ಹಾರ್ಮೋನಿಯಂ ಶೇಷಗಿರಿರಾಯರು

Home/Birthday/ಹಾರ್ಮೋನಿಯಂ ಶೇಷಗಿರಿರಾಯರು
Loading Events

..೧೮೯೨ .೧೦.೧೯೯೦ ವೃತ್ತಿರಂಗಭೂಮಿಯ ಪ್ರಮುಖ ವಾದ್ಯವಾಗಿದ್ದ ಹಾರ್ಮೋನಿಯಂ ವಾದನದ ಕಲೆಯಲ್ಲಿ ಅಪೂರ್ವ ಸಿದ್ಧಿ ಪಡೆದಿದ್ದ, ಹಾರ್ಮೋನಿಯಂ ನ್ನು ಸುಲಭೋಪಯೋಗಿಯಾಗಿ ರೂಪಿಸಿದ ಶೇಷಗಿರಿರಾವ್‌ ಹುಟ್ಟಿದ್ದು ಹಂಪಾಪುರದಲ್ಲಿ ತಂದೆ ಪಾಪಚ್ಚಿ ಕೃಷ್ಣಾಚಾರ್ಯರು, ತಾಯಿ ಕನಕಲಕ್ಷ್ಮಮ್ಮ. ಎಂಟನೆಯ ವಯಸ್ಸಿಗೆ ಸೇರಿದ್ದು ಎ.ವಿ. ವರದಾಚಾರ್ಯರ ರತ್ನಾವಳಿ ಥಿಯಟ್ರಿಕಲ್‌  ಕಂ. ಲೋಹಿತಾಶ್ವ ಮುಂತಾದ ಬಾಲ ಪಾತ್ರಗಳ ನಿರ್ವಹಣೆ. ಮಂದಾರವಲ್ಲಿ, ಮೋಹನ ಮುಂತಾದ ಹೆಣ್ಣು ಪಾತ್ರಗಳು, ಹಾರ್ಮೋನಿಯಂ ವಾದನದಲ್ಲಿ ಆಸ್ಥೆ ಬೆಳೆದು, ವರದಾಚಾರ್ಯರ ಅಪೇಕ್ಷೆಯಂತೆ ಮುಂಬಯಿಯ ಚಮನ್‌ಲಾಲ್‌ ಬಳಿ ಹಾರ್ಮೋನಿಯಂ ಕಲಿಕೆ, ಉಸ್ತಾದ್‌ ಕರೀಂಖಾನರಿಂದ ಹಿಂದುಸ್ತಾನಿ, ಮೈಸೂರು ವಾಸುದೇವಾಚಾರ್ಯರ ಬಳಿ ಕರ್ನಾಟಕ ಸಂಗೀತಾಭ್ಯಾಸ. ರಂಗಭೂಮಿಯ ಮೇಲೆ ಹಾರ್ಮೋನಿಯಂ ವಾದ್ಯವನ್ನು ತಂದ ಕೀರ್ತಿ. ಹಾಡುಗಳಿಗೆ ಕರ್ನಾಟಕ ಸಂಗೀತದ ಜೊತೆಗೆ ಹಿಂದೂಸ್ತಾನಿ ರಾಗಗಳ ಅಳವಡಿಕೆ. ಪ್ರಹ್ಲಾದ, ಧ್ರುವ ಚರಿತ್ರೆ, ವಿಷ್ಣುಲೀಲೆ ಮುಂತಾದ ನಾಟಕಗಳಿಗೆ ನೀಡಿದ ಹಾರ್ಮೋನಿಯಂ ವಾದ್ಯ ಸಂಗೀತ. ಶ್ರೀ ರಘುರಾಮ ವಿಠಲರು ಅಂಕಿತದಲ್ಲಿ ರಚಿಸಿದ ಹಲವಾರು ದೇವರ ನಾಮಗಳು. ಕನ್ನಡ ಚಲನಚಿತ್ರರಂಗದಲ್ಲೂ ಮೊದಲ ಸಂಗೀತ ನಿರ್ದೇಶಕರೆಂದು ಪಡೆದ ಖ್ಯಾತಿ. ವರದಾಚಾರ್ಯರ ಸೋದರಸೊಸೆ ನಿರ್ಮಿಸಿದ ಭಕ್ತಧ್ರುವ (೨ನೇ ವಾಕ್‌ ಚಿತ್ರ) ಚಿರಂಜೀವಿ, ಭಕ್ತ ಮಾರ್ಕಂಡೇಯ, ಜೀವನ ನಾಟಕ, ವಾಣಿ ಮುಂತಾದ ಚಿತ್ರಗಳಿಗೆ ನೀಡಿದ ಸಂಗೀತ. ಕೊಲಂಬಿಯ ಗ್ರಾಮಾಫೋನ್‌ ಕಂಪನಿಯಿಂದ ಇವರ ಸೋಲೋ ಹಾರ್ಮೋನಿಯಂ ವಾದನದ ಹಲವಾರು ಧ್ವನಿಮುದ್ರಿಕೆಗಳ ಬಿಡುಗಡೆ. ೧೯೭೭ರಲ್ಲಿ ನಡೆದ ಕರ್ನಾಟಕ ಗಾನಕಲಾ ಪರಿಷತ್ತಿನ  ವಿದ್ವಾಂಸರ ೭ನೇ ಸಮ್ಮೇಳನದಲ್ಲಿ ಸನ್ಮಾನ.   ಇದೇ ದಿನ ಹುಟ್ಟಿದ ಕಲಾವಿದರು: ದೊರೆಸ್ವಾಮಿ ಬಿ – ೧೯೨೦ ಗಣೇಶ್‌ ಬಿ. ಶಿರೋಳ – ೧೯೩೬ ವಸಂತ ಅಣ್ಣಾರಾವ್‌ ಕುಲಕರ್ಣಿ – ೧೯೪೭ ಪದ್ಮಿನಿ ರವಿ – ೧೯೫೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top