೨೮-೨-೧೯೩೦ ಹುಟ್ಟಿದ್ದು ಕೋಲಾರ ಜಿಲ್ಲೆಯ ಬಂಗಾರಪೇಟೆ. ತಂದೆ ಎಚ್.ಸಿ.ರಾಮರಾವ್, ತಾಯಿ ಜಾನಕೀಬಾಯಿ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ-ಬಂಗಾರು ಪೇಟೆ, ಚಿಂತಾಮಣಿಗಳಲ್ಲಿ. ನಂತರ ಮೈಸೂರಿನ ಶಾರದ ವಿಲಾಸ ಹೈಸ್ಕೂಲು. ಶಾರದಾ ವಿಲಾಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಎಂ.ಎ. ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ವೃತ್ತಿ ಆರಂಭ. ಸೆಂಟ್ರಲ್ ಕಾಲೇಜಿನಲ್ಲಿದ್ದಾಗ ಶ್ರೀ ವಿ.ಸೀ., ಕ್ಷೀರಸಾಗರ, ಎಲ್.ಎಸ್. ಶೇಷಗಿರಿರಾವ್, ರಾಜರತ್ನಂ ಮುಂತಾದವರ ಮಾರ್ಗದರ್ಶನ, ಸಾಹಿತ್ಯಾಸಕ್ತಿ. ವಿನೋದ, ತರಂಗ, ಮಂಗಳಾ, ಸುಧಾ ಮುಂತಾದ ಪತ್ರಿಕೆಗಳಿಗೆ ಬರೆದ ಲೇಖನಗಳು ಪ್ರಕಟಿತ. ಸ್ನೇಹಿತರೊಡಗೂಡಿ ಹುಟ್ಟು ಹಾಕಿದ್ದು ‘ಹೊಂಬೆಳಗು’, ಧ್ರುವ ಪತ್ರಿಕೆಗಳು, ವನಸುಮ ಪ್ರಕಾಶನ ಸಂಸ್ಥೆ, ಸಾಹಿತ್ಯ ಪರಿಷತ್ತಿನ ಒಡನಾಟ, ಜಿ.ನಾರಾಯಣರ ನೇತೃತ್ವದಲ್ಲಿ ಮನೆಮನೆಗೂ ಸರಸ್ವತಿ ಕಾರ್ಯಕ್ರಮದಡಿ ಇಡೀ ಬೆಂಗಳೂರಿನ ಪಾದಯಾತ್ರೆ, ಪುಸ್ತಕ ಮಾರಾಟ. ಭ್ರಮರ, ಮೂರು ಹೆಣ್ಣು ನೂರು ತೆರ, ಗಾಜಿನ ಮನೆ, ಅಪರಾಜಿತೆ, ಸಾವಿತ್ರಿ, ಪ್ರೇಮ ನಕ್ಷತ್ರ, ವಸಂತ ಚಂದ್ರ-ಇವು ತೆಲುಗಿನಿಂದ ಅನುವಾದಿತ ಕಾದಂಬರಿಗಳು. ‘ವೀರೇಶಲಿಂಗಂ ಪಂತುಲು’, ‘ಪೋತನ’-ಮಕ್ಕಳಿಗಾಗಿ ಬರೆದ ಪುಸ್ತಕಗಳು. ಮೇಡಂ ಕ್ಯೂರಿ, ಚಂದ್ರಶೇಖರ ಆಜಾದ್, ಎಂ.ಆರ್.ಶ್ರೀ. ಜೀವನ ಮತ್ತು ಕಾರ್ಯ-ಜೀವನ ಚರಿತ್ರೆಗಳು. ‘ಕನ್ನಡ ತಾಯಿಗೆ ನುಡಿನಮನ’ ಶ್ರೀ ಎಲ್.ಎಸ್.ಶೇಷಗಿರಿರಾಯರೊಡನೆ (ಹಂಪಿ ವಿಶ್ವವಿದ್ಯಾಲಯದಿಂದ ಸುಮಾರು ೨೦೦೦೦ ಪ್ರತಿ ಮುದ್ರಿತ). ಕನ್ನಡ ನುಡಿಮಲ್ಲಿಗೆ-ಸಂಪಾದಿತ. ಕನಕದಾಸರ, ಪುರಂದರದಾಸರ ಜನಪ್ರಿಯ ಹಾಡುಗಳು, ಕಿತಾಪತಿ-ಹರಟೆಯ ಸಂಗ್ರಹ ಪ್ರಕಟಿತ. ದೇವುಡು ದರ್ಶನ, ಹರಿದಾಸರು ಕಂಡ ಶ್ರೀನಿವಾಸ, ದಾರ್ಶನಿಕರು ಕಂಡ ಆಂಜನೇಯ, ಒಬ್ಬ ಕವಿಯ ಬಗ್ಗೆ ಮತ್ತೊಬ್ಬ ಕವಿ ಬರೆದ ಕವಿತೆಗಳ ಸಂಗ್ರಹ, ‘ಕವಿಕಂಡ ಕವಿ’ ಕವನ ಸಂಗ್ರಹ ಮುಂತಾದುವು ಇತರರೊಡನೆ ಸಂಪಾದಿಸಿದ ಕೃತಿಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಸರಸ್ವತಿ ಗೌಡರ್ – ೧೯೨೩-೧.೭.೭೩ ಬಾಗಲೋಡಿ ದೇವರಾಯರು – ೧೯೨೭-೨೫.೭.೧೯೮೫ ಸಂಪಟೂರು ವಿಶ್ವನಾಥ – ೧೯೩೮

