Loading Events

« All Events

  • This event has passed.

ನಾಗತಿಹಳ್ಳಿ ಚಂದ್ರಶೇಖರ್

August 15, 2023

೧೫-೮-೧೯೫೮ ಸಾಹಿತಿ, ಚಲನಚಿತ್ರ ನಿರ್ದೇಶಕ, ಪರಿಸರವಾದಿ, ಸಮಾಜಸೇವಕ ಚಂದ್ರಶೇಖರರವರು ಹುಟ್ಟಿದ್ದು ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣ ನಾಗತಿಹಳ್ಳಿ. ಮೈಸೂರಿನ ಮಹಾರಾಜ ಸಂಜೆ ಕಾಲೇಜಿನಿಂದ ಬಿ.ಎ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂಟು ಚಿನ್ನದ ಪದಕ, ಎರಡು ನಗದು ಬಹುಮಾನದೊಡನೆ ಪಡೆದ ಸ್ನಾತಕೋತ್ತರ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಕಾಲೇಜಿನಲ್ಲಿ ಉಪನ್ಯಾಸಕರಾಗಿ ೧೫ ವರ್ಷ ಸೇವೆ. ಮನಸ್ಸಿನ ತುಡಿತಗಳಿಗೆ ದಾರಿತೋರಲು ಆಯ್ದುಕೊಂಡ ಮಾಧ್ಯಮ ಕಿರುತೆರೆಯಾದರೆ, ರೀಮೇಕ್ ಸಂಸ್ಕೃತಿಯ ವಿರುದ್ಧ ಹೋರಾಡ ಹೊರಟಿದ್ದು ಚಲನಚಿತ್ರ ಮಾಧ್ಯಮದ ಮೂಲಕ. ಸಾಹಿತಿಯಾಗಿಯೂ ಹಲವಾರು ಕೃತಿ ರಚನೆ. ಕಥಾಸಂಕಲನ-ಹದ್ದುಗಳು, ನನ್ನ ಪ್ರೀತಿಯ ಹುಡುಗನಿಗೆ, ಮಲೆನಾಡಿನ ಹುಡುಗಿ ಬಯಲು ಸೀಮೆಯ ಹುಡುಗ, ಸನ್ನಿ, ಅಕಾಲ, ಪ್ರೇಮಕಥಾ ಸಂಪುಟ, ಛಿದ್ರ. ಕಾದಂಬರಿ-ಬಾ ನಲ್ಲೆ ಮಧುಚಂದ್ರಕೆ, ಚುಕ್ಕಿ ಚಂದ್ರಮರ ನಾಡಿನಲ್ಲಿ, ವಲಸೆ ಹಕ್ಕಿಯ ಹಾಡು. ಸಂಪಾದಿತ-ಶತಮಾನದಂಚಿನಲಿ. ಪ್ರವಾಸಕಥನ-ಅಮೆರಿಕಾ ಪ್ರವಾಸಕಥನ, ಫ್ರಾನ್ಸ್ ಪ್ರವಾಸಕಥನ. ಪತ್ರಾಂಕಣ ರೂಪದ ಆತ್ಮಕಥನ-ನನ್ನ ಪ್ರೀತಿಯ ಹುಡುಗಿಗೆ ನಾಲ್ಕು ಸಂಪುಟಗಳಲ್ಲಿ. ಹಲವಾರು ಚಲನಚಿತ್ರಗಳಿಗೆ ಒದಗಿಸಿದ ಚಿತ್ರಕತೆ, ಸಂಭಾಷಣೆ, ಸಾಹಿತ್ಯ-ಕಾಡಿನ ಬೆಂಕಿ, ಸಂಕ್ರಾಂತಿ, ಪ್ರಥಮ ಉಷಾಕಿರಣ, ಉದ್ಭವ, ಊರ್ವಶಿ, ನಿರ್ದೇಶನ, ಚಿತ್ರಸಂಭಾಷಣೆ, ಸಾಹಿತ್ಯ- ಬಾನಲ್ಲೆ ಮಧುಚಂದ್ರಕೆ, ಕೊಟ್ರೇಶಿಯ ಕನಸು, ಅಮೆರಿಕಾ ! ಅಮೆರಿಕಾ !, ಹೂಮಳೆ, ನನ್ನ ಪ್ರೀತಿಯ ಹುಡುಗಿ, ಸೂಪರ್‌ಸ್ಟಾರ್, ಪ್ಯಾರಿಸ್‌ಪ್ರಣಯ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ. ಹಲವಾರು ದೈನಂದಿನ ಧಾರಾವಾಹಿಗಳ ನಿರ್ದೇಶನ-ಪ್ರತಿಬಿಂಬ, ಕಾವೇರಿ, ಭಾಗ್ಯ, ವಠಾರ, ಪುಣ್ಯ, ಅಪಾರ್ಟ್‌ಮೆಂಟ್, ಬೆಳ್ಳಿಚುಕ್ಕಿ. ಇದೀಗ ಪ್ರಸಾರವಾಗಲಿರುವ ಒಲವೆ ನಮ್ಮ ಬದುಕು. ಫ್ರಾನ್ಸ್ ಪ್ರವಾಸಕಥನ ಕರ್ನಾಟಕ ವಿ.ವಿ.ದ ೩ನೇ ಪದವಿ ತರಗತಿಗೆ ಪಠ್ಯವಾಗಿ ಆಯ್ಕೆ. ಸಿನಿಮಾ ಸಾಹಿತ್ಯ, ನಿರ್ದೇಶನಕ್ಕಾಗಿ ಸಂದ ಪ್ರಶಸ್ತಿಗೆ ಲೆಕ್ಕವಿಲ್ಲ. ಕಾಡಿನ ಬೆಂಕಿ, ಕೊಟ್ರೇಶಿಯ ಕನಸು, ಅಮೆರಿಕಾ! ಅಮೆರಿಕಾ !, ಹೂಮಳೆ ರಾಷ್ಟ್ರಪ್ರಶಸ್ತಿ ಪಡೆದರೆ ಮತ್ತೆ ಹಲವಾರು ಚಲನಚಿತ್ರಗಳು ರಾಜ್ಯಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಬರ್ಕಲಿ ತರಂಗಿಣಿ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಉದಯ ಟಿವಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳ ಗರಿ. ಸಮಾಜ ಸೇವೆಗಾಗಿ ಸ್ಥಾಪಿಸಿದ್ದು (೧೯೮೫) ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ.’ ಹುಟ್ಟುಹಬ್ಬದ ಸಮಾರಂಭದ ದಿನ ಪುಸ್ತಕ ಪ್ರಕಟಣೆ, ಅಂತರಜಾತಿಯ ವಿವಾಹ, ರಕ್ತದಾನ ಶಿಬಿರ, ಸರಳ ವಿವಾಹ ಮುಂತಾದ ಸಾಮಾಜಿಕ ಕಾರ‍್ಯಕ್ರಮಗಳು.

Details

Date:
August 15, 2023
Event Category: