Loading Events

« All Events

  • This event has passed.

ಹಿರಿಯೂರು ಸತ್ಯನಾರಾಯಣ

October 3, 2023

೦೩.೧೦.೧೯೩೧ ಅಸ್ಖಲಿತ ಕಂಠದ, ಗಂಡುಧ್ವನಿಯ ಸುಗಮಸಂಗೀತದ ಹಾಡುಗಾರ ಸತ್ಯನಾರಾಯಣರವರು ಹುಟ್ಟಿದ್ದು ಮೈಸೂರಿನ ಸಂಗೀತಗಾರರ ವಂಶ. ಮೈಸೂರು ಅರಮನೆಯ ವಿದ್ವಾಂಸರಾಗಿದ್ದ ಚಿಕ್ಕರಾಮರಾಯರು ಇವರ ತಾತ. ತಂದೆ ಎಚ್‌. ಎಸ್. ವೆಂಕಟರಾವ್, ತಾಯಿ ವೆಂಕಮ್ಮ. ಓದಿದ್ದು ಹಿರಿಯೂರು, ಚಿತ್ರದುರ್ಗ. ಉದ್ಯೋಗ ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ.ಯಲ್ಲಿ. ೧೫ರ ವಯಸ್ಸಿನಲ್ಲಿಯೇ ಹಾಡಲು ಪ್ರಾರಂಭ. ವಿಜಯ ಕಲಾವಿದರು ನಾಟಕ ಸಂಸ್ಥೆಯ ಮೂಲಕ ವಹಿಸಿದ್ದು ಸೂತ್ರಧಾರನ ಪಾತ್ರ. ಅನಕೃ, ದೇವುಡು, ಕ್ಷೀರಸಾಗರರ ನಾಟಕಗಳಲ್ಲಿ ಮತ್ತು ದೇವಯಾನಿ, ಎಚ್ಚಮನಾಯಕ, ಪಂಗನಾಮ, ಸ್ವರ್ಣಮೂರ್ತಿ, ಹಿರಣ್ಯಕಶಿಪು, ಸಾಮ್ರಾಟ್ ಷಹಜಾನ್, ಬಕಪಕ್ಷಿ, ಕೈವಾರ ರಾಜಾರಾಯರ ಅನೇಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರಿನ ಕಲಾಬಳಗಕ್ಕಾಗಿ ಹಲವಾರು ನಾಟಕಗಳ ನಿರ್ದೇಶನ. ದಾರಿಯಾವುದಯ್ಯ ಮುಂದೆ, ಆತ್ಮಯಾವಕುಲ ಜೀವಯಾವಕುಲ, ಸ್ವರ್ಣಮೂರ್ತಿ, ಹಿರಣ್ಯಕಶಿಪು, ಕೂಸು ಹುಟ್ಟೋಕ್‌ ಮುಂಚೆ, ಸುಳಿಯಲ್ಲಿ ಸಿಕ್ಕವರು ಮುಂತಾದುವು. ಹಳ್ಳಿ ಚಿತ್ರ, ಗಾಂಪರ ಗುಂಪು, ರಕ್ತಾಕ್ಷಿ, ಎಲ್ಲರೂ ನಮ್ಮವರೇ ಮುಂತಾದ ನಾಟಕಗಳ ನಟನೆಗೆ ಸಂದ ಪ್ರಶಂಸೆ. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಮದ್‌ ರಫಿ, ಸೈಗಾಲ್‌, ಮನ್ನಾಡೆಯವರ ಹಿಂದಿ ಚಿತ್ರಗೀತೆಗಳನ್ನು ಅನುಕರಿಸುತ್ತಿದ್ದ ಸತ್ಯನಾರಾಯಣರು, ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹಾಡಲು ಪ್ರಾರಂಭಿಸಿದ್ದು ಕನ್ನಡ ಹಾಡುಗಳು. ಬೇಂದ್ರೆಯವರ ಸಮ್ಮುಖದಲ್ಲಿ, ತುಮಕೂರಿನಲ್ಲಿ ಹಾಡಿದ್ದು ಇಳಿದು ಬಾ ತಾಯಿ…, ಬೇಂದ್ರೆಯವರಿಂದ ಬಂದ ಪ್ರಶಂಸೆ. ಭಕ್ತಿಗೀತೆ, ಭಾವಗೀತೆ, ಜನಪದಗೀತೆಗಳ ಗಾಯನ. ಕಾಳಿಂಗರಾಯರೊಡನೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ. ನಮ್ಮ ಮನೆಯಲ್ಲೊಂದು ಸಂಜೆ(ತಿಂಗಳ ಕಾರ್ಯಕ್ರಮ) ಪರಸ್ಪರ ಸಂಸ್ಥೆಯ ಮೂಲಕ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಗಳಲ್ಲೊಬ್ಬರು. ನಾನೇ ಬಡವ ಕ್ಯಾಸೆಟ್‌ ಬಿಡುಗಡೆ. ಮೇರುನಟ ರಾಜ್‌ಕುಮಾರ್‌ರವರಿಂದ ಪಾರಿತೋಷಕ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು.   ಇದೇದಿನಹುಟ್ಟಿದಕಲಾವಿದರು ವೇಷಗಾರ ಪ್ರಹ್ಲಾದ – ೧೯೨೫ ರುಕ್ಮಿಣಿ – ೧೯೬೪

* * *

Details

Date:
October 3, 2023
Event Category: