ಹಾರ್ಮೋನಿಯಂ ಶೇಷಗಿರಿರಾಯರು

೫.೮.೧೮೯೨ ೭.೧೦.೧೯೯೦ ವೃತ್ತಿರಂಗಭೂಮಿಯ ಪ್ರಮುಖ ವಾದ್ಯವಾಗಿದ್ದ ಹಾರ್ಮೋನಿಯಂ ವಾದನದ ಕಲೆಯಲ್ಲಿ ಅಪೂರ್ವ ಸಿದ್ಧಿ ಪಡೆದಿದ್ದ, ಹಾರ್ಮೋನಿಯಂ ನ್ನು ಸುಲಭೋಪಯೋಗಿಯಾಗಿ ರೂಪಿಸಿದ ಶೇಷಗಿರಿರಾವ್‌ ಹುಟ್ಟಿದ್ದು ಹಂಪಾಪುರದಲ್ಲಿ ತಂದೆ ಪಾಪಚ್ಚಿ ಕೃಷ್ಣಾಚಾರ್ಯರು, ತಾಯಿ ಕನಕಲಕ್ಷ್ಮಮ್ಮ. ಎಂಟನೆಯ ವಯಸ್ಸಿಗೆ ಸೇರಿದ್ದು ಎ.ವಿ. ವರದಾಚಾರ್ಯರ ರತ್ನಾವಳಿ ಥಿಯಟ್ರಿಕಲ್‌  ಕಂ. ಲೋಹಿತಾಶ್ವ ಮುಂತಾದ ಬಾಲ ಪಾತ್ರಗಳ ನಿರ್ವಹಣೆ. ಮಂದಾರವಲ್ಲಿ, ಮೋಹನ ಮುಂತಾದ ಹೆಣ್ಣು ಪಾತ್ರಗಳು, ಹಾರ್ಮೋನಿಯಂ ವಾದನದಲ್ಲಿ ಆಸ್ಥೆ ಬೆಳೆದು, ವರದಾಚಾರ್ಯರ ಅಪೇಕ್ಷೆಯಂತೆ ಮುಂಬಯಿಯ ಚಮನ್‌ಲಾಲ್‌ ಬಳಿ ಹಾರ್ಮೋನಿಯಂ ಕಲಿಕೆ, ಉಸ್ತಾದ್‌ ಕರೀಂಖಾನರಿಂದ ಹಿಂದುಸ್ತಾನಿ, […]

ರಾಮಚಂದ್ರ ಕೊಟ್ಟಲಗಿ

೫-೮-೧೯೧೬ ೨೦-೯-೧೯೭೫ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದ ರಾಮಚಂದ್ರ ಕೊಟ್ಟಲಗಿಯವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಮನಗೋಳಿ ಎಂಬ ಹಳ್ಳಿ. ತಂದೆ ಕೃಷ್ಣರಾವ್ ಕೊಟ್ಟಲಗಿಯವರು ಒಳ್ಳೆಯ ವೈದ್ಯರು, ಕೃಷಿಕರು. ಪ್ರಾರಂಭಿಕ ಶಿಕ್ಷಣ ಹಳ್ಳಿಯಲ್ಲಿಯೇ. ಎಡಪಂಥೀಯ ಸಾಹಿತ್ಯ, ಲೆನಿನ್, ಮಾರ್ಕ್ಸ್, ಪ್ರಭಾವಕ್ಕೊಳ ಗಾಗಿದ್ದರು. […]

ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ

೦೬.೦೮.೧೯೫೦ ವೃತ್ತಿಯಲ್ಲಿ ವೈದ್ಯೆಯಾಗಿ, ವಿಶೇಷವಾಗಿ ಮಕ್ಕಳ ಹೃದಯತಜ್ಞೆಯಾಗಿ, ಬಡವರ ಬಗ್ಗೆ ಮಾನವೀಯತೆ, ಅನುಕಂಪದ ಗುಣಗಳನ್ನು ಹೊಂದಿರುವ, ಮನದಾಳದಲ್ಲಿ ಮೂಡುವ ಆರ್ದ್ರ ಭಾವಗಳಿಗೆ ಅಕ್ಷರ ರೂಪ ನೀಡುವ ಸಾಹಿತಿಯಾಗಿ ಓದುಗರ ಮನಸ್ಸನ್ನು ಸೆಳೆದಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹುಟ್ಟಿದ್ದು ೧೯೫೦ರ ಆಗಸ್ಟ್‌ ೬ರಂದು ಬೆಳಗಾವಿಯಲ್ಲಿ. […]

ಪಂಡಿತ ಮಹಾದೇವ ಪ್ರಭಾಕರ ಪೂಜಾರ

೬-೮-೧೮೮೪ ೫-೧-೧೯೬೨ ಸುಪ್ರಸಿದ್ಧ ಸಾಹಿತಿ, ವಿದ್ವಾಂಸರಾದ ಪೂಜಾರರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಬಂಕಾಪುರದಲ್ಲಿ. ತೀರಾಬಡತನದ ಅರ್ಚಕ ಮನೆತನ. ಧಾರವಾಡದಲ್ಲಿ ನಾಲ್ಕು ವರ್ಷ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ. ಅಲಂಕಾರ, ವ್ಯಾಕರಣ, ವೇದಾಂತ ಶಾಸ್ತ್ರಗಳಲ್ಲಿ ಪಡೆದ ಪ್ರಾವೀಣ್ಯತೆ. ಧಾರವಾಡದ ಕನ್ನಡ ಟ್ರೈನಿಂಗ್ ಶಾಲೆಯಲ್ಲೂ ಉತ್ತೀರ್ಣರಾಗಿ […]

ಎಂ. ರಾಘವೇಂದ್ರರಾವ್‌

೦೭.೦೮.೧೯೧೪ ೩೦.೧೧.೧೯೯೯ ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ. ತಂದೆ ಮೈಸೂರು ನೀಲಕಂಠ ಕೇಶವರಾಯರು, ತಾಯಿ ವೆಂಕಟಲಕ್ಷ್ಮಮ್ಮ. ಮೈಸೂರಿನ ಜವಳಿ ಅಂಗಡಿ ತಮ್ಮಯ್ಯನವರಲ್ಲಿ ಗುರುಕುಲ ಪದ್ಧತಿಯಲ್ಲಿ ಕಲಿತ ಗಮಕಾಭ್ಯಾಸ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ […]

ಸದಾಶಿವ ಒಡೆಯರ

೭-೮-೧೯೨೪ ೧೧-೯-೧೯೯೬ ಶಿಕ್ಷಣ ಕ್ಷೇತ್ರದ ದಕ್ಷ, ಪ್ರಾಮಾಣಿಕ ಆಡಳಿತಾಕಾರಿ, ವಿಶ್ವವಿದ್ಯಾಲಯದ ಕುಲಸಚಿವ, ಸಾಹಿತಿ, ಸದಾಶಿವ ಒಡೆಯರರವರು ಹುಟ್ಟಿದ್ದು ಧಾರವಾಡದ ಮರೇವಾಡ ಗ್ರಾಮದಲ್ಲಿ. ತಂದೆ ಶಿವದೇವ ಒಡೆಯರ, ತಾಯಿ ಗಿರಿಜಾದೇವಿ. ಪ್ರಾರಂಭಿಕ ಶಿಕ್ಷಣ ಹಾವೇರಿ. ಆಟದಲ್ಲಿ ಸದಾಮುಂದು. ಬ್ಯಾಡಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳು. ಕಾಲೇಜು ವಿದ್ಯಾಭ್ಯಾಸ ಧಾರವಾಡ. ೧೯೪೫ರಲ್ಲಿ ಬಿ.ಎ. (ಆನರ್ಸ್) ಪದವಿ. ೧೯೪೭ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ. ೧೯೪೮ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ […]

ಮತ್ತೂರು ಕೃಷ್ಣಮೂರ್ತಿ

೦೮.೦೮.೧೯೨೯ ೦೬.೧೦.೨೦೧೧ ವೇದ, ಶಾಸ್ತ್ರ, ಸಂಸ್ಕೃತಿಗಳ ದೀರ್ಘ ಅಧ್ಯಯನ ನಡೆಸಿ ದೇಶ ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರಗೊಳಿಸಿದ್ದಲ್ಲದೆ, ಕುಮಾರ ವ್ಯಾಸಭಾರತದ ಗಮಕವಾಚನ-ವ್ಯಾಖ್ಯಾನಗಳ ಮೂಲಕ ಸಾಂಸ್ಕೃತಿಕ ಕ್ಷೇತ್ರವನ್ನೂ ಸಮೃದ್ಧಗೊಳಿಸಿದ ಕೃಷ್ಣಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಮತ್ತೂರಿನಲ್ಲಿ ೧೯೨೯ ರ ಆಗಸ್ಟ್‌ […]

ಡಾ.ಎಚ್‌. ಕೆ. ರಂಗನಾಥ್‌

೦೮.೦೮.೧೯೨೪ ೨೬.೩.೨೦೦೩ ನಾಟಕಕಾರ, ರಂಗತಜ್ಞ, ನಟ, ಸಾಹಿತಿ , ಮಾಧ್ಯಮತಜ್ಞ ರಂಗನಾಥ್‌ರವರು ಹುಟ್ಟಿದ್ದು ಮೈಸೂರು. ತಂದೆ ಎಚ್‌ ಕೃಷ್ಣಸ್ವಾಮಿ, ತಾಯಿ ಚಿನ್ನಮ್ಮ. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಂಡತ್ವ. ವಿಶಿಷ್ಟ ಹಾಸ್ಯ ಪ್ರಜ್ಞೆಯ, ಎಲ್ಲರನ್ನೂ ನಕ್ಕು ನಗಿಸುವ ಮಾತು ಗಾರಿಕೆಯ ಸೊಗಸುಗಾರರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಕಾಲ. ಮೈಸೂರು ಆಕಾಶವಾಣಿಯ ಪಾರ್ಟ್‌ ಟೈಂ ಹುದ್ದೆಯಿಂದ ಆಕಾಶವಾಣಿ ಸಂಬಂಧ ಪ್ರಾರಂಭ, ಬೆಂಗಳೂರು, ಧಾರವಾಡದ ಆಕಾಶವಾಣಿ ಕೇಂದ್ರಗಳಲ್ಲಿ ಪ್ರೋಗ್ರಾಂ ನಿರ್ವಾಹಕರಾಗಿ, ನಾನಾ ಹುದ್ದೆಗಳಲ್ಲಿ ಸೇವೆ. ಆಕಾಶವಾಣಿಗಾಗಿ ರಚಿಸಿ, ನಿರೂಪಿಸಿ ನಿರ್ದೇಶಿಸಿ, ಪ್ರಸಾರಮಾಡಿದ […]

ಟಿ. ಸುನಂದಮ್ಮ

೮-೮-೧೯೧೭ ೨೭-೧-೨೦೦೬ ಹಾಸ್ಯ ಸಾಹಿತ್ಯದ ಹಿರಿಯಜ್ಜಿ ಎಂದೇ ಹೆಸರು ಗಳಿಸಿದ್ದ ಸುನಂದಮ್ಮನವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ರಾಮಯ್ಯ, ತಾಯಿ ನಾಗಮ್ಮ. ಮೈಸೂರು ಮಹಾರಾಜರ ಸರಕಾರದಲ್ಲಿ ಡೆಪ್ಯುಟಿ ಕಮೀಷನರ್ ಹುದ್ದೆಯಲ್ಲಿದ್ದ ತಂದೆಗೆ ಊರಿಂದೂರಿಗೆ ವರ್ಗ. ಸುನಂದಮ್ಮನವರ ಓದು ಹಲವಾರು ಕಡೆ. ಮಾಧ್ಯಮಿಕ ಶಾಲೆ […]

ಕೆ. ಗೋಪಾಲಕೃಷ್ಣರಾವ್‌

೦೯.೦೮.೧೯೦೬ ೦೮.೧೦.೧೯೬೭ ಕಥಾವಸ್ತು, ತಂತ್ರಗಾರಿಕೆ, ವೈವಿಧ್ಯತ್ಯೆಯಿಂದ ನವೋದಯದ ಕತೆಗಾರರಲ್ಲಿ ಪ್ರಮುಖರಾದ ಗೋಪಾಲಕೃಷ್ಣರಾಯರು ಹುಟ್ಟಿದ್ದು ೧೯೦೬ರ ಆಗಸ್ಟ್‌ ೯ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೊಡಗೇನ ಹಳ್ಳಿಯಲ್ಲಿ. ತಂದೆ ನಂಜುಂಡಯ್ಯ, ತಾಯಿ ಸುಬ್ಬಮ್ಮ. ಪ್ರಾರಂಭಿಕ ಶಿಕ್ಷಣ ನ್ಯಾಷನಲ್‌ ಹೈಸ್ಕೂಲು (ಬೆಂಗಳೂರು) ಮತ್ತು ಸೆಂಟ್ರಲ್‌ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ವಿದ್ಯಾರ್ಥಿ ದೆಸೆಯಿಂದಲೇ ಕೈಲಾಸಂ ರವರ ಪ್ರಭಾವಕ್ಕೆ ಒಳಗಾಗಿ ನಾಟಕಗಳ ರಚನೆಯತ್ತ ಹೊರಳಿದರೂ ಮಾಸ್ತಿಯವರ ಕಥೆಯ ಕಲೆಗಾರಿಕೆಯೂ ಅವರನ್ನು ಸೆಳೆಯತೊಡಗಿತ್ತು. ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು ಪ್ರಾರಂಭದ ದಿನಗಳಲ್ಲಿ ಕವನಗಳನ್ನು […]