Loading Events

« All Events

  • This event has passed.

ವೀಣಾ ಶ್ರೀನಿವಾಸ್

September 6, 2023

೦೬.೦೯.೧೯೭೧ ಜೆ.ಜೆ. ಕಲಾಶಾಲೆಯಲ್ಲಿ ಕಲಿತು ಶಿಕ್ಷಕರಾಗಿದ್ದ ವೆಂಕಟ್ರಾಯ ಕಾಮತ್‌ರವರ ಮೊಮ್ಮಗಳಾದ ವೀಣಾ ಶ್ರೀನಿವಾಸ್‌ರವರು ಹುಟ್ಟಿದ್ದು ಮಂಗಳೂರು. ತಂದೆ ಯು.ಜಿ.ಕಾಮತ್, ತಾಯಿ ಸಕುಕಾಮತ್. ತಾತನ ಚಿತ್ರಕಲಾ ರಕ್ತ ಮೊಮ್ಮಗಳಿಗೆ ಹರಿದು ಬಂದಿದ್ದರೂ ಎಳವೆಯಲ್ಲಿ ಪ್ರಾರಂಭಿಸಿದ ಚಿತ್ರಗಾರಿಕೆ ನಿಂತುಹೋಗಿ ಮತ್ತೆ ಚಿಗುರೊಡೆದದ್ದು ಮದುವೆಯ ನಂತರವೇ. ಪತಿಯ ಸಹಕಾರದಿಂದ ಸೇರಿದ್ದು ಮಂಗಳೂರಿನ ಕಲಾವಿದರಾದ ಎಂ.ಆರ್. ಪಾವಂಜೆಯವರಲ್ಲಿ. ಇದ್ದಿಲು, ಪೆನ್ಸಿಲ್‌, ಜಲವರ್ಣಗಳ ಮಾಧ್ಯಮಗಳಲ್ಲಿ ಪ್ರಾವೀಣ್ಯತೆ ಪಡೆದರೂ ಜಲವರ್ಣ ಮತ್ತು ಕಪ್ಪುಬಿಳುಪಿನ ಚಿತ್ರರಚನೆಗೆ ಆದ್ಯತೆ. ಕುಂಜೂರು ಹೊರವಲಯದ ಅರ್ಚಕರ ಮಗ ೫ ವರ್ಷದ ವಾದಿರಾಜನು ಢಕ್ಕೆ ಹೊಡೆಯುವ ವಿವಿಧ ಲಹರಿಯ ಚಿತ್ರ ಜೀವಂತಿಕೆಯ ಚಿತ್ರಕಲೆಯಾಗಿ ಬೆಂಗಳೂರಿನ ಕಲಾಪ್ರದರ್ಶನದಲ್ಲಿ ಕಲಾಪ್ರೇಮಿಗಳ ಮನಸೆಳೆದ ಚಿತ್ರ. ಹಲವಾರು ಪ್ರಮುಖ ಕಲಾಪ್ರದರ್ಶನಗಳಲ್ಲಿ ಭಾಗಿ. ಮಂಗಳೂರಿನ ಕೆನರಾ ಹೈಸ್ಕೂಲು, ಗಣ – ರೂಪ ಪ್ರಸಾದ್ ಆರ್ಟ್‌‌ಗ್ಯಾಲರಿ, ಫೈನಲ್‌ ಟಚ್‌ ಆರ್ಟ್‌ಗ್ಯಾಲರಿ, ಆಮಂತ್ರಣ ಆರ್ಟ್ ಗ್ಯಾಲರಿ, ಉಡುಪಿ ಜಿಲ್ಲಾ ಕಲಾ ಉತ್ಸವ, ದೃಶ್ಯ ಸ್ಕೂಲ್ ಆಫ್ ಆರ್ಟ್ಸ್, ಬೆಂಗಳೂರಿನ ಚಿತ್ರಸಂತೆ ಮತ್ತು ಈ ವರ್ಷದ ವಸಂತ ಋತುವಿನ ಚಿತ್ರಪ್ರದರ್ಶನ ಮುಖ್ಯವಾದವುಗಳು. ಮಂಗಳೂರಿನ ರಘುನಾಥ್‌ಶೇಟ್‌ರವರ ಸಂಗ್ರಹದಲ್ಲಿ ’ಢಕ್ಕೆ ಬಲಿ’, ಎನ್. ವೆಂಕಟಕೃಷ್ಣರವರಲ್ಲಿ ’ಪೂಜೆ’, ರೇಣು ಛಾಬ್ರಿಯರವರಲ್ಲಿ ’ಪಿಯತಾ’, ಸುಜಾತ ನಟೇಶ್‌ರವರಲ್ಲಿ ಔತಣ, ಕೆ.ಶಂಕರ ಕಾಮತ್‌ (ಅಮೆರಿಕಾ) ಇವರಲ್ಲಿ ಆಟದ ಸಮಯ ಮುಂತಾದ ಪ್ರಶಸ್ತಿ ವಿಜೇತ ಕೃತಿಗಳು ಸಂಗ್ರಹಿತ. ಇದೇ ದಿನ ಹುಟ್ಟಿದ ಕಲಾವಿದರು ಎಂ.ಎಲ್. ಅನಂತಪದ್ಮನಾಭರಾವ್ – ೧೯೦೩ ಪಿ.ಎ. ಸಾಲೀಮಠ – ೧೯೨೬ ಸುರೇಂದ್ರ ಮಜುಮದಾರ್ – ೧೯೫೪

* * *

Details

Date:
September 6, 2023
Event Category: