Loading Events

« All Events

  • This event has passed.

ಎಂ.ಎ. ಜಯರಾಮರಾವ್

November 3, 2023

೩.೧೧.೧೯೩೫ ಸಾಹಿತ್ಯ, ಸಂಗೀತ ಕಲಾವಿದರ ಮನೆತನದಲ್ಲಿ ಜಯರಾಮರಾವ್ ಹುಟ್ಟಿದ್ದು ಮಡಕೇರಿ. ತಂದೆ ಹೆಸರಾಂತ ಕವಿ, ಗಮಕಿಗಳಾದ ಮೈ.ಶೇ. ಅನಂತ ಪದ್ಮನಾಭರಾವ್, ತಾಯಿ ಲಕ್ಷ್ಮೀದೇವಮ್ಮ. ಸಂಗೀತದಲ್ಲಿ ಸೀನಿಯರ್ ಗ್ರೇಡ್. ಪತ್ರಕರ್ತರಾಗಿ ಸೇರಿದ್ದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾಬಳಗ. ಹಲವಾರು ವಿಮರ್ಶೆ, ವ್ಯಕ್ತಿಚಿತ್ರ, ಸಂದರ್ಶನಗಳು ಪ್ರಕಟಿತ. ತಂದೆಯಿಂದಲೇ ಆರಂಭಿಕ ಸಂಗೀತ ಶಿಕ್ಷಣ, ಚಕ್ರಕೋಡಿ ನಾರಾಯಣ ಶಾಸ್ತ್ರಿ, ವೈ.ಎನ್. ಶ್ರೀನಿವಾಸಮೂರ್ತಿಯವರ ಬಳಿ ಮುಂದುವರೆದ ಶಿಕ್ಷಣ. ಬಿ.ಎಸ್. ರಾಮಾಚಾರ್, ಎಚ್.ಕೆ. ರಂಗನಾಥ್‌ರವರ ಕನ್ನಡ ಗೀತೆಗಳನ್ನು ಕೇಳಿ ರೂಢಿಸಿಕೊಂಡದ್ದು ಭಾವಗೀತೆ ಗಾಯನ, ಗಮಕಿಯಾಗಿ ರಾಜ್ಯಾದ್ಯಂತ, ಹೊರ ರಾಜ್ಯಗಳಾದ ಅಹಮದಾಬಾದ್, ಭಿಲಾಯ್, ನಾಗಪುರ, ಭೂಪಾಲ್ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ದಾಸ ಸಾಹಿತ್ಯದಲ್ಲಿ ಆಸಕ್ತಿ-ಅಧ್ಯಯನ. ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಸಲಹಾ ಮಂಡಲಿ ಸದಸ್ಯರಾಗಿ, ಆಕಾಶವಾಣಿ ಆಡಿಷನ್ ಬೋರ್ಡಿನ ಸದಸ್ಯರಾಗಿ ಸಂಗೀತ ನೃತ್ಯ ಅಕಾಡಮಿ ಸದಸ್ಯರಾಗಿ, ಕಾರ್ಯನಿರ್ವಹಣೆ. ಸಂಗೀತ, ನೃತ್ಯ ಕುರಿತು ವಿಮರ್ಶಾ ಲೇಖನಗಳು, ಅಕಾಡಮಿಗಾಗಿ ಕರ್ನಾಟಕ ಕಲಾವಿದರು ಮಾಲಿಕೆಯಲ್ಲಿ ಕೀರ್ತನಕಾರರು, ಸಂಗೀತಗಾರರು, ಸುಗಮಸಂಗೀತಗಾರರು, ಹಿಂದೂಸ್ತಾನಿ ಗಾಯಕರು, ಗಮಕ ದಿಗ್ಗಜರು, ಕಲಾಚೇತನ ಮುಂತಾದ ಗ್ರಂಥಗಳ ಸಂಪಾದಕತ್ವ. ಕರ್ನಾಟಕ ನೃತ್ಯ ಅಕಾಡಮಿಯಿಂದ ಕಲಾಶ್ರೀ, ತ್ಯಾಗರಾಜ ಗಾನಸಭಾ ವತಿಯ ಸಂಗೀತೋತ್ಸವದಲ್ಲಿ ಗಮಕ ಕಲಾಭೂಷಣ, ಕರ್ನಾಟಕ ಗಾನ ಕಲಾಪರಿಷತ್ತಿನ ಸಂಗೀತ ವಿದ್ವಾಂಸರ ಸಮ್ಮೇಳನದಲ್ಲಿ ಸನ್ಮಾನ, ತ್ಯಾಗರಾಜ ಭಜನ ಸಭಾದಿಂದ ಕಲಾಜ್ಯೋತಿ, ಗಾಯನ ಸಮಾಜದಿಂದ ನಾದ ಚಿಂತಾಮಣಿ ಮುಂತಾದ ಗೌರವ ಪುರಸ್ಕಾರಗಳು.   ಇದೇ ದಿನ ಹುಟ್ಟಿದ ಕಲಾವಿದರು ಬೆಂಗಳೂರು ನಾಗರತ್ನಮ್ಮ – ೧೮೭೮ ಪಿಟೀಲು ತಾಯಪ್ಪ – ೧೮೮೦ ಬಿ.ಎನ್. ನಾಣಿ – ೧೯೨೯ ಎಂ. ಗೋಪಾಲಕೃಷ್ಣಮಲ್ಯ – ೧೯೩೩ ಗರ್ತಿಕೆರೆ ರಾಘಣ್ಣ – ೧೯೩೫ ಸಿದ್ಧಲಿಂಗಪಟ್ಟಣಶೆಟ್ಟಿ – ೧೯೩೯

Details

Date:
November 3, 2023
Event Category: