Loading Events

« All Events

  • This event has passed.

ರವೀಂದ್ರ ಯಾವಗಲ್

November 27, 2023

೨೭.೧೧.೧೯೫೯ ಪ್ರಸಿದ್ಧ ತಬಲ ವಾದಕರಾದ ರವೀಂದ್ರ ಯಾವಗಲ್ ರವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ತಂದೆ ರಾಮಚಂದ್ರ ಯಾವಗಲ್, ತಾಯಿ ಪಾರ್ವತಿಬಾಯಿ. ೪ನೇ ವಯಸ್ಸಿನಿಂದಲೇ ತಂದೆಯಿಂದ ತಬಲವಾದನ ಶಿಕ್ಷಣ. ವೀರಣ್ಣ ಕಾಮ್‌ಕಾರ್ ಮತ್ತು ಶೇಷಗಿರಿ ಹಾನಗಲ್‌ರ ಬಳಿ ೧೩ ವರ್ಷಕಾಲ ತಬಲವಾದನದ ಕಠಿಣ ಶಿಕ್ಷಣ. ಪಂ. ಲಾಲ್‌ಜಿ ಗೋಖಲೆ ಮತ್ತು ಉಸ್ತಾದ್ ಅಹ್ಮದ್‌ಖಾನ್‌ರವರ ಮಾರ್ಗದರ್ಶನ. ಮಧ್ಯಪ್ರದೇಶದ ಇಂದಿರಾ ಕಲಾ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಪಡೆದ ಸ್ನಾತಕೋತ್ತರ ಪದವಿ. ಬಾಲ ಪ್ರತಿಭೆಯ ರವೀಂದ್ರ ಯಾವಗಲ್‌ರವರು ೧೦ನೇ ವಯಸ್ಸಿಗೇ ಕುಂದಗೋಳದ ಸವಾಯ್ ಗಂಧರ್ವ ಸಂಗೀತೋತ್ಸವದಲ್ಲಿ ನಡೆಸಿಕೊಟ್ಟ ಮೊಟ್ಟಮೊದಲ ಕಾರ್ಯಕ್ರಮ. ಕರ್ನಾಟಕದೆಲ್ಲೆಡೆಯಲ್ಲದೆ ಮುಂಬಯಿ, ಹೈದರಾಬಾದ್, ಔರಂಗಾಬಾದ್, ಮುಂತಾದೆಡೆ ನೀಡಿದ ತಬಲ ಏಕವ್ಯಕ್ತಿ ಕಾರ್ಯಕ್ರಮ. ಮಲ್ಲಿಕಾರ್ಜುನ ಮನಸೂರ್, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಪಂ. ರಾಮ್‌ಮರಾಠೆ, ಪಂ. ರಾಮರಾವ್‌ನಾಯಕ್, ಬಸವರಾಜ ರಾಜಗುರು, ಜಸ್‌ರಾಜ್ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಸಂಗೀತ ಕಾರ್ಯಕ್ರಮಗಳಿಗೆ ನೀಡಿದ ತಬಲ ಸಹಕಾರ. ದೇಶವಿದೇಶಗಳಲ್ಲಿ ನೀಡಿದ ಸಂಗೀತ ಕಾರ್ಯಕ್ರಮ. ಅಮೆರಿಕಾ, ಫ್ರಾನ್ಸ್, ಈಜಿಪ್ಟ್, ಹಾಂಗ್‌ಕಾಂಗ್‌ ಮುಂತಾದೆಡೆ ನೀಡಿದ ಪ್ರಾತ್ಯಕ್ಷಿಕೆ ಹಾಗೂ ಸಂಗೀತ ಕಾರ್ಯಕ್ರಮ, ಆಕಾಶವಾಣಿ ಮತ್ತು ದೂರದರ್ಶನದ ಉನ್ನತಶ್ರೇಣಿಯ ಕಲಾವಿದರು, ಹಲವಾರು ಕಾರ್ಯಕ್ರಮ ಪ್ರಸಾರ, ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಪಠ್ಯಪುಸ್ತಕ ಸಮಿತಿ ಸದಸ್ಯರು. ಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡಮಿಯಿಂದ ನಾದನಿಧಿ, ಸೊರಬದ ಸಂಗೀತ, ಸಂಗೀತ ಸೇವಾ ಸಮಿತಿಯಿಂದ ಚಂದ್ರಹಾಸ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು ಜಾನಕಿ ಅಯ್ಯರ್ – ೧೯೩೨ ಶಚಿದೇವಿ ಸುಧಾಕರ್ – ೧೯೪೮ ಶಂಕರ್ ಎಸ್. – ೧೯೫೦

Details

Date:
November 27, 2023
Event Category: