Loading Events

« All Events

  • This event has passed.

ಹುಲಿಮನೆ ಸೀತಾರಾಮಶಾಸ್ತ್ರಿ

November 11

೧೧.೧೧.೧೯೦೬ ವೃತ್ತಿ ರಂಗಭೂಮಿಯಲ್ಲಿ ಪೌರಾಣಿಕ ನಾಟಕಗಳೇ ವಿಜೃಂಭಿಸುತ್ತಿದ್ದ ಕಾಲದಲ್ಲಿ ಸಾಮಾಜಿಕ ನಾಟಕಗಳನ್ನು ರಂಗದ ಮೇಲೆ ತಂದು ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಸೀತಾರಾಮಶಾಸ್ತ್ರಿಗಳು ಹುಟ್ಟಿದ್ದು ಸಿದ್ಧಾಪುರ ತಾಲ್ಲೂಕಿನ ಹುಲಿಮನೆ ಎಂಬ ಹಳ್ಳಿ. ಹಳ್ಳಿಯಲ್ಲಿ ನಡೆಯುತ್ತಿದ್ದ ಯಕ್ಷಗಾನದಿಂದ ಪ್ರೇರೇಪಿತ. ಕಲೆಗೀಳು ಹಿಡಿದು ಬೆಂಗಳೂರಿಗೆ ಬಂದು ಕರ್ಪೂರ ಶ್ರೀನಿವಾಸರಾಯರಲ್ಲಿ ಪಡೆದ ಆಶ್ರಯ. ಸಂಸ್ಕೃತ ಪಾಠಶಾಲೆಯಲ್ಲಿ ಅಭ್ಯಾಸ. ನಾಟಕ ಶಿರೋಮಣಿ ವರದಾಚಾರ್ಯರ ಪರಿಚಯ. ದತ್ತಾತ್ರೇಯ ನಾಟಕ ಮಂಡಲಿಯಲ್ಲಿ ನಟನಾ ಕೌಶಲ್ಯ, ಸಂಗೀತ ನಿರ್ದೇಶನದ ಅಭ್ಯಾಸ. ಎಚ್ಚಮನಾಯಕ ನಾಟಕದ ದುರ್ಗಸಿಂಹ, ಜೇಲರ್ ಪಾತ್ರದಿಂದ ಬಂದ ಪ್ರಸಿದ್ಧಿ. ಸ್ನೇಹಿತರೊಡನೆ ಸೇರಿ ಕಟ್ಟಿದ್ದು ಶ್ರೀಗುರು ಸಮರ್ಥ ನಾಟಕ ಸಂಸ್ಥೆ. ಮರಾಠಿ ನಾಟಕದ ಭಾಷಾಂತರ ‘ವರದಕ್ಷಿಣೆ’ ಪ್ರದರ್ಶನ. ಶ್ರೀ ಜಯಕರ್ನಾಟಕ ನಾಟಕ ಸಭಾ ಸ್ವಂತ ನಾಟಕ ಮಂಡಲಿ ಸ್ಥಾಪನೆ. ರಾಯಚೂರಿನಲ್ಲಿ ರಜಾಕರ ಹಾವಳಿಯಿಂದ  ಕಂಪನಿ ಸ್ವತ್ತಿಗೆ ನಷ್ಟ. ನಟನೆಯ ಮುಂದುವರಿಕೆ. ರಾಷ್ಟ್ರಪತಿ ರಾಜೇಂದ್ರಪ್ರಸಾದರ ಮುಂದೆ ಟಿಪ್ಪೂಸುಲ್ತಾನ್ ಏಕಪಾತ್ರಾಭಿನಯಮಾಡಿ ಪಡೆದ ಮೆಚ್ಚುಗೆ ಪತ್ರ, ನಗದು ಬಹುಮಾನ, ಜಿ.ವಿ. ಅಯ್ಯರ್‌ರಿಂದ ಬಸವೇಶ್ವರ, ‘ರಣಧೀರ ಕಂಠೀರವ’ ಚಲನಚಿತ್ರದಲ್ಲಿ ನಟನೆ. ವರದಕ್ಷಿಣೆ, ವೀರಧಾತ್ರಿ ಪನ್ನ, ಸಂಶಯ-ಸಾಮ್ರಾಜ್ಯ, ಧರ್ಮ ಸಾಮ್ರಾಜ್ಯ, ಸತೀ ಸಾವಿತ್ರಿ, ಟಿಪ್ಪೂಸುಲ್ತಾನ್, ಪುತ್ರಾಪೇಕ್ಷೆ, ಮಾಯಾವಿ, ತಪ್ಪುಗಂಟು, ನಡುದಾರಿಯಲ್ಲಿ ಮುಂತಾದ ಐತಿಹಾಸಿಕ, ಸಾಮಾಜಿಕ ನಾಟಕಗಳ ಕರ್ತೃ, ೧೯೬೫ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ.   ಇದೇ ದಿನ ಹುಟ್ಟಿದ ಕಲಾವಿದರು ಗುರುರಾಜರಾವ್ ಆರ್. – ೧೯೧೨ ಶಿವಲಿಂಗಸ್ವಾಮಿ ಹಿರೇಮಠ – ೧೯೧೫ ಬಿ.ಎಸ್. ರಂಗಾ – ೧೯೧೭ ಜಯಲಕ್ಷ್ಮೀ ಶ್ರೀನಿವಾಸನ್ – ೧೯೩೬ ಕಸ್ತೂರಿ ಶಂಕರ್ – ೧೯೫೦

Details

Date:
November 11
Event Category: