Loading Events

« All Events

ದಾಕ್ಷಾಯಣಿ ರಾಜಕುಮಾರ್

June 30

೩೦.೦೬.೧೯೬೯ ಸಂಗೀತ ಮನೆತನದಿಂದ ಬಂದ ದಾಕ್ಷಾಯಣಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ. ತಾತನವರಾದ ಪಿಟೀಲು ರಾಮಯ್ಯನವರು ಅರಮನೆಯ ವಾದ್ಯವೃಂದದಲ್ಲಿ ಪ್ರಖ್ಯಾತ ಕಲಾವಿದರಾಗಿದ್ದರೆ ತಂದೆ ಮಂಜಪ್ಪ ಹೆಸರಾಂತ ಗಾಯಕರು. ತಾಯಿ ಶಾರದಮ್ಮ ಸಂಗೀತ ಪ್ರೇಮಿ. ಎಳೆ ವಯಸ್ಸಿನಿಂದಲೇ ಸಂಗೀತದಲ್ಲಿ ಬೆಳೆದ ಆಸಕ್ತಿಯನ್ನು ಗಮನಿಸಿದ ತಂದೆಯಿಂದಲೇ ಸಂಗೀತದ ಮೊದಲ ಪಾಠ. ಕೆ.ಎಸ್. ಮೋಹನ್ ಕುಮಾರ್‌ ರವರಲ್ಲಿ ಮುಂದುವರೆದ ಶಾಸ್ತ್ರೀಯ ಸಂಗೀತ ಶಿಕ್ಷಣ. ಸುಗಮ ಸಂಗೀತ ಕಲಿತದ್ದು ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್‌, ಶಿವಮೊಗ್ಗ ಸುಬ್ಬಣ್ಣ ಮತ್ತು ಗರ್ತಿಕೆರೆ ರಾಘಣ್ಣ ಮುಂತಾದವರ ಬಳಿ. ಸಂಗೀತ ಶಿಕ್ಷಣದಲ್ಲಿ ಜ್ಯೂನಿಯರ್‌ ಹಾಗೂ ಸೀನಿಯರ್‌ ಪರೀಕ್ಷೆಯಲ್ಲಿ ತೇರ್ಗಡೆ. ಸಂಗೀತದಷ್ಟೆ ಸ್ವಂತ ಪರಿಶ್ರಮದಿಂದ ಕಲಿತದ್ದು ಭರತನಾಟ್ಯ. ಭರತನಾಟ್ಯದಲ್ಲಿ ಜ್ಯೂನಿಯರ್‌ ಪರೀಕ್ಷೆಯಲ್ಲಿ ತೇರ್ಗಡೆ. ಆಕಾಶವಾಣಿಯ ’ಬಿ’ಗ್ರೇಡ್ ಕಲಾವಿದೆಯಾಗಿ ಆಯ್ಕೆ. ಇದೀಗ ತೀರ್ಥಹಳ್ಳಿ ತಾಲ್ಲೂಕಿನ ಕೊಣಂದೂರಿನ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕಿಯಾಗಿ ಸಲ್ಲಿಸುತ್ತಿರುವ ಸೇವೆ, ಮುರಳಿ ಕಲಾವೃಂದ ಸಂಸ್ಥೆಯ ಮೂಲಕ ಶಿಷ್ಯರಿಗೆ ನೀಡುತ್ತಿರುವ ಸಂಗೀತ ಶಿಕ್ಷಣ. ಆಕಾಶವಾಣಿ ಭದ್ರಾವತಿಯಿಂದ ಬಿತ್ತರಗೊಂಡ ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು. ದೂರದರ್ಶನದಲ್ಲೂ ಹಲವಾರು ಬಾರಿ ಕಾರ್ಯಕ್ರಮ ಪ್ರಸಾರ. ಯುವಜನಮೇಳ ಆಯೋಜಿಸಿದ್ದ ವಾರ್ಷಿಕೋತ್ಸವ, ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸುಗಮ ಸಂಗೀತ ಕಾರ್ಯಕ್ರಮಗಳು, ರೋಟರಿ, ಲಯನ್ಸ್‌ ಕ್ಲಬ್‌ಗಳ ವಾರ್ಷಿಕೋತ್ಸವದ ಕಾರ್ಯಕ್ರಮಗಳು, ವಿವಿಧ ಸಮಾವೇಶಗಳು ಮುಂತಾದುವುಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದ ಹಾಡುಗಾರಿಕೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿ ಆಯೋಜಿಸಿದ್ದ ಶಿಬಿರದಲ್ಲಿ ಉತ್ತಮ ಗಾಯಕಿ ಪ್ರಶಸ್ತಿ. ರೋಟರಿ ಕ್ಲಬ್ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿ, ಸರಕಾರಿ ನೌಕರರ ಸಂಘದಿಂದ ಸನ್ಮಾನ, ಪ್ರಶಸ್ತಿ ಪತ್ರ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಶಿವಕುಮಾರಿ ಆರ್ – ೧೯೫೧ ಪುರುಷೋತ್ತಮ ಆರ್‌‌ – ೧೯೬೦ ಶೋಭ ಚಿಕ್ಕನಗೌಡರ್‌‌ – ೧೯೭೫.

* * *

Details

Date:
June 30
Event Category: