ಟೈಗರ್ ವರದಾಚಾರ್

೧.೮.೧೮೭೬ ೧.೧.೧೯೫೦ ಟೈಗರ್ ಬಿರುದಾಂಕಿತ ವರದಾಚಾರ್ಯರು ಹುಟ್ಟಿದ್ದು ಮದರಾಸಿನ ತಿರುವಟ್ಟಿಯಾರ್ ಬಳಿ ಇರುವ ಕಲಡಿಪೇಟ್‌. ತಂದೆ ರಾಮಾನುಜಾಚಾರ್ಯ, ತಾಯಿ ಕಲ್ಯಾಣಿ ಅಮ್ಮಾಳ್‌. ಓದಿದ್ದು ಎಫ್‌. ಎ. ವರೆಗೆ. ಪಟ್ಲಂ ಸುಬ್ರಹ್ಮಣ್ಯ ಅಯ್ಯರ್ ಬಳಿ ಮೂರು ವರ್ಷ ಕಾಲ ತಿರುವಯ್ಯಾರಿನಲ್ಲಿ ಗುರುಕುಲ ಪದ್ಧತಿಯಲ್ಲಿ […]

ಎಂ.ಜಿ. ನಂಜುಂಡಾರಾಧ್ಯ

೧-೮-೧೯೧೪ ೭-೧೧-೧೯೯೧ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ನಂಜುಂಡಾರಾಧ್ಯರು (ಅಮರವಾಣಿ) ಹುಟ್ಟಿದ್ದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗುಂಡ್ಲಹಳ್ಳಿ. ತಂದೆ ಗಂಗಾಧರಯ್ಯ, ತಾಯಿ ವೀರಮ್ಮ. ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲಿ. ಪ್ರೌಢ ವ್ಯಾಸಂಗಕ್ಕೆ ಸೇರಿದ್ದು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ. ಅಲಂಕಾರಶಾಸ್ತ್ರ, ವಿಶಿಷ್ಟಾದ್ವೈತ ವೇದಾಂತಗಳಲ್ಲಿ ವಿದ್ವಾನ್ ಪದವಿ. ಹಿಂದಿ ರಾಷ್ಟ್ರಭಾಷಾ ವಿಶಾರದ, ಕನ್ನಡದಲ್ಲಿ ವಿದ್ವಾನ್ ಪದವಿ ಪಡೆದ ತ್ರಿಭಾಷಾ ಪಂಡಿತರು. ಉದ್ಯೋಗಕ್ಕಾಗಿ ಸೇರಿದ್ದು ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ. ನಂತರ ಮೈಸೂರಿನ ಮಹಾರಾಜ […]

ಡಾ. ನಾ. ದಾಮೋದರ ಶೆಟ್ಟಿ

೨.೮.೧೯೫೧ ನಟ, ನಾಟಕಕಾರ, ಸಾಹಿತಿ ನಾ.ದಾಮೋದರ ಶೆಟ್ಟಿಯವರು ಹುಟ್ಟಿದ್ದು ೧೯೫೧ ರ ಆಗಸ್ಟ್‌ ೨ ರಂದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿ. ತಂದೆ ಕುಂಞಕಣ್ಣ ಚೆಟ್ಟಿಯಾರ್, ತಾಯಿ ಕುಂಞಮ್ಮರ ಅಕೇರಿಯ. ಪ್ರಾರಂಭಿಕ ಶಿಕ್ಷಣ ಕುಂಬಳೆಯಲ್ಲಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ […]

ಡಿ.ಸಿ. ಪಾವಟೆ

೦೨.೦೮.೧೮೯೯ ೧೭.೦೧.೧೯೭೯ ದಕ್ಷ ಆಡಳಿತಗಾರ, ಶಿಕ್ಷಣತಜ್ಞ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದ ದಾನಪ್ಪ ಚಿಂತಪ್ಪ ಪಾವಟೆಯವರು ಹುಟ್ಟಿದ್ದು ೧೮೯೯ ರ ಆಗಸ್ಟ್‌ ೨ ರಂದು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪುರದಲ್ಲಿ. ತಂದೆ ಚಿಂತಪ್ಪ ಪಾವಟೆ. ಪ್ರಾರಂಭಿಕ ಶಿಕ್ಷಣ ಗೋಕಾಕ […]

ಬಳ್ಳಾರಿ ರಾಘವ

೨.೮.೧೮೮೦ ೧೬.೪.೧೯೪೬ ಸುಪ್ರಸಿದ್ಧ ನಟ, ನಾಟಕಕಾರ ರಾಘವ ರವರು ಹುಟ್ಟಿದ್ದು ಬಳ್ಳಾರಿಯಲ್ಲಿ. ತಂದೆ ನರಸಿಂಹಾಚಾರ್ಯರು, ತಾಯಿ ಶೇಷಮ್ಮ. ಬಳ್ಳಾರಿಯಲ್ಲಿ ಎಫ್‌.ಎ ಮತ್ತು ಮದರಾಸಿನಲ್ಲಿ ಪಡೆದ ಬಿ.ಎ, ಬಿ.ಎಲ್‌  ಪದವಿ. ಧರ್ಮಾವರಂ  ರಾಮಕೃಷ್ಣಾಚಾರ್ಯರ ಬಳಿ ವಕೀಲಿ ವೃತ್ತಿ ತರಬೇತಿ. ೧೯೦೬ ರಲ್ಲಿ ಸ್ವತಂತ್ರ […]

ಚ. ವಾಸುದೇವಯ್ಯ

೨-೮-೧೮೫೨ ೨೬-೧೨-೧೯೪೩ ಹೊಸಗನ್ನಡದ ಭಾಷಾ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ವಾಸುದೇವಯ್ಯನವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ. ಪ್ರಾರಂಭಿಕ ಶಿಕ್ಷಣ ಚನ್ನಪಟ್ಟಣದ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ. ಸೆಂಟ್ರಲ್ ಕಾಲೇಜಿಗೆ ಎಫ್.ಎ. ತರಗತಿಗೆ ಸೇರಿದರಾದರೂ ಕಾರಣಾಂತರದಿಂದ ವಿದ್ಯಾಭ್ಯಾಸಕ್ಕೆ ಅಡೆತಡೆ. ೧೯ನೇ ವಯಸ್ಸಿನಲ್ಲಿಯೇ ಉದ್ಯೋಗ ಪ್ರಾರಂಭ. ಕೆಲಕಾಲ ಸೆಂಟ್ರಲ್ ಕಾಲೇಜಿನಲ್ಲಿ ಉಪಾಧ್ಯಾಯ […]

ಎನ್.ಪಿ. ಶಂಕರನಾರಾಯಣರಾವ್‌

೦೩.೦೮.೧೯೨೮ ೨೮.೧೧.೨೦೦೬ ತಲಸ್ಪರ್ಶಿ ವಿಶ್ಲೇಷಣೆ, ವ್ಯಾಪಕ ಅಧ್ಯಯನ, ವಸ್ತು ನಿಷ್ಠ ವಿಮರ್ಶಾ ದೃಷ್ಟಿಯನ್ನು ಹೊಂದಿದ್ದ  ಶಂಕರನಾರಾಯಣರಾಯರು ಹುಟ್ಟಿದ್ದು ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ನಿಟ್ಟೂರಿನಲ್ಲಿ ೧೯೨೮ರ ಆಗಸ್ಟ್‌ ೩ರಂದು. ತಂದೆ ಪಟ್ಟಾಭಿರಾಮಯ್ಯನವರು, ತಾಯಿ ಅಚ್ಚಮ್ಮನವರಿಗೆ ಹುಟ್ಟಿದ ಮೂವರು ಮಕ್ಕಳಲ್ಲಿ ಮೂರನೆಯವರಾಗಿ, ಮೊದಲ […]

ಯಶವಂತ ಚಿತ್ತಾಲ

೩-೮-೧೯೨೮ ಕನ್ನಡದ ಪ್ರತಿಭಾನ್ವಿತ, ಸೃಜನಶೀಲ ಗದ್ಯ ಲೇಖಕರಾದ ಯಶವಂತ ಚಿತ್ತಾಲರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹನೇನಹಳ್ಳಿ. ತಂದೆ ವಿಠೋಬ, ತಾಯಿ ರುಕ್ಮಿಣಿ. (ಇವರ ಅಣ್ಣನೇ ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲರು) ಪ್ರಾರಂಭಿಕ ವಿದ್ಯಾಭ್ಯಾಸ ಹನೇನಹಳ್ಳಿ, ಕುಮಟಾಗಳಲ್ಲಿ. ಉನ್ನತ ವಿದ್ಯಾಭ್ಯಾಸ ಧಾರವಾಡ […]

ಅಂಕಲ್‌ ಶ್ಯಾಂ

೪.೮.೧೯೪೩ ರಂಗಭೂಮಿಯ ಸಂಘಟನಾ ಕಾರ್ಯದಲ್ಲಿ ಯಶಸ್ವಿ ರಂಗಕರ್ಮಿ ಎನಿಸಿರುವ ಎಂ.ಎಸ್‌. ಶಾಮಸುಂದರ್ ಹುಟ್ಟಿದ್ದು ಮೈಸೂರು. ತಂದೆ ಶಂಕರಪ್ಪ, ತಾಯಿ ಸುಬ್ಬಮ್ಮ. ಬಿ.ಕಾಂ. ಪದವಿಯ ನಂತರ ಕೃಷಿ ವಿಶ್ವವಿದ್ಯಾಲಯದಲ್ಲಿ ಉದ್ಯೋಗ. ಹವ್ಯಾಸಕ್ಕಾಗಿ ತೊಡಗಿಸಿಕೊಂಡಿದ್ದು ರಂಗಭೂಮಿ ಕಾರ್ಯಕಲಾಪಗಳಲ್ಲಿ, ಮಂಡ್ಯದ ಕೃಷಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಾಟಕದ […]

ಹುರುಳಿ ಭೀಮರಾವ್

೪-೮-೧೮೮೫ ೪-೮-೧೯೭೦ ಪತ್ರಿಕೋದ್ಯಮಿ, ಸಾಹಿತಿ, ಭೀಮರಾವ್‌ರವರು ಹುಟ್ಟಿದ್ದು ೧೮೮೫ನೇ ಇಸವಿ. ಶಿವಮೊಗ್ಗ ಜಿಲ್ಲೆಯ ಹುರುಳಿ ಗ್ರಾಮದಲ್ಲಿ. ತಂದೆ ಶಾಮರಾಯರು, ತಾಯಿ ಭಿಷ್ಟಮ್ಮ ಪ್ರಾಥಮಿಕ ವಿದ್ಯಾಬ್ಯಾಸ ಉಡುಪಿ, ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ, ನಂತರ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಹಲವಾರು […]