Loading Events

« All Events

  • This event has passed.

ಹಾ.ಮಾ. ನಾಯಕ

September 12, 2023

೧೨-೯-೧೯೩೧ ೧೦-೧೧-೨೦೦೦ ಮಹತ್ವದ ಗದ್ಯಲೇಖಕರಲ್ಲೊಬ್ಬರಾದ ಹಾ.ಮಾ.ನಾ. ರವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ. ತಂದೆ ಶ್ರೀನಿವಾಸ ನಾಯಕರು, ತಾಯಿ ರುಕ್ಮಿಣಿಯಮ್ಮ. ಪ್ರಾರಂಭಿಕ ಶಿಕ್ಷಣ ಮೇಗರವಳ್ಳಿ, ತೀರ್ಥಹಳ್ಳಿಯಲ್ಲಿ ಇಂಟರ್ ಮೀಡಿಯೆಟ್ ಶಿವಮೊಗ್ಗ ಪ್ರಥಮ ದರ್ಜೆ ಕಾಲೇಜು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್-೧೯೫೫) ಮತ್ತು ಕೊಲ್ಕತಾ ವಿಶ್ವವಿದ್ಯಾಲಯದಿಂದ ಭಾಷಾ ಶಾಸ್ತ್ರದಲ್ಲಿ ಎಂ.ಎ. ಪದವಿ. (೧೯೫೮). ಶಿವಮೊಗ್ಗ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕ. ನಂತರ ಮೈಸೂರು ವಿ.ವಿ.ದಲ್ಲಿ ಭಾಷಾ ಶಾಸ್ತ್ರದ ರೀಡರ್ ಆಗಿ, ಮಾನಸ ಗಂಗೋತ್ರಿಯ ಸ್ನಾತಕೋತ್ತರ ಕನ್ನಡ ಕೇಂದ್ರದಲ್ಲಿ ಕಾರ‍್ಯ ನಿರ್ವಹಣೆ, ಫುಲ್‌ಬ್ರೈಟ್ ವಿದ್ಯಾರ್ಥಿ ವೇತನ ಪಡೆದು ಅಮೆರಿಕದ ಇಂಡಿಯಾನ ವಿ.ವಿ.ದಲ್ಲಿ ಅಧ್ಯಯನ ನಡೆಸಿ ‘ಕನ್ನಡ ಸಾಹಿತ್ಯ ಮತ್ತು ಆಡುಭಾಷೆ’ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ನಂತರ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕುಲಪತಿಗಳಾಗಿ ಸಲ್ಲಿಸಿದ ಸೇವೆ. ಸುಮಾರು ೨೯ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಡೆದ ಪಿಎಚ್.ಡಿ. ಪದವಿ. ಚಿಕ್ಕಂದಿನಿಂದಲೂ ಸಾಹಿತ್ಯದ ಗೀಳು. ಎಸ್.ಎಸ್.ಎಲ್.ಸಿ. ಓದುತ್ತಿದ್ದಾಗಲೇ ‘ಬಾಳ್ನೋಟಗಳು’ ಪ್ರಬಂಧ ಸಂಕಲನ ಪ್ರಕಟಣೆ. ಒಟ್ಟು ೧೩೦ಕ್ಕೂ ಹೆಚ್ಚು ಕೃತಿ ರಚನೆ. ವೈವಿಧ್ಯಮಯ ವಿಷಯಗಳಿಂದ ಕೂಡಿ, ನಾಡಿನ ಪ್ರಖ್ಯಾತ ಪತ್ರಿಕೆಗಳಿಗೆಲ್ಲಕ್ಕೂ ಬರೆದ ಅಂಕಣಬರಹಗಳದ್ದೇ ವಿಶಿಷ್ಟ ರೀತಿ. ಸಾಹಿತ್ಯ ಸಲ್ಲಾಪ, ಸಲ್ಲಾಪ, ಸಂಪುಟ, ಸಂಪದ ಮೊದಲ್ಗೊಂಡು ಸಾರಸ್ವತದವರೆಗೆ ಬರೆದ ೧೯ ಲೇಖನ ಸಂಗ್ರಹಗಳು. ಅಂಕಣ ಬರಹ ಸಂಗ್ರಹ ‘ಸಂಪ್ರತಿಗೆ’ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಹಲವಾರು ವ್ಯಕ್ತಿಚಿತ್ರ, ಸಂಕೀರ್ಣ, ಸೃಜನಶೀಲ ಕೃತಿಗಳ ರಚನೆ. ಅಕ್ಕಮಹಾದೇವಿ, ಆಲೂರು ವೆಂಕಟರಾಯರು, ಭಾರತೀಯ ಸಾಹಿತ್ಯದಲ್ಲಿ ಗಾಂಜಿ, ಕಾವ್ಯ ಕಾರಂಜಿ, ಕಾವ್ಯದೀಪ ಮುಂತಾದ ಕೃತಿಗಳು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಹಿಡಿದು, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡಮಿ, ನ್ಯಾಷನಲ್ ಬುಕ್ ಟ್ರಸ್ಟ್, ತುಳಸೀ ಸಮ್ಮಾನ್ ಸಮಿತಿ…ಹೀಗೆ ರಾಜ್ಯ ಹೊರರಾಜ್ಯದ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳೊಡನೆ ಹೊಂದಿದ್ದ ಜವಾಬ್ದಾರಿಯುತ ಸಂಬಂಧಗಳು. ಹಲವಾರು ಬಾರಿ, ವಿದೇಶ ಸಂಚಾರ. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಸ.ಸ. ಮಾಳವಾಡ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಸುವರ್ಣಮಹೋತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು. ಅರ್ಪಿಸಿದ ಗ್ರಂಥ ‘ಮಾನ’, ‘ನಮ್ಮ ನಾಯಕರು’, ಹಾ.ಮಾ.ನಾ. ಸಮಗ್ರ ಸಾಹಿತ್ಯ ಕೃತಿ ವಿವರ, ಡಾ.ಎಚ್.ಎಸ್. ಸುಜಾತರವರ ‘ಹಾಮಾನಾ ಹೊತ್ತಗೆಗಳು.’   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ.ವಿ. ತಿರುಮಲೇಶ್ – ೧೯೪೦ ಪದ್ಮ ಗುರುರಾಜ್ – ೧೯೪೨ ಕೆ. ಸರೋಜ – ೧೯೪೬ ಮಠಪತಿ. ಆರ್.ಜಿ. – ೧೯೭೧

Details

Date:
September 12, 2023
Event Category: