Loading Events

« All Events

  • This event has passed.

ರಾಮಚಂದ್ರ ಕೊಟ್ಟಲಗಿ

August 5, 2023

೫-೮-೧೯೧೬ ೨೦-೯-೧೯೭೫ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದ ರಾಮಚಂದ್ರ ಕೊಟ್ಟಲಗಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಮನಗೋಳಿ ಎಂಬ ಹಳ್ಳಿ. ತಂದೆ ಕೃಷ್ಣರಾವ್ ಕೊಟ್ಟಲಗಿಯವರು ಒಳ್ಳೆಯ ವೈದ್ಯರು, ಕೃಷಿಕರು. ಪ್ರಾರಂಭಿಕ ಶಿಕ್ಷಣ ಹಳ್ಳಿಯಲ್ಲಿಯೇ. ಎಡಪಂಥೀಯ ಸಾಹಿತ್ಯ, ಲೆನಿನ್, ಮಾರ್ಕ್ಸ್, ಪ್ರಭಾವಕ್ಕೊಳ ಗಾಗಿದ್ದರು. ಬೇಂದ್ರೆ, ಗೋಕಾಕ್, ಮುಗಳಿಯವರ ಪ್ರಭಾವದಿಂದ ಕೃತಿ ರಚನೆಗಾರಂಭ. ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಭಾಗಿ. ಕೊಟ್ಟಲಗಿಯವರು ಬರೆದ ಕೃತಿ ಹೆಚ್ಚಿಲ್ಲ. ಆದರೆ ಮೌಲ್ಯಯುತವಾದ ಕೃತಿಗಳು. ಮೊದಲ ಕಾದಂಬರಿ ದೀಪನಿರ್ವಾಣ. ‘ದೀಪ ಹತ್ತಿತು’ ಇದರ ಎರಡನೆಯ ಭಾಗ. ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ ಬದುಕಿನ ಕಥೆಯ ಅನಾವರಣ. ಉತ್ತರ ಕರ್ನಾಟಕದ ಬದುಕನ್ನು ಅರ್ಥೈಸಿಕೊಳ್ಳಲು ಈ ಕಾದಂಬರಿ ಬಹು ಸಹಕಾರಿ. ಈ ಕಾದಂಬರಿಗಳು ಕೊಟ್ಟಲಗಿಯವರ ಸಹೋದರಿಯಿಂದ ಮರಾಠಿಗೂ ಅನುವಾದ. ‘ವಿಲಾಪಿಕಾ’, ‘ವೈನಿ ಸತ್ತಾಗ ನಾನ್ಯಾ ಅತ್ತಾಗ’ ಮತ್ತು ‘ನಾನು ಬಾಳ್ಯಾ ಜೋಶಿ’ ಇನ್ನಿತರ ಪ್ರಸಿದ್ಧ ಕಾದಂಬರಿಗಳು. ಪ್ರತಿಯೊಬ್ಬ ಬರಹಗಾರರೂ ಬರಹವನ್ನು ಕವನದಿಂದಲೇ ಆರಂಭಿಸುವಂತೆ ಕೊಟ್ಟಲಗಿಯವರು ಬರೆದದ್ದೂ ಮೊದಲು ಕವನಗಳೇ. ‘ಪಿಪಾಸೆ’ ಮೊದಲ ಕವನ ಸಂಕಲನ. ‘ಪ್ರತಿಮಾ’ ಮತ್ತೊಂದು ಕವನ ಸಂಕಲನ. ಎರಡು ಕಥಾ ಸಂಕಲನಗಳು ಪ್ರಕಟಿತ-ಗೀಚುಗೆರೆ ಹಾಗೂ ಚೈತ್ರ ಪಲ್ಲವ. ‘ಭಾಷಾ’ ಸಮನ್ವಯದ ಸಮಸ್ಯೆ’ ಮತ್ತೊಂದು ಪ್ರಮುಖ ಕೃತಿ. ಆ ಕೃತಿ ಚಿಕ್ಕದಾಗಿದ್ದರೂ ಚಿಂತನಕ್ಕೆ ಹೆಚ್ಚುವ ಕೃತಿ. ಹಲವು ನಾಟಕಗಳ ರಚನೆ. ಕೆಲವು ನಾಟಕಗಳು ಪು.ಲ. ದೇಶಪಾಂಡೆ ಯವರಿಂದ ಮರಾಠಿಗೂ ಅನುವಾದ. ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಯಲ್ಲಿ ಪಡೆದ ಪ್ರಭುತ್ವ. ನೇರ ಮಾತುಗಾರರಾಗಿ ನಿಷ್ಠುರ ಕಟ್ಟಿಕೊಂಡವರು. ಕನ್ನಡ ವಾರಪತ್ರಿಕೆಯ ಸಂಪಾದಕರಾಗಿಯೂ ಸಾಹಿತ್ಯ ಸೇವೆ. ಗೋಕಾಕರ ದ್ಯಾವಾ ಪೃಥವಿ ಇವರೆ ಮುದ್ರಿಸಿದ್ದು. ದೀಪಾವಳಿ ಸಂಚಿಕೆಗಳ ಸಂಪಾದಕತ್ವ. ‘ದೀಪದಾನ’ ಎಂಬ ಹೆಸರಿನಿಂದ ಸಂಚಿಕೆ ಬಿಡುಗಡೆ. ಆದರೆ ಸಂಚಿಕೆಗಳ ಅಲ್ಪಕಾಲದ ಬದುಕು. ಸಂದ ಪ್ರಶಸ್ತಿಗಳು-ಪ್ರಥಮ ಕವನ ಸಂಕಲನ ‘ಪಿಪಾಸೆ’ಗೆ ಮತ್ತು ಕಥಾಸಂಕಲನ ‘ಗೀಚುಗೆರೆ’ಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ. ವಿಚಾರಧಾರೆಯ ಕೃತಿ ರಚಿಸಿದ ಕೊಟ್ಟಲಗಿಯವರು ನಿಧನರಾದದ್ದು ೧೯೭೫ರ ಸೆಪ್ಟಂಬರ್ ೨೦ರಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಗೌರಮ್ಮ. ಕೆ.ಬಿ. – ೧೯೨೨ ಟಿ.ಎಸ್. ಲೋಹಿತಾಶ್ವ – ೧೯೪೨ ಈರಪ್ಪ ಎಂ. ಕಂಬಳಿ – ೧೯೫೮

Details

Date:
August 5, 2023
Event Category: