Loading Events

« All Events

ಎಸ್.ಎಂ. ಶಂಕರಾಚಾರ್ಯ

July 12

೧೨.೭.೧೯೨೧ ಕೋಲಾರ ಜಿಲ್ಲೆಯ ಶಿವಾರ ಪಟ್ಟಣ ಶಿಲ್ಪಕಲೆಗೆ ತವರೂರು. ಹಲವಾರು ಶಿಲ್ಪಕಲಾ ಪರಿಣತರು ಕರ್ನಾಟಕದಾದ್ಯಂತ ಹಂಚಿ ಹೋಗಿ ತಮ್ಮ ಕಲಾವಂತಿಕೆಯ ಜಾಣ್ಮೆತೋರಿಸಿದ್ದಾರೆ. ಶಂಕರಾಚಾರ್ಯರು ಹುಟ್ಟಿದ್ದು ಶಿವಾರಪಟ್ಟಣದಲ್ಲಿ. ಓದಿಗಿಂತ ಶಿಲ್ಪಕಲೆಯಲ್ಲಿ ಪಡೆದ ಪರಿಣತಿ, ಅಮರಕೋಶ, ಸಂಸ್ಕೃತ, ಶಿಲ್ಪಕಲೆ, ಚಿತ್ರಕಲೆ, ಶಿಲ್ಪಾಗಮದಲ್ಲಿ ಪಡೆದ ಪ್ರಾವೀಣ್ಯತೆ. ತಂದೆ ಮಾಳಿಗಾಚಾರ್ಯರಿಂದ ಶಿಲ್ಪಕಲೆಯ ಪ್ರಾರಂಭಿಕ ಶಿಕ್ಷಣ. ನಂತರ ಹೆಸರಾಂತ ಶಿಲ್ಪಿಗಳಾದ ಚನ್ನಪ್ಪಚಾರ್ಯರಲ್ಲಿ ಸಾಂಪ್ರದಾಯಿಕ ಶಿಲ್ಪಕಲೆಯ ವಿವಿಧ ಪ್ರಕಾರಗಳಲ್ಲಿ ಗಳಿಸಿದ ಹೆಚ್ಚಿನ ಶಿಕ್ಷಣ. ಅನೇಕ ವಿದ್ಯಾರ್ಥಿಗಳಿಗೆ ಇವರು ನೀಡಿದ ಆಗಮಶಾಸ್ತ್ರದ ತರಬೇತಿ. ಶಿವಾರಪಟ್ಟಣದಲ್ಲಿರುವ ‘ಶಿಲ್ಪಕಲಾ ಸಹಕಾರ ಸಂಘದ’ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಸೇವೆ. ಮಧುಗಿರಿಯ ಸರಕಾರಿ ಕಾಲೇಜಿಗೆ ವೀಣಾ ಸರಸ್ವತಿ, ಚಿಕ್ಕಬಳ್ಳಾಪುರದ ವಿದ್ಯುತ್‌ ಇಲಾಖೆಗೆ ಚಾಮುಂಡೇಶ್ವರಿ, ಬೆಂಗಳೂರಿನ ಶಂಕರ ಮಠಕ್ಕೆ ಕೋದಂಡರಾಮ ಶಿಲಾ ಸಂಪುಟ, ಲಿಂಗರಾಜಪುರಂನ ಶಂಕರ ಮಠಕ್ಕೆ ರಾಜಗೋಪುರ, ಹಿತ್ತಾಳೆ ಕಳಸಗಳು, ಬಂಗಾರುಪೇಟೆಯ ಬಸವೇಶ್ವರ ದೇವಾಲಯಕ್ಕೆ ವಜ್ರಾಂಗಿ ಮತ್ತು ಬಾಗಿಲುವಾಡ, ಹೀಗೆ ಕರ್ನಾಟಕ, ಆಂಧ್ರ, ತಮಿಳುನಾಡು, ಒರಿಸ್ಸಾ ರಾಜ್ಯಗಳ ದೇವಸ್ಥಾನಗಳಿಗೆ ಮೂರ್ತಿಗಳು, ಅಲ್ಲದೆ ಬರ್ಹಾಂಪುರ, ವಿಶಾಖ ಪಟ್ಟಣ, ಒರಿಸ್ಸಾ, ಹೃಷಿಕೇಶಗಳಿಗೆ ವಿಷ್ಣುಸಂಪುಟ ಮತ್ತು ದೇವಿ ಸಂಪುಟ, ಶಿಲಾವಿಗ್ರಹಗಳ ರಚನೆ. ಅನೇಕ ಖಾಸಗಿ ದೇವಾಲಯಗಳಲ್ಲಿ ಶಿಲ್ಪಾಗಮ ರೀತ್ಯಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯ. ೧೯೫೭ ರಲ್ಲಿ ಅಖಿಲ ಭಾರತ ಕರಕುಶಲ ಸಾಪ್ತಾಹದಲ್ಲಿ ವೇಣುಗೋಪಾಲಸ್ವಾಮಿ ವಿಗ್ರಹಕ್ಕೆ ಬೆಳ್ಳಿ ಪದಕ, ಪ್ರಶಸ್ತಿ, ಕೈಗಾರಿಕಾವಾಣಿಜ್ಯ ಇಲಾಖೆಯ ಕೃಷ್ಣ ವಿಗ್ರಹಕ್ಕೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ; ಕೈಗಾರಿಕಾ ವಾಣಿಜ್ಯ ಇಲಾಖೆಯ ಕೃಷ್ಣ ವಿಗ್ರಹಕ್ಕೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ; ಚತುರ್ಭುಜ ಲಕ್ಷ್ಮೀ ವಿಗ್ರಹಕ್ಕೆ ಬೆಳ್ಳಿ ಪದಕ, ಪ್ರಶಸ್ತಿಗಳಲ್ಲದೆ ಕರ್ನಾಟಕ ಶಿಲ್ಪಕಲಾ ಅಕಾಡಮಿಯಿಂದ ೨೦೦೩ ನೇ ಸಾಲಿನಲ್ಲಿ ದೊರೆತ ಪ್ರಶಸ್ತಿ ಗೌರವ. ಇದೇ ದಿನ ಹುಟ್ಟಿದ ಕಲಾವಿದರು ಜಿ.ಎಸ್‌. ರಾಜಲಕ್ಷ್ಮೀ – ೧೯೪೯ ರಾಜಕುಮಾರ್ ಆರ್ – ೧೯೬೨ ಕಮಲ್‌ ಅಹ್ಮದ್‌ – ೧೯೬೫ ಚಂಪಾಶೆಟ್ಟಿ – ೧೯೭೪ ಹಿತಯಷಿ ಬಿ.ಎಸ್‌ – ೧೯೮೦

* * *

Details

Date:
July 12
Event Category: