Loading Events

« All Events

  • This event has passed.

ಎಂ.ಎಸ್. ಮೂರ್ತಿ

November 25, 2023

೨೫.೧೧.೧೯೬೦ ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆಯಲ್ಲಿ ಪ್ರಯೋಗಶೀಲ ಕಲಾವಿದರೆನಿಸಿರುವ ಮೂರ್ತಿಯವರು ಹುಟ್ಟಿದ್ದು ಕನಕಪುರದ ಬಳಿಯ ಹಲಗೂರು, ಬೆಳೆದದ್ದು ಬೆಂಗಳೂರು. ತಂದೆ ಮಹದೇವ್, ತಾಯಿ ಜಯಮ್ಮ. ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿ ಡಿಪ್ಲೊಮ. ಮನಃಶಾಸ್ತ್ರ ಅಭ್ಯಾಸಿ, ಮಕ್ಕಳ ಚಿತ್ರಕಲೆ ಕುರಿತು ಡಿಲಿಟ್ ಪದವಿಗಾಗಿ ಸಿದ್ಧಪಡಿಸುತ್ತಿರುವ ಮಹಾಪ್ರಬಂಧ. ಆಯ್ದುಕೊಂಡದ್ದು ಪತ್ರಿಕೋದ್ಯಮ. ವಿನ್ಯಾಸಕಾರ ಮತ್ತು ಕಲಾ ನಿರ್ದೇಶಕರಾಗಿ ಉದ್ಯೋಗಿ. ಉದ್ಯೋಗ ತ್ಯಜಿಸಿ ಕಲಾ ಪ್ರಕಾರದಲ್ಲಿ ಪ್ರಯೋಗ ನಿರತರು. ಕ್ಯಾನ್‌ವಾಸ್ ಪತ್ರಿಕೆಯ ಸಂಪಾದಕರಾಗಿ ಕೆಲಕಾಲ. ಪುಣೆ, ಮುಂಬೈ, ಮೈಸೂರು ದಸರ ವಸ್ತುಪ್ರದರ್ಶನ, ಕರ್ನಾಟಕ ಲಲಿತಕಲಾ ಅಕಾಡಮಿಯ ಕಲಾಮಹೋತ್ಸವ, ಅಖಿಲಭಾರತ ಕಲಾಮೇಳ, ರಾಷ್ಟ್ರೀಯ ಸಮಕಾಲೀನ ಕಲಾಪ್ರದರ್ಶನ ಗಳಲ್ಲದೆ ಇರಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಭಾರತವನ್ನು ಪ್ರತಿನಿಧಿಸಿದ ಕಲಾವಿದ. ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ಸ್, ಶಾಶ್ವತಕಲಾ ಸಂಗ್ರಹಾಲಯ, ಅಂತಾರಾಷ್ಟ್ರೀಯ ಕಲಾ ಸಂಗ್ರಹಗಳಲ್ಲಿ ಸಂಗ್ರಹಿತ. ‘ಭೂಮಿ’ ಕಲಾವಿದರ ತಾಣದಲ್ಲಿ ಕಲಾ ವಿದ್ಯಾರ್ಥಿಗಳಿಗೆ ಮ್ಯೂರಲ್ ಕಲೆಯ ಬಗ್ಗೆ ಶಿಕ್ಷಣ, ತರಬೇತಿ, ಮಕ್ಕಳ ಚಿತ್ರಕಲೆ ಕುರಿತು ಕೌನ್ಸಿಲಿಂಗ್, ಲಂಕೇಶ್ ಪತ್ರಿಕೆ, ಉದಯವಾಣಿ, ಪ್ರಜಾವಾಣಿ, ತರಂಗ ಪತ್ರಿಕೆಗಳಿಗೆ ಬರೆದ ಸಾಹಿತ್ಯ ಬರವಣಿಗೆ, ‘ದೇಸಿನಗು’ ಪ್ರಬಂಧ ಸಂಕಲನ ಪ್ರಕಟಿತ, ‘ದೃಶ್ಯ’  ಕಾದಂಬರಿ ಸದ್ಯದಲ್ಲೇ ಲೋಕಾರ್ಪಣೆ. ಯಶೋಧರೆ ಮಲಗಿರಲ್ಲಿಲ್ಲ ನಾಟಕಕ್ಕೆ ಆಕಾಶವಾಣಿ ಪ್ರಾದೇಶಿಕ ನಾಟಕ ಪ್ರಶಸ್ತಿ, ಇರಾನ್ ದೇಶದ ಅಂತಾರಾಷ್ಟ್ರೀಯ ಕಲಾ ಮೇಳದಲ್ಲಿ ‘ಬುದ್ಧ ದ ಲೈಟ್’ ಕೃತಿಗೆ ಅಂತಾರಾಷ್ಟ್ರೀಯ ಬೈನಾಲೆ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದೆ ಉಷಾಗಣೇಶ್ – ೧೯೫೬

Details

Date:
November 25, 2023
Event Category: