Loading Events

« All Events

  • This event has passed.

ಡಾ. ಪುರುಷೋತ್ತಮ ಬಿಳಿಮಲೆ

August 21, 2023

೨೧-೮-೧೯೫೫ ಜಾನಪದ, ಸಾಂಸ್ಕೃತಿಕ ಅಧ್ಯಯನ, ಯಕ್ಷಗಾನ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ಪುರುಷೋತ್ತಮ ಬಿಳಿಮಲೆಯವರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಪಂಜದಲ್ಲಿ. ತಂದೆ ಬಿ.ಶೇಷಪ್ಪಗೌಡ, ತಾಯಿ ಗೌರಮ್ಮ. ಪ್ರಾಥಮಿಕ ಶಿಕ್ಷಣ ಸುಳ್ಯದ ಬಳಿಯ ಕೂತ್ಕುಂಜ. ಪ್ರೌಢಶಾಲೆಗೆ ಸೇರಿದ್ದು ಪಂಜದಲ್ಲಿ. ಕಾಲೇಜು ವಿದ್ಯಾಭ್ಯಾಸ ಸುಬ್ರಹ್ಮಣ್ಯೇಶ್ವರ ಜ್ಯೂನಿಯರ್ ಕಾಲೇಜ್, ವಿವೇಕಾನಂದ ಕಾಲೇಜು ಪುತ್ತೂರು. ಮದರಾಸು ವಿಶ್ವವಿದ್ಯಾಲಯದಿಂದ ೧೯೭೯ರಲ್ಲಿ ಮೊದಲ ರ‍್ಯಾಂಕ್ ಪಡೆದು ಎಂ.ಎ. ಪದವಿ. ಮಂಗಳೂರು ವಿಶ್ವವಿದ್ಯಾಲಯದಿಂದ “ಸುಳ್ಯ  ಪರಿಸರದ ಗೌಡಜನಾಂಗ : ಒಂದು ಸಾಂಸ್ಕೃತಿಕ ಅಧ್ಯಯನ” ಮಹಾ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ತುಳು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ. ೧೯೭೯ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಸುಳ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಕಾಲ. ೧೯೯೨ರಿಂದ ೯೮ರವರೆಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಹುದ್ದೆ. ೧೯೯೮ರಿಂದ ದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ಜನಾಂಗಿಯ ಸಂಗೀತ ಪತ್ರಗಾರ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಪನಿರ್ದೇಶಕರಾಗಿ, ನಿರ್ದೇಶಕರಾಗಿ ಹೊತ್ತ ಜವಾಬ್ದಾರಿ. ಹಂಪಿ ವಿಶ್ವವಿದ್ಯಾಲಯದಲ್ಲಿದ್ದಾಗಲೇ ಜಾನಪದ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಜಾನಪದ ಅಕಾಡಮಿಯ ಸದಸ್ಯರಾಗಿ. ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಸದಸ್ಯರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ. ಎಂ.ಫಿಲ್ ೮ ವಿದ್ಯಾರ್ಥಿಗಳಿಗೆ, ೭ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಯಶಸ್ವಿ ಮಾರ್ಗದರ್ಶನ. ಟೋಕಿಯೋ, ಜೆರೂಸಲೇಮ್‌ಗೆ ಹಲವಾರು ಬಾರಿ ಭೇಟಿ, ಪಡೆದ ಅನುಭವ. ಹಲವಾರು ಕೃತಿಗಳ ಪ್ರಕಟಣೆ. ಮೆಕೆಂಜಿಯ ಕೈಫಿಯತ್ತುಗಳು, ಲಿಂಗರಾಜ ಹುಕುಂ ನಾಮ, ಕಂಬುಳ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದ ಕ್ಷೇತ್ರಕಾರ್ಯ, ಕೋಮುವಾದ ಮತ್ತು ಜನ ಸಂಸ್ಕೃತಿ, ಹಂಪಿ ಜಾನಪದ, ಕೂಡುಕಟ್ಟು, ಹುಲಿಗೆಮ್ಮ, ಕುಮಾರರಾಮ. ಸಂಪಾದಿತ-ಕನ್ನಡ ಭಾಷಾ ಪಠ್ಯ ಪುಸ್ತಕಗಳು, ಲೋಹಿಯಾವಾದ ಕೆಲವು ಟಿಪ್ಪಣಿಗಳು, ದೇವರು ದೆವ್ವ ವಿಜ್ಞಾನ, ಯಕ್ಷಗಾನ ಪ್ರಸಂಗಗಳು, ಅಕ್ಷರ ವಿಮೋಚನೆ, ವಿಚಾರ ಸಾಹಿತ್ಯ, ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ, ಸಿರಿ ಮುಂತಾದುವು. ಹಲವಾರು ಸಂಶೋಧನೆ ನಡೆಸಿ ಕೃತಿ ಪ್ರಕಟಿತ. ಹಲವಾರು ನಿಯತ ಕಾಲಿಕೆಗಳ ಸಂಪಾದಕತ್ವ. ಅರಸಿ ಬಂದ ಪ್ರಶಸ್ತಿಗಳು. ಕರಾವಳಿ ಜಾನಪದ ಕೃತಿಗೆ ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ, ಶಿಷ್ಟ-ಪರಿಶಿಷ್ಟ  ಕೃತಿಗೆ ಬಿ.ಎಚ್. ಶ್ರೀಧರ ಪ್ರಶಸ್ತಿ, ಮಲ್ಲಿಕಾರ್ಜುನ ಮನಸೂರ ಪ್ರಶಸ್ತಿ, ಆರ‍್ಯಭಟ ಪ್ರಶಸ್ತಿ. ಕೂಡುಕಟ್ಟು ಕೃತಿಗೆ ಸಾರಂಗ ಮಠ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿ ದೊರೆತಿದೆ. ಇದೀಗ ದೆಹಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ‍್ಯ ನಿರ್ವಹಣೆ.

Details

Date:
August 21, 2023
Event Category: