Loading Events

« All Events

  • This event has passed.

ಸಿ. ಪರಮೇಶ್ವರಾಚಾರ್ಯ

November 8, 2023

೮.೧೧.೧೯೨೭ ಸಂಪ್ರದಾಯ ಶಿಲ್ಪಕಲೆಯ ಪುನರುಜ್ಜೀವನ ಮಾಡಿದ ಪರಮೇಶ್ವರಾಚಾರ್ಯರು ಹುಟ್ಟಿದ್ದು ಮೈಸೂರು. ತಂದೆ ಮಿರ್ಲೆ ಚೌಡಾಚಾರ್ಯರು, ಪ್ರಖ್ಯಾತ ಶಿಲ್ಪಿಗಳು, ತಾಯಿ ಲಕ್ಷ್ಮೀದೇವಮ್ಮ. ವಂಶಪಾರಂಪರ್ಯವಾಗಿ ಬಂದ ಕಲೆ. ಅರಮನೆಯ ಭಿತ್ತಿಚಿತ್ರಗಳಿಂದ ಪಡೆದ ಪ್ರೇರಣೆ. ಚಾಮರಾಜೇಂದ್ರ ತಾಂತ್ರಿಕ ಶಾಲೆಯಲ್ಲಿ ಕಾಷ್ಠ ಶಿಲ್ಪ ರಚನೆಯಲ್ಲಿ, ಶಿಲ್ಪಸಿದ್ಧಾಂತಿ ಸಿದ್ಧಲಿಂಗಸ್ವಾಮಿಗಳಿಂದ  ಪಡೆದ ಶಿಲ್ಪರಚನೆಯ ಶಿಕ್ಷಣ. ಪ್ರಾದೇಶಿಕ ಕರಕುಶಲ ವಿನ್ಯಾಸ ಕೇಂದ್ರದಲ್ಲಿ ಮಾಸ್ಟರ್ ಕ್ರಾಫ್ಟ್‌ಮನ್ ಆಗಿ ಉದ್ಯೋಗ. ವಿಧಾನಸೌಧದ ಕಟ್ಟಡವನ್ನು ಕಲಾತ್ಮಕವಾಗಿ ರೂಪಿಸುವಲ್ಲಿ ವಹಿಸಿದ ಪ್ರಮುಖ ಪಾತ್ರ, ಕರ್ನಾಟಕ ಕ್ರಾಫ್ಟ್ ಕೌನ್ಸಿಲ್ ಸಲಹಾಸಮಿತಿ, ಚನ್ನಪಟ್ಟಣದ ಶಿಲ್ಪಕಲಾ ಕೇಂದ್ರದ ಸಲಹಾಸಮಿತಿ, ದಕ್ಷಿಣ ಭಾರತದ ರಾಜ್ಯಗಳ ಕಲಾಶಿಬಿರ, ವಿಚಾರಸಂಕಿರಣ, ಉಪನ್ಯಾಸ ಪ್ರದರ್ಶನಗಳ ಸಂಪನ್ಮೂಲ ವ್ಯಕ್ತಿಯಾಗಿ, ಶಿಲ್ಪಕಲಾ ಅಕಾಡಮಿ ಸದಸ್ಯರಾಗಿ, ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಮೈಸೂರು ಅರಮನೆಯ ಆವರಣದ ಭುವನೇಶ್ವರಿ ದೇವಾಲಯ, ರಾಮಾನುಜ ರಸ್ತೆಯ ಕಾಮಕಾಮೇಶ್ವರಿ ದೇವಾಲಯದ ಅಪರೂಪದ ಶಿಲ್ಪ ರಚನೆ, ಬನಶಂಕರಿ ಅರ್ಧನಾರೀಶ್ವರಿ, ಲಲಿತಾ, ಚತುರ್ಭುಜ ಭುವನೇಶ್ವರಿ, ಶುಕಭಾಷಿಣಿ, ಸಾಯಿಬಾಬ, ಅಘೋರೇಶ್ವರ, ಕೃಷ್ಣದೇವರಾಯ, ಗಾಂಧೀಜಿ ಮುಂತಾದ ಶಿಲ್ಪ ರಚನೆಯಲ್ಲಿ ತೋರಿದ ಅದ್ಭುತ ಕೌಶಲ. ೧೯೬೫ರಲ್ಲಿ ಕಾಷ್ಠಶಿಲ್ಪಕ್ಕೆ ಎಸ್. ರಾಧಾಕೃಷ್ಣನ್‌ರವರಿಂದ ರಾಷ್ಟ್ರಪ್ರಶಸ್ತಿ, ೧೯೫೬ ರಲ್ಲಿ ವಾರಣಾಸಿಯ ಆನಂದಮಯಿ ಆಶ್ರಮದಿಂದ ಸನ್ಮಾನ, ಮೈಸೂರಿನಲ್ಲಿ ಸಾಯಿಬಾಬ ಮೂರ್ತಿ ರಚನೆಗೆ ಜಯಚಾಮರಾಜ ಒಡೆಯರಿಂದ ಸನ್ಮಾನ, ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ, ಶಿಲ್ಪಕಲಾ ಅಕಾಡಮಿಯ ಪ್ರತಿಷ್ಠಿತ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ, ರಾಮಸನ್‌ ಸಂಸ್ಥೆಯ ಕಲಾ ಸನ್ಮಾನ್, ಶಿಲ್ಪಕಲಾ ಅಕಾಡಮಿಯಿಂದ ಸುವರ್ಣ ಕರ್ನಾಟಕದ ಸನ್ಮಾನ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು ಕೆ.ಎಸ್. ಚಂದ್ರಶೇಖರಯ್ಯ – ೧೯೧೧ ರಾಜಗೋಪಾಲ್ ಕ.ವೆಂ. – ೧೯೨೪ ಬಸವಂತರಾವ್ ಕಡೂನ – ೧೯೪೧ ರೇಣುಕಾರಾವ್ – ೧೯೫೧

Details

Date:
November 8, 2023
Event Category: