Loading Events

« All Events

  • This event has passed.

ಹೇಮಂತ ಕುಲಕರ್ಣಿ

November 25, 2023

೨೫-೧೧-೧೯೧೬ ೨೨-೭-೧೯೯೪ ಕನ್ನಡಕ್ಕಿಂತ ಇಂಗ್ಲಿಷ್‌ನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ ಹೇಮಂತ ಕುಲಕರ್ಣಿಯವರು ಹುಟ್ಟಿದ್ದು ಬಿಜಾಪುರದಲ್ಲಿ. ಬಿಜಾಪುರ, ಹೈದರಾಬಾದ್, ಮುಂಬಯಿಗಳಲ್ಲಿ ಕಳೆದ ಆರಂಭದ ವರ್ಷಗಳು. ೧೯೬೦ರ ಕೊನೆಯಲ್ಲಿ ವೃದ್ಧ ವಿಧುರರಾಗಿ ಅಮೆರಿಕ ವಾಸ. ಇಂಗ್ಲಿಷ್ ಸಾಹಿತ್ಯದಲ್ಲಿ ಪಡೆದ ಎಂ.ಎ. ಪದವಿ. ಅಮೆರಿಕದಲ್ಲಿ ಅನೇಕ ವರ್ಷ ಅಧ್ಯಾಪಕ ವೃತ್ತಿ. ಅಮೆರಿಕಾದ ಉಟ್ಹಾದಲ್ಲಿದ್ದಾಗ ಸ್ಟೀಫನ್ ಸ್ಪೆಂಡರ್ ಮೇಲೆ ಆಳವಾದ ಅಧ್ಯಯನ ನಡೆಸಿ (೧೯೭೦) ಅವನ ಕೃತಿಗಳ ವರ್ಣನಾತ್ಮಕ ಸೂಚಿಯ ಪ್ರಕಟಣೆ. ಅವರ ಮಾಬಿಡಿಕ್ ಕೃತಿಯ ಅಧ್ಯಯನ ಮಾಡಿ ‘ಹಿಂದೂ ಅವತಾರ’ ಎಂಬ ಹೆಸರಿನಲ್ಲಿ ೧೯೭೦ರಲ್ಲಿ ಗ್ರಂಥ ಪ್ರಕಟಿತ. ಇವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದ ಕೃತಿಗಳೆಂದರೆ ಸುಮಾರು ೧೫ ಇಂಗ್ಲಿಷ್ ಕವನಸಂಕಲನಗಳು. ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಭಗ್ನಮಂದಿರ’ (೧೯೫೨). ಸುಮಾರು ಆರು ಮರುಮುದ್ರಣ ಕಂಡಿದೆ. ಮೊದಲ ಕವನ ಸಂಕಲನ ‘ಸ್ನೇಹ ಸೂಕ್ತ’. ೧೯೬೯ರಲ್ಲಿ ‘ಗೋಪುರ’, ೧೯೮೭ರಲ್ಲಿ ಮೂರನೆಯ ಕವನ ಸಂಕಲನ ‘ಹಿಮವೃಷ್ಟಿ.’ ಅನುವಾದಗಳು-ತಪ್ಪಿದ ಹೆಜ್ಜೆ (ನಾಟಕ) ಕೊನರಿದ ಕೊರಡು (ಕಾದಂಬರಿ). ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಹಲವಾರು ಉಪನ್ಯಾಸಗಳ ವ್ಯವಸ್ಥೆ. ಕಾವ್ಯದಲ್ಲಿ ನವ್ಯತೆ ಎಂಬ ಉಪನ್ಯಾಸಗಳು ಪ್ರಸಾರಾಂಗದಿಂದ ಪ್ರಕಟಿತ. ಕನ್ನಡದಲ್ಲಿ ನವ್ಯತೆಯನ್ನು ಕುರಿತು ಬರೆದವರೆಲ್ಲರೂ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ ಕಾವ್ಯದಿಂದ ಪ್ರಭಾವಿತರಾಗಿದ್ದರೆ ಕುಲಕರ್ಣಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೆಕ್ಸಿಕೊ, ಚಿಲಿ, ಜಪಾನ್ ಮೊದಲಾದ ದೇಶಗಳ ಕಾವ್ಯವನ್ನು ಅಧ್ಯಯನಮಾಡಿ ನಡೆಸಿದ ವಿವೇಚನೆ. ೧೯೮೪ರ ಸುಮಾರಿನಲ್ಲಿ ಭಾರತಕ್ಕೆ ಬಂದಾಗ ‘ಸೃಜನವೇದಿ’ ಎಂಬ ನಿಯತ ಕಾಲಿಕವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ, ಅರವಿಂದ ನಾಡಕರ್ಣಿಯವರೊಡನೆ ಪ್ರಾರಂಭಿಸಿ ಆರು ವರ್ಷ ನಡೆಸಿದ ಖ್ಯಾತಿ. ಪಡೆದ ಹಲವಾರು ಅಂತಾರಾಷ್ಟ್ರೀಯ ಮನ್ನಣೆಗಳು. ಫ್ಲಾರೆನ್ಸ್‌ನಲ್ಲಿ ನಡೆದ ಜಾಗತಿಕ ಕವಿ ಸಮ್ಮೇಳನಕ್ಕೆ ಆಹ್ವಾನ, ಅಮೆರಿಕದ ಫ್ಲಾರಿಡಾ ಕವಿ ಸಮ್ಮೇಳನದಲ್ಲಿ ಬಹುಮಾನ, ಫ್ರೆಂಚ್ ಅಕಾಡಮಿಯಿಂದ ದೊರೆತ ಕಂಚಿನ ಪದಕ, ನ್ಯಾಷನಲ್ ಅಕಾಡಮಿ ಆಫ್ ನ್ಯೂಯಾರ್ಕ್ ಸಂಸ್ಥೆಯಿಂದ ಗೌರವ ಡಾಕ್ಟರೇಟ್, ಚೀನಾದಿಂದ ಹೋಚೌ ಸೆಂಚುರಿ ಆಫ್ ಪೊಯಟ್ಸ್ ಪ್ರಶಸ್ತಿ, ಕಾವ್ಯದ ಮೂಲಕ ಶಾಂತಿ ಸೇವೆಗಾಗಿ ಅಂತಾರಾಷ್ಟ್ರೀಯ ಪದಕ, ಉಟ್ಹಾ ವಿಶ್ವವಿದ್ಯಾಲಯದಿಂದ ‘ಮಾನವತಾವಾದಿ’ ಪ್ರಶಸ್ತಿ. ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಪೊಯಟ್ಸ್‌ನಿಂದ ಫೆಲೋಷಿಪ್ ಮುಂತಾದ ಅಂತಾರಾಷ್ಟ್ರೀಯ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿ : ರಾಮಕೃಷ್ಣ ಉಡುಪ – ೧೯೧೬

Details

Date:
November 25, 2023
Event Category: