Loading Events

« All Events

ರಂ.ಶಾ. ಲೋಕಾಪುರ

July 13

೧೩-೭-೧೯೩೨ ಕನ್ನಡ ಸಾಹಿತ್ಯ ಲೋಕದಲ್ಲಿ ರಂ.ಶಾ.ರೆಂದೇ ಪ್ರಸಿದ್ಧರಾಗಿರುವ ರಂಗನಾಥ ಶಾಮಾಚಾರ‍್ಯ ಲೋಕಾಪುರರವರು ಹುಟ್ಟಿದ್ದು ಜಮಖಂಡಿ ತಾಲ್ಲೂಕಿನ ಹುನ್ನೂರಿನಲ್ಲಿ. ತಂದೆ ಶಾಮಾಚಾರ‍್ಯರು, ತಾಯಿ ಇಂದಿರಾಬಾಯಿ. ಪ್ರಾರಂಭಿಕ ಶಿಕ್ಷಣ ಬೆಳಗಾವಿಯಲ್ಲಿ. ತಂದೆ ಹಳಗನ್ನಡ, ಛಂದಸ್ಸುಗಳಲ್ಲಿ ಅಪಾರ ಪರಿಶ್ರಮ ಪಡೆದಿದ್ದುರ ಫಲವಾಗಿ ಬಾಲ್ಯದಿಂದಲೇ ರಂ.ಶಾ. ಮೇಲೂ ಪ್ರಭಾವ ಬೀರಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿತು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ರಂ.ಶಾ.ರವರಿಗೆ ಕನ್ನಡ, ಸಂಸ್ಕೃತದಲ್ಲಿ ಬೆಳೆದ ಆಸಕ್ತಿ. ಪ್ರ.ಗೋ.ಕುಲಕರ್ಣಿಯವರಿಂದ ಹಳೆಗನ್ನಡ ಪಾಠ. ಹಿಂದಿ ಭಾಷೆ ಕಲಿತು ಹಿಂದಿ ಸಾಹಿತ್ಯವನ್ನು ಅಭ್ಯಾಸ ಮಾಡಿದ್ದಲ್ಲದೆ ಪ್ರೇಮಚಂದರ ಎಂಟು ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದ. ಬೆಳಗಾವಿಯಲ್ಲಿ ಇಂಟರ್ ಮೀಡಿಯೆಟ್ ಕಾಲೇಜು, ಕೊಲ್ಹಾಪುರದ ರಾಜಾರಾಂ ಕಾಲೇಜಿನಿಂದ ಬಿ.ಎಸ್ಸಿ ಪದವಿ. ಪ್ರಾಚಾರ‍್ಯರಾಗಿದ್ದ ವಿ.ಕೃ. ಗೋಕಾಕರ ಸಂಪರ್ಕ. ಇಂಗ್ಲಿಷ್ ಸಾಹಿತ್ಯದ ಪರಿಚಯ. ಉದ್ಯೋಗಕ್ಕಾಗಿ ಸೇರಿದ್ದು ಮುಂಬೈನ ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ ನೌಕರನಾಗಿ. ಬದುಕಿನುದ್ದಕ್ಕೂ ಕಚೇರಿ, ಹುದ್ದೆ, ಬಡ್ತಿ ಈ ಜಂಜಾಟದಲ್ಲೇ ಕಳೆದ ಬದುಕು. ಪಿ.ಜಿ. ವುಡ್‌ಹೌಸರ ಪುಸ್ತಕಗಳನ್ನೋದಿ ಪ್ರಭಾವಿತರಾಗಿ ಸುಧಾ, ಮಯೂರ ಪತ್ರಿಕೆಗೆ ಬರೆದ ಹಾಸ್ಯ ಲೇಖನಗಳು. ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಇವರ ‘ಸಾವಿತ್ರಿ’ ಕಾದಂಬರಿಗೆ ಮೊದಲ ಬಹುಮಾನ. ಟಿ.ಎಸ್. ರಂಗಾ ಇದೇ ಹೆಸರಿನಿಂದ ತೆಗೆದ ಚಲನಚಿತ್ರ. ಎರಡನೆಯ ಕಾದಂಬರಿ ‘ತಾಯಿ ಸಾಹೇಬ.’ ಇದೇ ಹೆಸರಿನಿಂದ ಗಿರೀಶ್ ಕಾಸರವಳ್ಳಿಯವರು ಮಾಡಿದ ಚಲನಚಿತ್ರ. ಹಲವಾರು ಸಣ್ಣಕಥೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿತ. ಸಣ್ಣಕಥೆಗಳು-ಕಥಾಸಂಕಲನ ಪ್ರಕಟಿತ. ಅನಂತ ಮೂರ್ತಿಯವರ ಸಂಸ್ಕಾರ ಕಾದಂಬರಿಯನ್ನು ಮರಾಠಿಗೆ ಅನುವಾದ. ‘ಹೋರಪಳ’ ಮರಾಠಿ ಲೇಖಕರಾದ ವಿ.ಗ. ಕಾನಿಟಕರರ ಕಾದಂಬರಿ. ‘ಅಗ್ನಿದಿವ್ಯ’ ಹೆಸರಿನಿಂದ ಕನ್ನಡಕ್ಕೆ ತಂದ ಕೀರ್ತಿ. ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಮರಾಠಿಗೆ ಅನುವಾದ. ಇವರ ಮೂರನೆಯ ಕಾದಂಬರಿ ‘ನೂರು ತಲೆ ಹತ್ತು ಕಾಲು’ ಪ್ರಕಟಿತ. ಜೊತೆಗೆ ಇವರು ನಡೆಸಿದ್ದು ಕನ್ನಡ-ಮರಾಠಿ ಭಾಷೆಗಳ ತೌಲನಿಕ ಅಧ್ಯಯನ. ಇದರ ಫಲ ಸಂಶೋಧನಾ ಪ್ರಬಂಧ ‘ಹಳೆಗನ್ನಡ ಮತ್ತು ಮರಾಠಿ’ (ಕನ್ನಡ ವಿಶ್ವವಿದ್ಯಾಲಯ ಹಂಪಿ) ೧೯೯೪ರಲ್ಲಿ ಪ್ರಕಟಿತ. ಇದೇ ಪುನರ್‌ಲೇಖನಗೊಂಡು ಮರಾಠಿ ಭಾಷೆಯಲ್ಲಿ “ಜ್ಞಾನೇಶ್ವರೀ ಕಾಲೀನ ಮರಾಠಿ ಭಾಷೇವಾರ ಕನ್ನಡ ಪ್ರಭಾವ” ೩ ಸಂಪುಟಗಳಲ್ಲಿ ಸ್ವಂತ ಖರ್ಚಿನಲ್ಲಿ ಪ್ರಕಟಿತ. ಮಹಾರಾಷ್ಟ್ರದ ಗ್ರಂಥೋತ್ತೇಜಕ ಸಂಸ್ಥೆಯಿಂದ ಈ ಕೃತಿಗೆ ಪುರಸ್ಕಾರ. ಬ್ರೆಕ್ಟ್‌ನ ನಾಟಕ ಗುಡ್ ಪರ್ಸನ್ ಆಫ್ ಶೆಜುವಾನ್ ‘ಸಂಕಾನ್ತೇಯ ಚಂದ್ರಿ’ ಎಂಬ ಹೆಸರಿನಿಂದ ಅನುವಾದ. ಇದೀಗ ಫೆಲೊಶಿಪ್ ಪಡೆದು ನಾಥ್ ಸಂಪ್ರದಾಯದ ಬಗ್ಗೆ ಸಂಶೋಧನಾ ಗ್ರಂಥ ರಚನೆಯಲ್ಲಿ ಮಗ್ನರು.   ಇದೇ ದಿನ ಹುಟ್ಟಿದ ಸಾಹಿತಿ : ಕಡಿದಾಳ್ ಮಂಜಪ್ಪ – ೧೯೦೭

Details

Date:
July 13
Event Category: