Loading Events

« All Events

  • This event has passed.

ಪಂ. ರಾಮರಾವ್ ವಿ. ನಾಯಕ್

September 28, 2023

೨೮.೦೯.೧೯೦೯ ೨೧.೧೦.೧೯೯೮ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಶ್ರೀಮಂತಗೊಳಿಸಿದವರಲ್ಲಿ ಅಗ್ರಗಣ್ಯರೆನಿಸಿದ್ದ ರಾಮರಾವ್ ವಿ ನಾಯಕ್‌ರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ವೆಂಕಾಜಿರಾವ್‌ ನಾಯಕ್‌, ತಾಯಿ ಲಕ್ಷ್ಮೀಬಾಯಿ. ಬಾಲ್ಯದಲ್ಲಿ ಗೊಲ್ಲರ ಹಾಡಿನ ಸವಿ. ಗ್ರಾಮಾಫೋನ್ ರೆಕಾರ್ಡ್ ಅಂಗಡಿ ಸ್ನೇಹಿತನಿಂದ ಕೇಳುತ್ತಿದ್ದ ಸಂಗೀತ. ಹಾರ್ಮೋನಿಯಂವಾದಕ ಶ್ರೀನಿವಾಸ ರಾವ್‌ರವರಿಂದ ಸಂಗೀತ ಕಲಿಕೆ. ಒಂಭತ್ತನೆಯ ವಯಸ್ಸಿನಲ್ಲೇ ಕಲಿತ ಸಂಗೀತವನ್ನು ಇತರರಿಗೂ ಕಲಿಸಿ ಹುಡುಕಿಕೊಂಡ ಸಂಪಾದನೆಯ ಮಾರ್ಗ. ಗುಬ್ಬಿವೀರಣ್ಣ, ಹಿರಣ್ಣಯ್ಯ, ವರದಾಚಾರ್‌ ಕಂಪನಿಯ ನಾಟಕಗಳಲ್ಲಿ ವಹಿಸುತ್ತಿದ್ದ ಬಾಲಧ್ರುವ, ಪ್ರಹ್ಲಾದ, ಸ್ತ್ರೀಪಾತ್ರಗಳು. ಪಂ. ಗೋವಿಂದ ವಿಠಲಭಾವೆ, ಸ್ವಾಮಿ ವಲ್ಲಭದಾಸ್ ಮತ್ತು ಉಸ್ತಾದ್‌ ಅತ್ತಾಹುಸೇನ್‌ಖಾನ್‌ರವರಲ್ಲಿ ಆಗ್ರಾಘರಾಣೆಯ ಕಠಿಣ ತರಬೇತಿ. ಹಾಡಿನ ಜೊತೆಗೆ ಹಾರ‍್ಮೋನಿಯಂ ವಾದನ. ತನಿ ಹಾಡುಗಾರಿಕೆ ಜೊತೆಗೆ ಸುಪ್ರಸಿದ್ಧ ಸಂಗೀತಗಾರರಿಗೆ ನೀಡುತ್ತಿದ್ದ ಹಾರ್ಮೋನಿಯಂ ಸಹಕಾರ. ಬರೋಡಕ್ಕೆ ಹೋಗಿ ಉಸ್ತಾದ್‌ ಫಯಾಜ್‌ಖಾನರಲ್ಲಿ ಆಗ್ರಾಘರಾಣೆ ಹೆಚ್ಚಿನ ಕಲಿಕೆ. ಅನೇಕ ರಾಗಗಳ ಖಯಾಲ್ ರಚನೆ. ಅಪರೂಪದ ‘ನಾಗರಂಜನಿ’ ರಾಗಸಂಯೋಜನೆ. ಆಕಾಶವಾಣಿ ರಾಷ್ಟ್ರೀಯ ಕಾರ್ಯಕ್ರಮ, ಮೈಸೂರು ದಸರಾ, ಅಕಾಡೆಮಿಗಳಿಗಾಗಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ. ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಕಲಾಭೂಷಣ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಹಾಗೂ ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಅರಮನೆಯ ರಾಜ್ಯ ಸಂಗೀತವಿದ್ವಾನ್ ಪದವಿ, ಮಧ್ಯಪ್ರದೇಶದ ಪ್ರತಿಷ್ಟಿತ ತಾನ್‌ಸೇನ್‌ ಪ್ರಶಸ್ತಿ. ಮುಂತಾದವು.   ಇದೇ ದಿನ ಹುಟ್ಟಿದ ಕಲಾವಿದರು  ಗೌರಾಂಗ ಕೋಡಿಕಲ್‌ – ೧೯೪೬ ಶಾಂತಾಶಂಕರ್ ಜಿ. – ೧೯೫೬ ಶಾರದಾ ಶಶಿಧರ್ – ೧೯೫೭

* * *

Details

Date:
September 28, 2023
Event Category: