Loading Events

« All Events

  • This event has passed.

ಹುರುಳಿ ಭೀಮರಾವ್

August 4

೪-೮-೧೮೮೫ ೪-೮-೧೯೭೦ ಪತ್ರಿಕೋದ್ಯಮಿ, ಸಾಹಿತಿ, ಭೀಮರಾವ್‌ರವರು ಹುಟ್ಟಿದ್ದು ೧೮೮೫ನೇ ಇಸವಿ. ಶಿವಮೊಗ್ಗ ಜಿಲ್ಲೆಯ ಹುರುಳಿ ಗ್ರಾಮದಲ್ಲಿ. ತಂದೆ ಶಾಮರಾಯರು, ತಾಯಿ ಭಿಷ್ಟಮ್ಮ ಪ್ರಾಥಮಿಕ ವಿದ್ಯಾಬ್ಯಾಸ ಉಡುಪಿ, ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ, ನಂತರ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಹಲವಾರು ಕ್ಷೇತ್ರಗಳು. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಕಲ್ಲಿಕೋಟೆ ಕಾಲೇಜೊಂದರಲ್ಲಿ ಕನ್ನಡ ಅಧ್ಯಾಪಕರಾಗಿ, ಕಲ್ಲಿಕೋಟೆಯ ನೆಡುಂಗಾಡಿ ಬ್ಯಾಂಕ್ ಪ್ರಾರಂಭವಾದಾಗ ಬ್ಯಾಂಕ್ ಉದ್ಯೋಗಿಯಾಗಿ ಸೇರಿ, ಬ್ಯಾಂಕ್ ಸ್ಥಗಿತಗೊಂಡಾಗ ಪತ್ರಿಕೋದ್ಯಮವನ್ನು ಆಯ್ದುಕೊಂಡರು. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಪ್ರಾರಂಭ. ಅನೇಕ ಲೇಖನಗಳು ಶ್ರೀಕೃಷ್ಣಸೂಕ್ತಿ, ಕಂಠೀರವ, ಸ್ವದೇಶಾಭಿಮಾನಿ, ಸ್ವಾ, ತಿಲಕ ಸಂದೇಶ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ. ೧೯೧೯ರಲ್ಲಿ ಕಂಠೀರವ ಪತ್ರಿಕೆಯಲ್ಲಿ ಹಂಗಾಮಿ ಸಂಪಾದಕರ ಹುದ್ದೆ. ೧೯೩೨ರ ವೇಳೆಗೆ ಪೂರ್ಣಾವ ಸಂಪಾದಕರ ಜವಾಬ್ದಾರಿ. ಸುಮಾರು ೩೫ ವರ್ಷಕಾಲ (೧೯೬೭ರಲ್ಲಿ ನಿಲ್ಲುವವರೆಗೂ) ಒಂದು ಪತ್ರಿಕೆಯನ್ನು ಸತತವಾಗಿ ನಡೆಸಿದ ಕೀರ್ತಿ. ಕಂಠೀರವ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ‘ಗುಂಡನ ಗೆಜೆಟ್’ ಬಹುಪ್ರಸಿದ್ಧಿ ಪಡೆದ ಕಾಲಂ. ಹಲವಾರು ಕೃತಿ ರಚನೆ. ಐತಿಹಾಸಿಕ ಕಾದಂಬರಿ-ತಾರ (೧೯೧೩). ಅನುವಾದಿತ ಕಾದಂಬರಿ-ಪಾಪ ಪುಣ್ಯ (೧೯೨೩). ನೀಳ್ಗತೆ-ಹಾಸನದ ಟೋಪಿ (೧೯೩೨). ಮಕ್ಕಳ ಕಥೆಗಳು- ಪಾಪೋಸಿನ ಪಜೀತಿ, ಗುಬ್ಬಿಪಾಯಸ, ಗಡ್ಡದ ಅಜ್ಜಯ್ಯ. ನಾಟಕಗಳು-ರಜಿಯಾ ಬೇಗಂ, ಮುರುಕು ದಂಬೂಕು, ಆಧುನಿಕ ಭಾರತ. ಹಾಸ್ಯ ತುಣುಕುಗಳು-ಸ್ವಲ್ಪ ನಗಬಾರದೆ. ಮುರುಕು ದಂಬೂಕು, ಹಾಸನ ಟೋಪಿ ಇವೆರಡೂ ಕ್ರಮವಾಗಿ ಟ್ರಾಮ್‌ಬ್ರೌನ್ಸ್ ಸ್ಕೂಲ್‌ಡೇಸ್, ರಿಪ್‌ವ್ಯಾನ್ ವಿಂಕಲ್ ಕೃತಿ ಆಧಾರಿತ. ೧೯೬೦ರಲ್ಲಿ ಮಣಿಪಾಲದಲ್ಲಿ ನಡೆದ ೪೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಕುರಿತು ಮಾಡಿದ ವಿಚಾರಪೂರಿತ ಭಾಷಣ. ಯಕ್ಷಗಾನ, ನಾಟಕಾಭಿನಯದಲ್ಲೂ ಅಪಾರ ಆಸಕ್ತಿ. ಮುದ್ದಣನನ್ನು ಹತ್ತಿರದಿಂದ ಬಲ್ಲವರಷ್ಟೇ ಅಲ್ಲದೆ ಮುದ್ದಣ, ನಂದಳಿಕೆ ಲಕ್ಷ್ಮೀ ನಾರಾಯಣಯ್ಯ ಇಬ್ಬರೂ ಒಬ್ಬರೇ ವ್ಯಕ್ತಿ ಎಂದು ಸಾಬೀತು ಪಡಿಸಿ ಮುದ್ದಣನಿಗೆ ಮಾನ್ಯತೆ ತಂದುಕೊಟ್ಟು ಮುದ್ದಣನನ್ನು ‘ನವೋದಯ ಕಾವ್ಯದ ಮುಂಗೋಳಿ’ ಎಂದು ಹೊಗಳಿದರು. ಮುದ್ದಣನನ್ನು ಕುರಿತು ಹಲವಾರು ಲೇಖನಗಳನ್ನು ಬರೆದರು. ನಿಧನರಾದದ್ದು ಆಗಸ್ಟ್ ೪ರಂದು ೧೯೭೦ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ. ಮಹದೇವಪ್ಪ – ೧೯೩೭ ಜಿ.ಜಿ. ಮಂಜುನಾಥ್ – ೧೯೪೧

Details

Date:
August 4
Event Category: