ್ಲಿ ಆಂಗ್ಲ ಕವಿತೆಗಳ ಅನುವಾದ ಪ್ರಕಟ. ಇವರ ‘ಆಂಗ್ಲ ಕವಿತಾನುವಾದ’ ಪ್ರಕಟವಾದುದು ೧೯೧೯ರಲ್ಲಿ. ಬಿ.ಎಂ. ಶ್ರೀಯವರ ಇಂಗ್ಲಿಷ್ ಗೀತೆಗಳು ಪತ್ರಿಕೆಯಲ್ಲಿ ಪ್ರಕಟವಾದುದು ‘ವಿದ್ಯಾದಾಯಿನಿ’ ಪತ್ರಿಕೆಯಲ್ಲಿ ೧೯೧೯ರ ಸುಮಾರು ೧೯೨೧ರಲ್ಲಿ ಹನ್ನೆರಡು ಗೀತೆಗಳ ಪ್ರಕಟಣೆ. ಡಿ.ವಿ.ಜಿಯವರ ‘ಕರ್ನಾಟಕ ಜೀವನ’ ಪತ್ರಿಕೆಯಲ್ಲೂ ಕೆಲವು ಕವನ ೧೯೨೪ರಲ್ಲಿ ಪ್ರಕಟ. ೧೯೨೬ರ ಸುಮಾರಿಗೆ ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತೆಗಳು ಗ್ರಂಥರೂಪ ಪಡೆಯಿತು. ಹಟ್ಟಿಯಂಗಡಿಯವರು ಇದಕ್ಕೆ ಹಿಂದೆಯೇ ಹೊಸಗನ್ನಡ ಕಾವ್ಯಕ್ಕೆ ಶ್ರೀಕಾರ ಹಾಕಿದ್ದರು. ಹಟ್ಟಿಯಂಗಡಿಯವರಿಗೆ ಭಾಷಾಶಾಸ್ತ್ರ, ತತ್ತ್ವಜ್ಞಾನಗಳಲ್ಲಿ  ವಿಶೇಷ ಆಸಕ್ತಿ. ಕನ್ನಡ ಪದಗಳ ಹುಟ್ಟು ಬೆಳವಣಿಗೆ ಸಂಶೋಧನೆ. ಸಂಸ್ಕೃತದಿಂದಷ್ಟೇ ಅಲ್ಲ ಪ್ರಾಕೃತದಿಂದಲೂ ಸ್ವೀಕೃತವಾದ ಪದಗಳ ಪಟ್ಟಿ ಪ್ರಕಟಣೆ. ಮಾತೃಭಾಷೆ ಕೊಂಕಣಿಯಲ್ಲಿ ಚಿಂತನೆ. ‘ಮೂಲಾದರ್ಶೋ’ ಕೃತಿ ಪ್ರಕಟಣೆ. ಬರೆದದ್ದು ಕಡಿಮೆ. ಸತ್ವ ಹಾಗೂ ಮೌಲ್ಯಯುತ. ಆಂಗ್ಲ ಕವಿತೆಗಳು ವಿಸ್ತೃತವಾಗಿ ೧೯೮೫ರಲ್ಲಿ ಪ್ರಕಟ. ರಾಜ್ಯ ಸಾಹಿತ್ಯ ಅಕಾಡಮಿಯಿಂದ ಗದ್ಯ ಸಂಪುಟ ಪ್ರಕಟ. ಆಂಗ್ಲ ಕವಿತಾವಳಿ, ಇಂಗ್ಲಿಷ್ ಕನ್ನಡ ನಿಘಂಟು, ಕನ್ನಡ ಕಥಾನಕ, ಕನ್ನಡ ಕವಿತೆಯ ಭವಿಷ್ಯ ಪ್ರಮುಖ ಕೃತಿಗಳು. ನಿಧನರಾದದ್ದು ೧೭.೬.೧೯೨೧ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಸಿಂಪಿ ಲಿಂಗಣ್ಣ – ೧೯೦೫-೫.೫.೧೯೯೩ ಎಚ್.ಎಲ್. ನಾಗೇಗೌಡ – ೧೯೧೫-೨೨.೯.೨೦೦೫ ಕೆದಂಬಾಡಿ ಜತ್ರಪ್ಪರೈ – ೧೯೧೬-೨೦.೬.೨೦೦೩ ಅಳವಂದಾರ್ ಗೋಪಾಲಾಚಾರ್ – ೧೯೨೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top