Loading Events

« All Events

  • This event has passed.

ಡಾ. ಬಿ. ಮಲ್ಲಿಕಾರ್ಜುನ್

November 29, 2023

೨೯-೧೧-೧೯೫೧ ಕನ್ನಡದ ಶೈಲಿ ಶಾಸ್ತ್ರ, ಭಾಷಾಶಾಸ್ತ್ರದಲ್ಲಿ ವಿದ್ವಾಂಸರಾದ ಮಲ್ಲಿಕಾರ್ಜುನರವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ. ತಂದೆ ಆರ್. ಭದ್ರಣ್ಣ, ತಾಯಿ ತಾಯಮ್ಮ. ಪ್ರಾರಂಭಿಕ ಶಿಕ್ಷಣ ಹಿರಿಯೂರು. ಕಾಲೇಜು ವಿದ್ಯಾಭ್ಯಾಸ ತಿಪಟೂರಿನ ಕಲ್ಪತರು ಕಾಲೇಜು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ‘ಯರವ’ ಭಾಷೆಯ ವರ್ಣನಾತ್ಮಕ ವಿಶ್ಲೇಷಣೆ (ಇಂಗ್ಲಿಷ್‌ನಲ್ಲಿ) ಮಹಾಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ ಪದವಿ. ನಿಘಂಟು ಶಾಸ್ತ್ರ, ವಯಸ್ಕರ ಶಿಕ್ಷಣ, ಕಂಪ್ಯೂಟರ್ ಶ್ರಮಶೀಲ ಅಳವಡಿಕೆ, ಸಂಪರ್ಕ ಮಾಧ್ಯಮ, ಇ-ಪ್ರಕಾಶನ, ಮೌಲ್ಯಾಧಾರಿತ ಆಡಳಿತ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಗಳಿಸಿದ ಪ್ರಾವೀಣ್ಯತೆ. ವಯಸ್ಕರ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಪರಿಶೋಧನಾಕಾರಿಯಾಗಿ, ಸಹಾಯಕ ಸಂಶೋಧಕರಾಗಿ, ಅಕೆಡಮಿಕ್ ಕಾರ‍್ಯದರ್ಶಿಯಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಇದೀಗ ಭಾರತ ಸರಕಾರದ ಸಂಪನ್ಮೂಲ ಕೇಂದ್ರದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ಉಪನಿರ್ದೇಶಕರಾಗಿ ಹೀಗೆ ಹಲವಾರು ಹುದ್ದೆಗಳಲ್ಲಿ ಕಾರ‍್ಯ ನಿರ್ವಹಣೆ. ಹಲವಾರು ಶೈಕ್ಷಣಿಕ ಪತ್ರಿಕೆಗಳ ಸಂಪಾದಕತ್ವ, ಶೈಕ್ಷಣಿಕ ಸಂಘ ಸಂಸ್ಥೆಗಳ ಸಲಹಾ ಸಮಿತಿ ಸದಸ್ಯರಾಗಿ ಸೇವೆ. ಅಂತಾರಾಷ್ಟ್ರೀಯ ಕಮ್ಮಟ, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ. ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ‘ಜಾಗತಿಕರಣದಲ್ಲಿ ಭಾಷೆಯ ವೈವಿಧ್ಯತೆ’ ; ಹಂಗೆರಿಯ ಬುಡಾವೆಸ್ಟ್‌ನಲ್ಲಿ ನಡೆದ ‘ಭಾಷಾ ವಿಜ್ಞಾನ ಗಣಕೀಕರಣ’; ಜರ್ಮನಿಯ ‘ಮಾತೃಭಾಷೆಯ ಭಾಷಾಶಾಸ್ತ್ರ ಸಂಪರ್ಕ’; ನೇಪಾಳದ ‘ಭಾಷಾ ಅಗತ್ಯಗಳ ಪೂರ್ಣತೆಗೆ ತಾಂತ್ರಿಕರಣಕ್ಕೆ ಹೊಸರೂಪ’; ಮಲೇಷಿಯಾದಲ್ಲಿ ‘ಪ್ರಪಂಚದ ಪ್ರಮುಖ ಭಾಷೆಗಳು’; ಶ್ರೀಲಂಕಾದಲ್ಲಿ ‘ರಾಷ್ಟ್ರೀಯ ಭಾಷಾ ವ್ಯಾಸಂಗಕ್ರಮ’ ಮುಂತಾದ ಸಂಕಿರಣಗಳಲ್ಲಿ ಭಾಗಿ. ರಚಿಸಿದ ಗ್ರಂಥಗಳು ಮೊದಲ ಹೆಜ್ಜೆ, ಸರಿ ಹೆಜ್ಜೆ, ಹೊಸಹೆಜ್ಜೆ, ಕನ್ನಡ ಶೈಲಿ ಕೈಪಿಡಿ, ನಿರಂತರ, ಸಮಕಾಲೀನ ಮುಂತಾದುವು. ಇಂಗ್ಲಿಷ್‌ನಲ್ಲಿ ವಕ್ಯಾಬುಲರಿ ಎಜುಕೇಷನ್, ಲಾಂಗ್ವೇಜ್ ಯೂಸ್ ಇನ್ ಅಡ್ಮಿನಿಸ್ಟ್ರೇಷನ್, ಎ ಡಿಸ್ಕ್ರಿಪ್‌ಟಿವ್ ಅನಾಲಿಸಿಸ್ ಆಫ್ ಯರವ, ರೀಡಬಲಿಟಿ ಆಫ್ ಟೆಕ್ಸ್ಟ್ ಬುಕ್ಸ್ ಮುಂತಾದುವು. ಸಂದ ಗೌರವಗಳು. ಕರ್ನಾಟಕ ಸರಕಾರದಿಂದ ಪ್ರತಿಷ್ಠಿತ ಔದ್ಯಮಿಕ ಪ್ರಶಸ್ತಿ (ಆಡಳಿತ ಸಾಹಿತ್ಯ); ಅಂತಾರಾಷ್ಟ್ರೀಯ ದ್ರವಿಡಿಯನ್ ಭಾಷಾ ಸಂಸ್ಥೆಯಿಂದ ‘ಯರವ’; ಭಾಷಾಗ್ರಂಥಕ್ಕಾಗಿ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿ : ಚಂದ್ರಿಕಾ ಪುರಾಣಿಕ್ – ೧೯೬೦

Details

Date:
November 29, 2023
Event Category: