ಹೀ.ಚಿ. ಶಾಂತವೀರಯ್ಯ

Home/Birthday/ಹೀ.ಚಿ. ಶಾಂತವೀರಯ್ಯ
Loading Events

೧೧-೬-೧೯೩೪ ನಿರೂಪಣಾ ಚತುರ, ನಡೆದಾಡುವ ನಿಘಂಟು ಎಂದೇ ಪ್ರಸಿದ್ಧರಾದ ಶಾಂತವೀರಯ್ಯನವರು ಹುಟ್ಟಿದ್ದು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಪ್ರಸಿದ್ಧ ಮನೆತನದಲ್ಲಿ. ತಂದೆ ಚಿಕ್ಕಯ್ಯ, ತಾಯಿ ಚಿಕ್ಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹೀಚನೂರು, ತಿಪಟೂರಿನಲ್ಲಿ. ಕಾಲೇಜು ವಿದ್ಯಾಭ್ಯಾಸ ದಾವಣಗೆರೆ, ಮೈಸೂರು. ಬೆಂಗಳೂರಿನಲ್ಲಿ ಬಿ.ಎ. (ಆನರ್ಸ್) ಎಂ.ಎ. ಮತ್ತು ಬಿ.ಇಡಿ ಪದವಿ. ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ತಿಪಟೂರು, ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ, ನಿವೃತ್ತಿ. ಬಸವಪಥ, ಜನಪದ, ಸಿದ್ಧಗಂಗೆ, ಕನ್ನಡನುಡಿ, ಪ್ರಸಾದ, ತರಳಬಾಳು, ಪ್ರಜಾವಾಣಿ, ಪ್ರಜಾಮತ, ಸುಧಾ, ವಿನೋದ ಮುಂತಾದ ಪತ್ರಿಕೆಗಳಲ್ಲಿ ನೂರಾರು ಲೇಖನಗಳು ಪ್ರಕಟಿತ. ತಾಯಿನಾಡು ಪತ್ರಿಕೆಯಲ್ಲಿ ‘ಕನ್ನಡ ಸಾಹಿತ್ಯ ಸಂಚಯ’ ಎಂಬ ಅಂಕಣದಲ್ಲಿ ಇಡೀ ವರ್ಷ ಬರೆದ ಲೇಖನಮಾಲೆ. ‘ವಿನೋದ ದಾಸ’ ಎಂಬ ಗುಪ್ತನಾಮದಿಂದ ಬರೆದ ಹಲವಾರು ನಗೆಬರಹಗಳು. ಕನ್ನಡ ನಾಡು ನುಡಿಯ ಬಗ್ಗೆ ತಿಳಿಸಲು ಸಂಚಾರ, ಧಾರ್ಮಿಕ ಸಭೆ, ಶರಣ ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಗೋಷ್ಠಿ, ಸಮ್ಮೇಳನ ಸಮಾವೇಶಗಳಲ್ಲಿ, ಸಂಶೋಧನಾತ್ಮಕ ಉಪನ್ಯಾಸ ಪ್ರಬಂಧ ಮಂಡನೆ. ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ, ಅಂಬೇಡ್ಕರ್ ನರ್ಸಿಂಗ್ ಕಾಲೇಜು, ಮೈಕೋ, ಪರಿಸರ ಮಾಲಿನ್ಯ ನಿಯಂತ್ರಣ ಕೇಂದ್ರ ಕಚೇರಿ, ಸಿಡ್ಯಾಕ್ ಮುಂತಾದೆಡೆ ಕನ್ನಡೇತರರಿಗೆ ಕನ್ನಡ ಕಲಿಸಿ, ಕನ್ನಡದ ಬಗ್ಗೆ ಬೆಳೆಸಿದ ಕನ್ನಡದ ಪ್ರೇಮ. ನೊಳಂಬ ವೀರಶೈವ ಸಂಘ, ಅಖಿಲ ಕರ್ನಾಟಕ ವೀರಶೈವ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ಕಲ್ಯಾಣ ಮಿಷನ್, ಮನುವನ ನಿವಾಸಿ ಸಂಘ, ಮಿತ್ರ ವೃಂದ, ಅಖಿಲ ಭಾರತ ನಗೆ ಬರಹಗಾರರ ಸಂಘ, ಬಿ.ಎಂ.ಶ್ರೀ. ಪ್ರತಿಷ್ಠಾನ ಮುಂದತಾದೆಡೆ ಸದಸ್ಯರಾಗಿ, ವೀರಶೈವ ಮಠಗಳ ಆಸ್ಥಾನ ವಿದ್ವಾಂಸರಾಗಿ, ಶಿಕ್ಷಣ ಸಂಸ್ಥೆಗಳ ಸಲಹೆಗಾರರಾಗಿ ಸೇವೆ. ಅರವತ್ತಕ್ಕೂ ಹೆಚ್ಚು ಗ್ರಂಥ ರಚನೆ. ಕನ್ನಡ ನಿಘಂಟು, ಸಾವಿರದ ಕೋಶ, ಹರಭಕ್ತಿಸಾರ, ಗಾದೆಗಳ ಸಾರ, ಒಗಟಿನಾಗರ, ಶಾಸನ ಪರಿಚಯ, ಶರಣ ಸಂಪದ, ಇವು ಸಂಪಾದಿತ ಕೃತಿಗಳು. ನಿಟ್ಟೂರು ಶಾಂತಿನಾಥ, ಬಿ. ಪುಟ್ಟಸ್ವಾಮಯ್ಯ, ಉಕ್ಕಡಗಾತ್ರಿ ಕರಿಬಸವೇಶ್ವರರು, ಐಜಿಪಿ ವೀರಭದ್ರಯ್ಯ, ಕೆ.ಎಸ್. ರಾಜಪ್ಪ-ವ್ಯಕ್ತಿಚಿತ್ರಗಳು. ಜನಪದಗೀತೆ, ಕನ್ನಡ ಜನಪದ ಗೀತೆಗಳು-ಜನಪದ ಗ್ರಂಥಗಳು ಪ್ರಕಟಿತ ಕೃತಿಗಳಲ್ಲಿ ಕೆಲವು. ಸಂದ ಗೌರವ ಪ್ರಶಸ್ತಿಗಳು. ರಾಜ್ಯೋತ್ಸವ ಪ್ರಶಸ್ತಿ, ಕಿಟಲ್ ಪ್ರಶಸ್ತಿ, ಸ್ಪಂದನ ಪ್ರಶಸ್ತಿ, ಶಿವಲಿಂಗ ಪ್ರಶಸ್ತಿ, ಮಠಾಪತಿಗಳ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಜಂಗಮ ವಿಶ್ವಕೋಶ, ನಡೆದಾಡುವ ನಿಘಂಟು ಮುಖ್ಯವಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ತಿಪ್ಪೇಸ್ವಾಮಿ – ೧೯೪೮ ಎಚ್.ಪಿ. ಫಿಲೋಮಿನ – ೧೯೫೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top