Loading Events

« All Events

ನರಸಿಂಹಮೂರ್ತಿ

July 2

೦೨.೦೭.೧೯೭೧ ತಮ್ಮ ಅಭಿವ್ಯಕ್ತಿಗಾಗಿ ಚಿತ್ರಕಲೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿರುವ ನರಸಿಂಹಮೂರ್ತಿಯವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಕೆಂಪನದೊಡ್ಡಗ್ರಾಮ. ತಂದೆ ಆನಂದಮೂರ್ತಿ, ತಾಯಿ ಸರೋಜಮ್ಮ. ಚಿತ್ರಕಲೆಯಿಂದ ಆಸಕ್ತರಾಗಿ ರವೀಂದ್ರಕಲಾ ನಿಕೇತನದಿಂದ ಪಡೆದ ಡಿಪ್ಲೊಮ. ಪೂರ್ಣಪ್ರಮಾಣದ ಕಲಾವಿದರಾಗಿ ಉದ್ಯೋಗ. ರಾಜ್ಯಮಟ್ಟದ ಕಲಾವಿದರ ಶಿಬಿರ – ವಿಜಾಪುರ, ಜಗಳೂರು, ದಕ್ಷಿಣವಲಯದ ಸಾಂಸ್ಕೃತಿಕ ಕೇಂದ್ರದ ಕಲಾ ಶಿಬಿರ, ತಂಜಾವೂರು ಮತ್ತು ಲಲಿತ ಕಲಾ ಅಕಾಡೆಮಿ ಸಹಯೋಗದ ಕಲಾ ಶಿಬಿರಗಳಲ್ಲಿ ಭಾಗಿ. ರಾಷ್ಟ್ರೀಯ ಮಟ್ಟದ ಕಲಾ ಶಿಬಿರಗಳಾದ ಹತ್ತನೆಯ ರಾಷ್ಟ್ರೀಯ ಕಲಾಮೇಳ-ನವದೆಹಲಿ, ಏಳನೆಯ ಕರ್ನಾಟಕ ಕಲಾಮೇಳ-ಬೆಂಗಳೂರು ಮತ್ತು ನವದೆಹಲಿ, ಕಲ್ಪಕುಂಚ ಆರ್ಟ್‌ಗ್ಯಾಲರಿ – ತುಮಕೂರು, ವೆಂಕಟಪ್ಪ ಆರ್ಟ್ ಗ್ಯಾಲರಿ-ಬೆಂಗಳೂರು, ಟು ಡೇಸ್‌ ಆರ್ಟ್ ಎಕ್ಸಿಬಿಷನ್‌, ತುಮಕೂರು, ಶಾಂತಿನಿಕೇತನ ಚಿತ್ರಕಲಾಶಾಲೆ-ಚಿಕ್ಕಮಗಳೂರು, ದಕ್ಷಿಣ ವಲಯ ಸಾಂಸ್ಕೃತಿಕ ಕಲಾಪ್ರದರ್ಶನ-ನಾಗಪುರ, ಭರಣ ಆರ್ಟ್‌ಗ್ಯಾಲರಿ-ಮೈಸೂರು, ಮೈಸೂರು ದಸರಾ ಚಿತ್ರಕಲಾ ಪ್ರದರ್ಶನ, ಸುವರ್ಣ ಸ್ವಾತಂತ್ರೋತ್ಸವ ಕಲಾ ಪ್ರದರ್ಶನ ಮುಂತಾದವುಗಳಲ್ಲಿ ಪ್ರದರ್ಶನಗಳು. ದೆಹಲಿಯ ಆರ್ಟ್‌ ಟುಡೇ ಗ್ಯಾಲರಿ, ಮೈಸೂರಿನ ಭರಣ ಆರ್ಟ್ ಗ್ಯಾಲರಿ, ದಾವಣಗೆರೆಯ ಕುವೆಂಪು ವಿಶ್ವವಿದ್ಯಾಲಯ, ರವೀಂದ್ರಕಾಲೇಜ್‌ ಆಫ್‌ಫೈನ್‌ಆರ್ಟ್ಸ್- ತುಮಕೂರು, ವಿಜಾಪುರದ ಬಿ.ಎಲ್‌.ಡಿ.ಇ ಎಜುಕೇಷನ್‌ ಸೊಸೈಟಿ ಮುಂತಾದೆಡೆಯ ಸಂಗ್ರಹಗಳಲ್ಲಿ ಚಿತ್ರಕಲೆಗಳು ಸಂಗ್ರಹೀತ. ಸಂದ ಪ್ರಶಸ್ತಿ ಗೌರವಗಳು – ಬಿಜಾಪುರದಲ್ಲಿ ನಡೆದ ಕಲಾ ಮಹೋತ್ಸವದಲ್ಲಿ ರಾಜ್ಯಪ್ರಶಸ್ತಿ, ದಕ್ಷಿಣ ವಲಯ ಕ್ಯಾಮ್ಲಿನ್‌ಆರ್ಟ್ ಫೌಂಡೇಷನ್ನಿನಿಂದ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಪಡೆದ ಪ್ರಶಸ್ತಿ ಪ್ರಮುಖವಾದುವುಗಳು.   ಇದೇ ದಿನ ಹುಟ್ಟಿದ ಕಲಾವಿದೆ: ಪ್ರಮೀಳ. ಎ.ಎಸ್‌- ೧೯೭೦

* * *

Details

Date:
July 2
Event Category: