ಹೊನ್ನಪ್ಪ ಭಾಗವತರು

Home/Birthday/ಹೊನ್ನಪ್ಪ ಭಾಗವತರು
Loading Events
This event has passed.

೧೫-೧-೧೯೧೬ ೧-೧೦-೧೯೯೨ ಸುಪ್ರಸಿದ್ಧ ನಾಟಕಕಾರ, ಸಂಗೀತಗಾರ, ವಾಗ್ಗೇಕಾರರಾದ ಹೊನ್ನಪ್ಪ ಭಾಗವತರು ಹುಟ್ಟಿದ್ದು ನೆಲಮಂಗಲ ತಾಲ್ಲೂಕು ಚೌಡಸಂದ್ರದಲ್ಲಿ. ತಂದೆ ಚಿಕ್ಕಲಿಂಗಪ್ಪ, ತಾಯಿ ಕಲ್ಲಮ್ಮ. ಶಾಲೆಗೆ ಹೋಗುತ್ತಿದ್ದಾಗಲೇ ಯಕ್ಷಗಾನ, ಭಜನೆ, ನಾಟಕಗಳಲ್ಲಿ ಬೆಳೆದ ಆಸಕ್ತಿ. ಜೊತೆಗೆ ಹಾರ್ಮೋನಿಯಂ, ತಬಲ ನುಡಿಸಲು ಕಲಿಕೆ. ಮಧುರ ಕಂಠದಿಂದ ಹಾಡುತ್ತಿದ್ದುದನ್ನು ಕೇಳಿದ ಗುಬ್ಬಿ ವೀರಣ್ಣನವರು ತಮ್ಮ ನಾಟಕ ಕಂಪನಿಯಲ್ಲಿ ಕೊಟ್ಟ ಸ್ಥಾನ. ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಗಳಿಸಿದ ಜನಪ್ರಿಯತೆ. ಸೇಲಂ ಸಂಗೀತ ಅಭಿಮಾನಿ ಸಂಘದವರು ಏರ್ಪಡಿಸಿದ್ದ ಸಂಗೀತ ಕಚೇರಿಯಲ್ಲಿ ಅಮೋಘ ಗಾಯನ. ಜೀವನದಲ್ಲಿ ತಿರುವು ಪಡೆದುಕೊಂಡು ಸಂದರ್ಭ. ಶಂಕರ್ ಫಿಲಂಸ್‌ನವರ ಅಂಬಿಕಾಪತಿ ಎಂಬ ತಮಿಳು ಚಿತ್ರದಲ್ಲಿ ಅಭಿನಯ. ನಂತರ ಹಲವಾರು ತಮಿಳು ಚಿತ್ರಗಳ ನಾಯಕನಟ. ಮುರುಗನ್, ಕೃಷ್ಣಕುಮಾರ್, ಸತಿ ಸುಕನ್ಯ, ಭಕ್ತ ಕಲತಿ, ದೇವಕನ್ಯೆ, ಗುಣಸಾಗರಿ ಮುಂತಾದ ಖ್ಯಾತಿ ತಂದ ಚಿತ್ರಗಳು. ೧೯೪೦ರಲ್ಲಿ ಗುಬ್ಬಿ ವೀರಣ್ಣನವರು ತಯಾರಿಸಿದ ‘ಸುಭದ್ರಾ’ ಕನ್ನಡ ಚಿತ್ರದಲ್ಲಿ ನಾಯಕ ನಟರಾಗಿ ಪಡೆದ ಪ್ರಶಂಸೆ. ೧೯೪೭ರಲ್ಲಿ ಇವರೇ ತಯಾರಿಸಿದ ಭಕ್ತಕುಂಬಾರ ಜನಪ್ರಿಯ ಚಿತ್ರ. ಹೇಮರೆಡ್ಡಿ ಮಲ್ಲಮ್ಮ, ಗುಣಸಾಗರಿ, ಜಗಜ್ಯೋತಿ ಬಸವೇಶ್ವರ, ಮಹಾಕವಿ ಕಾಳಿದಾಸ, ಪಂಚರತ್ನ ಮುಂತಾದ ಚಿತ್ರಗಳಲ್ಲೂ ಅಭಿನಯ. ಮಹಾಕವಿ ಕಾಳಿದಾಸ, ಜಗಜ್ಯೋತಿ ಬಸವೇಶ್ವರ ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿ, ಕಾಳಿದಾಸ, ಪಂಚರತ್ನ ಚಿತ್ರಗಳಿಗೆ ರಾಗ ಸಂಯೋಜನೆ. ೧೯೬೧ರಲ್ಲಿ ಉಮಾ ಮಹೇಶ್ವರಿ ನಾಟಕ ಮಂಡಲಿ ಪ್ರಾರಂಭ. ರಾಜ್ಯಾದ್ಯಂತ ಹಲವಾರು ನಾಟಕಗಳ ಪ್ರದರ್ಶನ. ೧೯೫೬ರಲ್ಲಿ ತಯಾರಿಸಿದ ಚಿತ್ರಗಳ ನಟನೆಗೆ ಉತ್ತಮ ನಟ, ಶ್ರೀಶೈಲ ಮಠದಿಂದ ನಟನಾಚಾರ್ಯ, ಮಲ್ಲಾಡಿಹಳ್ಳಿ ರಾಘವೇಂದ್ರ ಗುರೂಜಿಯವರಿಂದ ಬಂಗಾರದ ಪದಕ, ಬೆಂಗಳೂರಿನ ಕಲಾಭಿಮಾನಿಗಳು ನೀಡಿದ ಬಂಗಾರದ ತೋಡ, ಕರ್ನಾಟಕ ಸಂಗೀತ ಅಕಾಡಮಿ ಪ್ರಶಸ್ತಿ, ಶೃಂಗೇರಿ ಮಠದಿಂದ ಬಂಗಾರದ ಪದಕ, ಗಾಯಕ ಶಿಖಾಮಣಿ, ಕರ್ನಾಟಕ ಗಾನಕಲಾ ಪರಿಷತ್ತಿನ ಆರನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮತ್ತು ಗಾನಕಲಾ ಭೂಷಣ ಬಿರುದು ಮುಂತಾದ ಗೌರವಗಳು. ಆಕಾಶವಾಣಿ ಹಾಡುಗಾರರಾಗಿ, ರಾಜ್ಯ ಶಿಕ್ಷಣ ಇಲಾಖೆಯ ಸಂಗೀತ ಪರಿಕ್ಷಾ ಬೋರ್ಡಿನ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ.   ಇದೇ ದಿನ ಹುಟ್ಟಿದ ಕಲಾವಿದರು : ಲಲಿತ ಉಭಯಂಕರ – ೧೯೨೮ ಪರಮೇಶ್ವರ ಹೆಗಡೆ – ೧೯೫೬

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top