Loading Events

« All Events

  • This event has passed.

ಬಿ. ಜಯಮ್ಮ

November 26, 2023

೨೬೧೧೧೯೧೫ ೨೦೧೨೧೯೮೮ ಬಹುಮುಖ ಪ್ರತಿಭೆಯ ವೃತ್ತಿ ರಂಗಭೂಮಿ ಕಲಾವಿದೆ. ಜಯಮ್ಮನವರು ಹುಟ್ಟಿದ್ದು ಬೆಂಗಳೂರು. ತಂದೆ ಟಿ.ಎನ್. ಮಲ್ಲಪ್ಪ, ತಾಯಿ ರಂಗ ಕಲಾವಿದೆ ಬಿ. ಕಮಲಮ್ಮ. ತಂದೆಗೆ ಮಗಳನ್ನು ಎಂ.ಬಿ.ಬಿ.ಎಸ್. ಓದಿಸಬೇಕೆಂಬ ಆಸೆ. ಹುಡುಗಿಗೆ ಸಂಗೀತ, ನೃತ್ಯ, ನಾಟಕಗಳಲ್ಲಿ ಅಭಿರುಚಿ. ರಸಿಕ ಜನಾನಂದ ನಾಟಕ ಸಭಾ ಕಂಪನಿಯ ನಾಟಕಗಳಲ್ಲಿ ಬಾಲ ಪಾತ್ರಗಳ ನಟಿ. ಸೀತಾಕಲ್ಯಾಣ ನಾಟಕದ ಸೀತಾ ಪಾತ್ರದಿಂದ ನಟಿಯಾಗಿ ಗಳಿಸಿದ ಕೀರ್ತಿ. ದಸ್ತಗೀರ್ ಸಾಹೇಬರ ನಾಟಕ ಸಂಸ್ಥೆ, ಅಗಳಿ ತಿಮ್ಮಪ್ಪಯ್ಯನವರ ನಾಟಕಸಂಸ್ಥೆ, ಬಾಳಬಸವೇಗೌಡರ ನಾಟಕ ಸಂಸ್ಥೆಗಳಲ್ಲಿ ದೊರೆತ ಪ್ರಮುಖಪಾತ್ರ. ಗುಲೇಬಕಾವಲಿ ಚಿತ್ರತಾರೆ, ಸದಾರಮೆಯ ಚಂಚುಕುಮಾರಿ ಪಾತ್ರದಿಂದ ಪ್ರೇಕ್ಷಕರ ಮೆಚ್ಚುಗೆ. ಗುಬ್ಬಿವೀರಣ್ಣನವರ ನಾಟಕ ಸಂಸ್ಥೆ ಪ್ರವೇಶ. ವೀರಸಿಂಹ ಚರಿತ್ರೆಯಲ್ಲಿ ದೊರೆತ ಪ್ರಮುಖ ನಟಿ ಪಾತ್ರ. ರಾಜಭಕ್ತಿಯ ಮೃಣಾಲಿನ ಪಾತ್ರದಿಂದ ರಂಗಭೂಮಿಯಲ್ಲಿ ದೊರೆತ ಸುಭದ್ರಸ್ಥಾನ. ಶ್ರೀಕೃಷ್ಣ ಪಾರಿಜಾತ, ರುಕ್ಮಿಣಿ ಕಲ್ಯಾಣ, ಶಿವಜಲಂಧರ, ಸತಿ ಸಾವಿತ್ರಿ, ರಾಮಾಯಣ ಮುಂತಾದ ನಾಟಕಗಳಲ್ಲಿ ಸತ್ಯಭಾಮೆ, ರುಕ್ಮಿಣಿ, ಬೃಂದಾದೇವಿ, ಸಾವಿತ್ರಿ, ಸೀತಾದೇವಿಯಾಗಿ ಗಳಿಸಿದ ಪ್ರಖ್ಯಾತಿ, ಕೆ. ಹಿರಣ್ಯಯ್ಯನವರ ದೇವದಾಸಿಯ ಮಣಿಮಂಜರಿ ಪಾತ್ರದಿಂದ ಗಳಿಸಿದ ಜನ ಮನ್ನಣೆ. ತ್ರಿಭಾಷಾ ತಾರೆಯಾಗಿ ಹರಿಮಾಯೆ, ಹಿಸ್ ಲವ್ ಅಫೇರ್ (ಮೂಕಿಚಿತ್ರ) ಸದಾರಮೆ, ಸುಭದ್ರ, ಜೀವನ ನಾಟಕ, ಸಾಕ್ಷಾತ್ಕಾರ, ಇಮ್ಮಡಿ ಪುಲಿಕೇಶಿ, ಅಣ್ಣ-ತಂಗಿ (ಕನ್ನಡ), ಭರ್ತ್ಯಹರಿ (ತಮಿಳು), ಸ್ವರ್ಗಸೀಮ (ತೆಲುಗು) ಮುಂತಾದ ಚಲನಚಿತ್ರಗಳ ನಟಿ, ವಿಧಾನಸಭಾ ಸದಸ್ಯೆಯಾಗಿ ಸಲ್ಲಿಸಿದ ಸೇವೆ. ಕರ್ನಾಟಕ ನಾಟಕ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಆನೂರು ಎಸ್. ರಾಮಕೃಷ್ಣ  – ೧೯೩೧ ಪ್ರಹ್ಲಾದಾಚಾರ್ಯ ಹಾವೇರಿ – ೧೯೫೫

Details

Date:
November 26, 2023
Event Category: