Loading Events

« All Events

  • This event has passed.

ಪಂ. ವಿನಾಯಕ ತೊರವಿ

September 4, 2023

೦೪.೦೯.೧೯೪೮ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜರಲ್ಲೊಬ್ಬರಾದ ವಿನಾಯಕ ತೊರವಿಯವರು ಹುಟ್ಟಿದ್ದು ವಿನಾಯಕ ಚತುರ್ಥಿಯಂದು ರಾಣಿಬೆನ್ನೂರಿನಲ್ಲಿ. ತಂದೆ ಕೀರ್ತನಕಾರರಾದ ಮಲ್ಹಾರ ರಾವ್ ತೊರವಿ, ತಾಯಿ ಅನುಸೂಯಾ ಬಾಯಿ ತೊರವಿ. ಎಳವೆಯಿಂದಲೇ ಸಂಗೀತದಲ್ಲಿ ಆಸಕ್ತಿ, ವಿದ್ವಾನ್ ತಮ್ಮಣ್ಣ ಗುರುವರಲ್ಲಿ ಪ್ರಾರಂಭಿಕ ಶಿಕ್ಷಣ. ನಾರಾಯಣ ದಂಡಾಪುರ ಮತ್ತು ನಾರಾಯಣ ಮಜುಂದಾರ್‌ರವರಲ್ಲಿ ಮುಂದುವರೆದ ಶಿಕ್ಷಣ. ಗುರುರಾವ್ ದೇಶಪಾಂಡೆಯವರಲ್ಲಿ ಗುರುಕುಲ ಪದ್ಧತಿ ಶಿಕ್ಷಣ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಮ್ಯೂಸಿಕ್ ಪದವಿ ರ‍್ಯಾಂಕ್‌ ವಿಜೇತರು. ಕೆನರಾ ಬ್ಯಾಂಕಿನಲ್ಲಿ ಉನ್ನತ ಅಧಿಕಾರಿಯ ಹುದ್ದೆ. ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ. ಆಗ್ರಾ ಘರಾಣ ಮತ್ತು ಗ್ವಾಲಿಯರ್ ಘರಾಣದಲ್ಲಿ ಪಡೆದ ವಿದ್ವತ್‌ ಮತ್ತು ಪಕ್ವತೆ. ಹಲವಾರು ಬಂದಿಶ್ ಮತ್ತು ತರಾನಗಳ ರಚನೆ. ಕನ್ನಡ, ಮರಾಠಿ, ಹಿಂದಿಯಲ್ಲಿ ನಡೆಸಿಕೊಟ್ಟ ಭಕ್ತಿಗೀತೆಗಳ ಕಾರ್ಯಕ್ರಮ. ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳಿಂದ ಹಲವಾರು ಬಾರಿ ಪ್ರಸಾರವಾದ ಸಂಗೀತ ಕಾರ್ಯಕ್ರಮ. ದಸರಾ ಮಹೋತ್ಸವದ ದರ್ಬಾರ್ ಹಾಲ್, ಪುಣೆಯ ಸವಾಯಿ ಗಂಧರ್ವ ಸಂಗೀತ ಮಹೋತ್ಸವ, ಕೋಲ್ಕತ್ತಾದ ಸಂಗೀತ ಸಂಶೋಧನ ಅಕಾಡೆಮಿ, ದೆಹಲಿಯ ಭಾವೈಕ್ಯ ಸಂಗೀತ ಸಮಾವೇಶ, ಚನ್ನೈನ ಸಂಗೀತ ಮಹೋತ್ಸವ, ಸಾರ್ಕ್‌‌ದೇಶಗಳ ಅಂತಾರಾಷ್ಟ್ರೀಯ ಸಮಾವೇಶ, ಹೈದರಾಬಾದಿನ ರಾಷ್ಟ್ರೀಯ ಭಾವೈಕ್ಯ ಸಮಾವೇಶ ಸಂಗೀತೋತ್ಸವ, ಗ್ವಾಲಿಯರ್‌ನ ತಾನಸೇನ ಐದುನೂರನೇ ಜಯಂತಿ ಉತ್ಸವ ಮುಂತಾದವುಗಳಲ್ಲಿ ಕಾರ್ಯಕ್ರಮಗಳು. ರಾಜ್ಯ ಸಂಗೀತ ನಾಟಕ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ, ಭಾರತ ಸರ್ಕಾರದ ಫೆಲೋಶಿಪ್‌, ಮುಂಬಯಿಯ ಸುರ್‌ಮಣಿ ಸುರಸಿಂಗಾರ್‌ ಪ್ರಶಸ್ತಿ, ಟಿ.ಚೌಡಯ್ಯ ಸ್ಮಾರಕ ಸಂಗೀತರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಗೋವಿಂದರಾಜ್ ಬಿ.ಆರ್. – ೧೯೨೩ ಕೃಷ್ಣಪ್ರಸಾದ್ ಜಿ.ವಿ. – ೧೯೪೩ ಟಿ.ಕೆ. ಗಂಗಾಧರ ಪತ್ತಾರ – ೧೯೫೧ ಭಗವಂತಪ್ಪ ಹೂಗಾರ – ೧೯೫೩

* * *

Details

Date:
September 4, 2023
Event Category: