Loading Events

« All Events

  • This event has passed.

ಎಸ್.ಸಿ. ನಂದೀಮಠ

December 12, 2023

೧೨-೧೨-೧೯೦೦ ೨೧-೧೧-೧೯೭೫ ಶಿಕ್ಷಣತಜ್ಞ, ವಿದ್ವಾಂಸ ಎಸ್.ಸಿ. ನಂದೀಮಠರವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಚಿಕ್ಕನಂದಿ ಎಂಬ ಹಳ್ಳಿ. ತಂದೆ ಚೆನ್ನಬಸವಯ್ಯ. ಪ್ರಾರಂಭಿಕ ಶಿಕ್ಷಣ ಧಾರವಾಡ. ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ೧೯೩೦ರಲ್ಲಿ ಲಂಡನ್ನಿಗೆ ಹೋಗಿ ಪ್ರೊ. ಬಾರ್ನೆಟ್ ಮಾರ್ಗದರ್ಶನದಲ್ಲಿ “ವೀರಶೈವ ಧರ್ಮ ಮತ್ತು ತತ್ತ್ವಜ್ಞಾನಗಳ ಕೈಪಿಡಿ” (ಹ್ಯಾಂಡ್‌ಬುಕ್ ಆಫ್ ವೀರಶೈವಿಸಂ) ಮಹಾಪ್ರಬಂಧ ಮಂಡಿಸಿ ಲಂಡನ್ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಬೆಳಗಾವಿಯ ಆರ್ಟಾಳ-ಗಿಲಗಂಜಿ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ. ನಂತರ ಲಿಂಗಾಯತ ಎಜುಕೇಷನ್ ಸೊಸೈಟಿಯವರು ಸ್ಥಾಪಿಸ ಬಯಸಿದ್ದ ಲಿಂಗರಾಜ ಕಾಲೇಜಿನ ಸ್ಥಾಪನೆಗಾಗಿ ಪಟ್ಟ ಶ್ರಮ. ಅದೇ ಕಾಲೇಜಿನ ಪ್ರಥಮ ಪ್ರಿನ್ಸಿಪಾಲರಾಗಿ ಹೊತ್ತ ಹೊಣೆ. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕೆಂದು ನಡೆಸಿದ ಹೋರಾಟ. ಕರ್ನಾಟಕ ವಿಶ್ವವಿದ್ಯಾಲಯ ಕಾರ‍್ಯಾರಂಭ ಮಾಡುವಲ್ಲಿ ರೂಪಿಸಿದ ಕಾಯಿದೆ ಕಾನೂನುಗಳು. ವಿಶ್ವವಿದ್ಯಾಲಯ ಸೆನೆಟ್, ಸಿಂಡಿಕೇಟ್, ಅಕ್ಯಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಸಲ್ಲಿಸಿದ ಸೇವೆ. ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಮಾಡಿದ ಕಾರ‍್ಯಗಳು. ಬಾಗಲಕೋಟೆಯ ಬಸವೇಶ್ವರ ಕಾಲೇಜನ್ನು ಕಟ್ಟಿ ಬೆಳೆಸಿದ ಕೀರ್ತಿ. ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪಡೆದ ಪ್ರಭುತ್ವ. ಸಂಸ್ಕೃತ ಹಾಗೂ ಹಳಗನ್ನಡದ ಹಲವಾರು ಗ್ರಂಥಗಳನ್ನು ಸಂಪಾದಿಸಿ, ಪರಿಷ್ಕರಿಸಿ ಬರೆದ ವಿದ್ವತ್‌ಪೂರ್ಣ ಮುನ್ನುಡಿಗಳು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾದ ಕನ್ನಡ ನಾಡಿನ ಚರಿತ್ರೆ ಭಾಗ-೨, ಪ್ರಮುಖ ಆಕರ ಗ್ರಂಥ. ೧೯೪೧ರಲ್ಲಿ ಸಂಪಾದಿಸಿದ ಗ್ರಂಥ ಹರಿಹರನ ಗಿರಿಜಾ ಕಲ್ಯಾಣ. ವೀರಶೈವ ತತ್ತ್ವ ಪ್ರಕಾಶ, ಕುವಲಯಾನಂದ ಇತರ ಕೃತಿಗಳು. ೧೯೫೨ರಲ್ಲಿ ಬೇಲೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ನೀಡಿ ಕರ್ನಾಟಕದ ಜನತೆ ತೋರಿದ ಗೌರವ. ೧೯೭೫ರಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಯಲಕ್ಷ್ಮೀ ಶ್ರೀನಿವಾಸನ್ – ೧೯೧೧ ನ. ರತ್ನ – ೧೯೩೪ ಡಾ. ಸಿ.ಆರ್. ಚಂದ್ರಶೇಖರ್ – ೧೯೪೮ ಜಿ.ಎಂ. ಹೆಗಡೆ    – ೧೯೫೨ ಬಿ.ಎಂ. ಹನೀಫ್ – ೧೯೬೧

Details

Date:
December 12, 2023
Event Category: