ಹುಣಸೂರು ಕೃಷ್ಣಮೂರ್ತಿ

Home/Birthday/ಹುಣಸೂರು ಕೃಷ್ಣಮೂರ್ತಿ
Loading Events
This event has passed.

೯-೨-೧೯೧೪ ೧೩-೧-೧೯೮೯ ಹುಟ್ಟಿದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ತಂದೆ ರಾಜಾರಾಯರು, ತಾಯಿ ಪದ್ಮಾವತಮ್ಮ. ತಾಯಿ ಹೇಳುತ್ತಿದ್ದ ಪೌರಾಣಿಕ ಕಥೆಗಳಿಂದ ಆದ ಪ್ರಭಾವ. ಹೈಸ್ಕೂಲಿಗೆ ಸೇರಿದ್ದು ಮೈಸೂರು. ಪಠ್ಯೇತರ ಚಟುವಟಿಕೆಗಳಲ್ಲೇ ಆಸಕ್ತಿ. ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ನಾಟಕಾಭಿನಯಕ್ಕೆ ಪಡೆದ ೧೦೧ ರೂ. ಬಹುಮಾನ. ಓದಿಗಿಂತ ನಾಟಕದ ಕಡೆ ಹೆಚ್ಚಿನ ಗಮನ. ಬಣ್ಣದ ಗೀಳುಹತ್ತಿ ನಡೆದುದು ಮುಂಬಯಿಗೆ. ಚಿಕ್ಕಪುಟ್ಟ ಪಾತ್ರಗಳ ಜೊತೆಗೆ ‘ಬಾಲಗಂಧರ್ವ ನಾಟಕ ಸಭಾ’ದ ಕೃಷ್ಣರಾವ್ ಬಳಿ ಕಲಿತದ್ದು ಹಾಡುಗಾರಿಕೆ ಮತ್ತು ವಾದ್ಯ ಸಂಗೀತ. ಪೆಂಡಾರ್ ಕರ್, ಸರ್ ನಾಯಕ್ ಮುಂತಾದವರ ವೃತ್ತಿ ನಾಟಕ ಕಂಪನಿಯಲ್ಲಿ ಅಭಿನಯ ಕಲೆ ಮತ್ತು ನಾಟಕದ ಇತರ ವಿಭಾಗದ ಕೆಲಸ ಕಲಿಕೆ. ಪ್ರಸಿದ್ಧ ನಟನಟಿಯರಾದ ಅಶೋಕ್‌ಕುಮಾರ್, ದೇವಿಕಾರಾಣಿ, ವಿ. ಶಾಂತಾರಾಮ್, ಹಿಮಾಂಶು ರಾಯ್ ಮುಂತಾದವರೊಡನೆ ನಿಕಟ ಸಂಪರ್ಕ. ಗರೂಡ ಸದಾಶಿವರಾಯರ ‘ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಲಿ’ ಗದಗ ಮುಂಬಯಿಗೆ ಬಂದಾಗ ಅಲ್ಲಿ ಪ್ರವೇಶ ಪಡೆದು ಅಭಿನಯಿಸಿದ್ದು ಹಲವಾರು ನಾಟಕಗಳು. ಪೀರ್ ಸಾಹೇಬರ ಚಂದ್ರಕಲಾ ನಾಟಕ ಮಂಡಲಿ ಕಂಪನಿಯಲ್ಲಿ ನಟ ಹಾಡುಗಾರರಾಗಿ ಗಳಿಸಿದ ಜನಮೆಚ್ಚುಗೆ. ವೀರ್ ಸಾಹೇಬರ ನಿಧನಾ ನಂತರ ಹೊತ್ತ ಕಂಪನಿಯ ಜವಾಬ್ದಾರಿ. ಗುಬ್ಬಿವೀರಣ್ಣನವರ ‘ಶ್ರೀ ಗುಬ್ಬಿ ಚನ್ನಬಸವೇಶ್ವರ ಸ್ವಾಮಿ ನಾಟಕ ಸಂಘ’ದಲ್ಲಿ ನಟರಾಗಿ, ಸಾಹಿತಿಯಾಗಿ. ರಾಜಾಗೋಪಿಚಂದ್, ನಾಟಕದ ಸಂಭಾಷಣೆಯಿಂದ ಗಳಿಸಿದ ಖ್ಯಾತಿ. ರಾಜಮನ್ನಣೆಗಳಿಸಿದ ನಾಟಕ. ಟಿ.ಪಿ. ಕೈಲಾಸಂ, ಎಚ್.ಎಲ್.ಎನ್. ಸಿಂಹ ರವರುಗಳ ಸಮೀಪವರ್ತಿಯಾಗಿ ಗಳಿಸಿದ ಅನುಭವ. ಚಿತ್ರರಂಗದಲ್ಲೂ ದುಡಿಮೆ. ಹತ್ತಿದ ರಂಗಭೂಮಿ ಗೀಳಿನಿಂದ, ಭಾರತ ನಾಟಕ ಸಂಸ್ಥೆಯಲ್ಲಿ ಸಂಸಾರ ನೌಕದಲ್ಲಿ ನಟಿಸುತ್ತಲೇ ಧರ್ಮರತ್ನಾಕರ ನಾಟಕ ರಚನೆ. ಮತ್ತೊಂದು ಮಹೋನ್ನತ ನಾಟಕ ಗೌತಮ ಬುದ್ಧ ರಚನೆ. ವೃತ್ತಿ ರಂಗಭೂಮಿ ಅವನತಿ ಪ್ರಾರಂಭವಾದಾಗ ತೊಡಗಿಸಿಕೊಂಡದ್ದು ಹವ್ಯಾಸಿ ರಂಗಭೂಮಿಯಲ್ಲಿ, ಸಾಮಾಜಿಕ ಅನಿಷ್ಟಗಳ ಮೇಲೆ ಬೆಳಕು ಚೆಲ್ಲುವಂತಹ ನಾಟಕ ರಚನೆ, ಪ್ರಯೋಗ. ಕನ್ನಡದಲ್ಲಿ ವಾಕ್ ಚಿತ್ರ ಪ್ರಾರಂಭವಾದಾಗ ಕ್ರಮೇಣ ಚಿತ್ರರಂಗದತ್ತ ಮೂಡಿದ ಆಕರ್ಷಣೆ. ಮೈಸೂರಿನ ನವಜ್ಯೋತಿ ಸ್ಟುಡಿಯೋಸ್, ಮಹಾತ್ಮ ಪಿಕ್ಚರ್ ಜೊತೆ ಸೇರಿ ಚಿತ್ರ ತಯಾರಿಕೆಯ ಎಲ್ಲ ಪ್ರಕಾರಗಳಲ್ಲೂ ಗಳಿಸಿದ ಅನುಭವ, ಮಹಾತ್ಮ ಪಿಕ್ಚರ್ಸ್‌ಗೆ ಸಾಹಿತಿಯಾಗಿ, ನಟನಾಗಿ ಗಳಿಸಿದ ಜನಪ್ರಿಯತೆ. ಹೆಸರಿಲ್ಲದೆ ಹಲವಾರು ಚಿತ್ರಗಳ ನಿರ್ದೇಶನದ ಹೊಣೆ. ಕೃಷ್ಣ ಗಾರುಡಿ ಇವರ ಹೆಸರಿನ ಪ್ರಥಮ ನಿರ್ದೇಶಿತ ಚಿತ್ರ, ನಂತರ ಆಶಾಸುಂದರಿ, ರತ್ನಮಂಜರಿ, ವೀರ ಸಂಕಲ್ಪ, ಮದುವೆ ಮಾಡಿನೋಡು, ಸತ್ಯ ಹರಿಶ್ಚಂದ್ರ, ಬಭ್ರುವಾಹನ, ಭಕ್ತ ಸಿರಿಯಾಳ, ಭಕ್ತ ಕುಂಬಾರ ಮುಂತಾದ ೨೦ಕ್ಕೂ ಹೆಚ್ಚು ಚಿತ್ರ ನಿರ್ದೇಶನ. ೪೦೦ಕ್ಕೂ ಹೆಚ್ಚು ಅರ್ಥಗರ್ಭಿತ ಗೀತೆಗಳ ರಚನೆ. ರಾಜ್ಯ ಸರಕಾರ ಸ್ಥಾಪಿಸಿದ ಪುಟ್ಟಣ್ಣ ಕಣಗಲ್ ಪ್ರಶಸ್ತಿ ಪಡೆದ ಮೊದಲಿಗರೆಂಬ ಹೆಗ್ಗಳಿಕೆ.   ಇದೇ ದಿನ ಹುಟ್ಟಿದ ಕಲಾವಿದರು : ಕೆ.ಎಸ್. ಛಾಯಾಪತಿ – ೧೯೧೯ ನರಸಿಂಹಮೂರ್ತಿ ದಾಸ್ ಸಿ.ವಿ. – ೧೯೨೫ ಶ್ರೀನಿವಾಸದಾಸ್ ಎಸ್.ವಿ. – ೧೯೩೨ ಗೀತಾ ಸದಾನಂದ ಜವಡೇಕರ – ೧೯೫೩ ರಜನಿ ರಘುನಾಥ ಕುಲಕರ್ಣಿ – ೧೯೬೯

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top