ಕಲೆ ಸದಾ ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ಹಾಗೂ ಲಿಂಗಾತೀತ. ಕಲೆ ಆರಾಧಿಸುವವರ ಸ್ವತ್ತು, ಪೂಜಿಸುವವರ ದೈವ. ಪರಿಶ್ರಮಿಗಳ ಅಂಗೈನ ಅರಗಿಣಿ, ಪ್ರತಿಭಾವಂತರ ತಪ್ಪಸ್ಸಿನ ಪೂಜಾಫಲ. ಸಹಜತೆಯನ್ನು ಮೀರಿ ಅಸಾಮಾನ್ಯ ಸಾಧನೆಗೈಯುವುದು ಸಾಧಕರಿಗೆ ಮಾತ್ರ ಸಾಧ್ಯ. ಲೋಕನಿಂದನೆ, ಕೌಟುಂಬಿಕ ಅನಾದಾರ, ಸಾಮಾಜಿಕ ಬಹಿಷ್ಕಾರಗಳಂತಹ ಕೆಂಡದ ಮಳೆಯಲ್ಲಿ ತೊಯ್ದು ಬದುಕು ಕಟ್ಟಿಕೊಳ್ಳುವವರು ...
ಅರಿವೇ ಗುರು, ಅನುಭವವೇ ಜ್ಞಾನ. ಲೋಕಾನುಭವದ ಮೂಯಲ್ಲಿ ಅರಳಿದವರೇ ನಿಜಸಾಧಕರು. ಕನ್ನಡ ರಂಗಭೂಮಿ ಅಂತಹ ಅಗಣಿತ ಸಾಧಕರ ಸಂಪನ್ನ ಕ್ಷೇತ್ರ. ರಂಗವೇ ವೃತ್ತಿ, ಪ್ರವೃತ್ತಿ. ಬದುಕು-ಭಾವವಾದಾಗ ಸಾಧನೆಯ ಸತ್ಫಲ ಕಟ್ಟಿಟ್ಟ ಬುತ್ತಿ. ಕಲಾನಿಷ್ಠ ಸಾಧಕರೇ ನಾಡಿನ ಸಾಂಸ್ಕೃತಿಕ ಆಸ್ತಿ. ವೃತ್ತಿ ರಂಗಭೂಮಿಯ ಚೇತನ ಎಲ್.ಬಿ. ಶೇಖ (ಮಾಸ್ತರ) ಅವರು ...
ವಿಶ್ರಾಂತ ನ್ಯಾಯಾಧೀಶರು, ಕರ್ನಾಟಕ ಉಚ್ಛ ನ್ಯಾಯಾಲಯ ಸೇವೆಯೆಂಬುದು ಸಾರ್ವಕಾಲಿಕ ಮೌಲ್ಯ. ಪರಹಿತವೇ ಸೇವೆಯ ಅಂತಃಸತ್ವ. ಜನಸಮುದಾಯ ಮತ್ತು ಸಮಾಜದ ಹಿತರಕ್ಷಣೆಯ ಸಮಷ್ಠಿ ಪ್ರಜ್ಞೆಯಿಂದ ಬೆಳಗಿ “ಬೆಳಕಾದ” ಸೇವಾಮೂರ್ತಿಗಳು ಆನೇಕಾನೇಕ. ಸೇವೆಯೇ ಬಾಳಿನ ಬೆಳಕು, ಅದರಲ್ಲೇ ದೈವವ ಹುಡುಕೆಂಬ ಲೋಕನುಡಿಗೆ ಸಾಕ್ಷಿಯಾಗಿ ಬದುಕಿದವರ ಪುಣ್ಯಭೂಮಿ ಈ ಕರುನಾಡು. ಅಂತಹ ಸೇವಾಮೂರ್ತಿಗಳ ...
ಪ್ರದರ್ಶಕ ಕಲೆಗಳಲ್ಲಿ ರಂಗಭೂಮಿಗೆ ವಿಶೇಷ ಸ್ಥಾನ. ಬದುಕಿನ ರಂಗದ ಅನುಭವ-ಅನುಭಾವಗಳು ಪಾತ್ರ, ಸನ್ನಿವೇಶಗಳಾಗಿ ರಂಗಭೂಮಿಯಲ್ಲಿ ವಿರ್ಭವಿಸುವುದು ರಂಗಕಲೆಯ ವಿಶೇಷ. ರಂಗಕಾಯಕ ಹವ್ಯಾಸಿಗಳಿಗೆ ಆತ್ಮಸಂತೋಷದ ಸನ್ಮಾರ್ಗವಾದರೆ, ವೃತ್ತಿಪರರಿಗದು ಭಾವ-ಬಾಳಿಗೆರಡಕ್ಕೂ ಆಸರೆ. ವೃತ್ತಿರಂಗಭೂಮಿಯ ಭವ್ಯ ಇತಿಹಾಸದಲ್ಲಿ ಚಿಂದೋಡಿ ಮನೆತನದ್ದು ಅಳಿಸಲಾಗದ ಹೆಜ್ಜೆಗುರುತು. ಮೂರು ತಲೆಮಾರುಗಳ ನಿರಂತರ ರಂಗಸೇವೆ ಈ ಮನೆತನದ ವೈಶಿಷ್ಟ್ಯ. ...
ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ ಎಂಬ ಲೋಕನುಡಿ ಅಕ್ಷರಶಃ ಸತ್ಯ. ಸಾಗರರೂಪಿ ಇತಿಹಾಸದ ಒಳಗರ್ಭದಲ್ಲಿ ಅಡಗಿರುವ ಮುತ್ತಿನಮಣಿಗಳನ್ನು ಹೆಕ್ಕಿ ತೆಗೆಯುವುದು ಸಂಶೋಧನೆಯ ಸಾಹಸ. ಇತಿಹಾಸದ ಸತ್ವಸಾರವನ್ನು ಸಾಕ್ಷೀಕರಿಸುವ ಇತಿಹಾಸಕಾರ ನಿಜಕ್ಕೂ ಸಾಧಕೋತ್ತಮ. ಅಂತಹ ಸಾಧಕರ ಸಾಲಿನ ಶ್ರೇಷ್ಠರಲ್ಲಿ ಸುರೇಶ್ ಮೂನ ಪ್ರಮುಖರು. ನಾಡಪ್ರಭು ಕೆಂಪೇಗೌಡರ ನಗರಿಯ ಐತಿಹ್ಯವನ್ನು ಜಗದಗಲ ...
ಜನಪದ ನಾಡಿನ ಹೆಮ್ಮೆ. ಸರ್ವ ಕಲೆಗಳ ಮೂಲಸೆಲೆ. ದೇಸೀ ಕಲೆಗೆ ಹತ್ತಾರು ರೂಪ, ನೂರಾರು ಸ್ವರೂಪ. ಪ್ರತಿ ರೂಪ-ಪ್ರಕಾರಕ್ಕೂ ಉಂಟು ಘನ ಇತಿಹಾಸ-ಪರಂಪರೆ. ಕರಾವಳಿಯ ದೇಸೀ ಕಲೆ ಯಕ್ಷಗಾನದಷ್ಟೇ ಮೂಡಲಪಾಯ ಯಕ್ಷಗಾನವೂ ಪುರಾತನ, ನಿತ್ಯನೂತನ. ಬಯಲಾಟವಾದ ಮೂಡಲಪಾಯ ಯಕ್ಷಗಾನದ ಕಲೆಯನ್ನೇ ಬದುಕಿದ ಧ್ಯಾನ-ತಪ್ಪಸ್ಸಿನ ಯಾನವಾಗಿಸಿಕೊಂಡ ಸಾಧಕರಲ್ಲಿ ಅರಳಗುಪ್ಪೆಯ ಕಲ್ಮನೆ ...
ಜಾನಪದ ಸರ್ವ ಕಲೆಗಳ ತಾಯಿಬೇರು. ಈ ಬೇರನ್ನೇ ಬದುಕಿನ ಜೀವದ್ರವ್ಯವಾಗಿಸಿಕೊಂಡು ಸಾಧನೆಗೈದ ಕಲಾಚೇತನಗಳು ಅಸಂಖ್ಯ. ಕನ್ನಡದ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಿಚಾರಿಕೆಯ ಅನರ್ಘ್ಯ ಸೇವೆ ಸಲ್ಲಿಸಿದವರು ನಾಡಿನ ಅನನ್ಯ ಆಸ್ತಿ. ಸಾಧಕರಿಗೆ ಸದಾ ಪ್ರೇರಕ ಶಕ್ತಿ. ಜನಪದದ ಬೆಳಕಿನ ಪ್ರಖರತೆಯಲ್ಲಿ ಬೆಳಗಿ ಹಳ್ಳಿಹಾಡಿನ ಬಡಬದುಕನ್ನು ಬಂಗಾರದ ಬಾಳಾಗಿಸಿಕೊಂಡವರು ...
ಕನ್ನಡನಾಡು ಕಲಾವಿದರ ಬೀಡು. ಸರ್ವ ಕಲಾಪ್ರಕಾರಗಳು ಪ್ರತಿಭಾನ್ವಿತ ಕಲಾವಿದರಿಂದ ಸಂಪದ್ಭರಿತ. ಕಲೆ ಭಾವದ ಅಭಿವ್ಯಕ್ತಿಯೂ ಹೌದು, ಬದುಕಿನ ಬುತ್ತಿಯೂ ಸಹ. ಬಣ್ಣವೇ ಕಲಾವಿದರ ಬಾಳಿನ ಬೆಳಕು. ಆ ಬೆಳಕಿನಡಿಯಲ್ಲಿ ಬೆಳಗಿದ ಕಲಾಚೇತನಗಳ ಪರಂಪರೆಯ ಸಾರ್ಥಕ ಕೊಂಡಿ ಕಲಾವಿದೆ ಮಾಲತಿ ಸುಧೀರ್. ವೃತ್ತಿರಂಗಭೂಮಿಯ ದಿಟ್ಟ ಪ್ರತಿಭೆ. ಬಣ್ಣದ ಬದುಕಿಂದ ಚಿನ್ನದ ...
ಸೇವೆ ಬದುಕಿನ ಅತಿದೊಡ್ಡ ಮೌಲ್ಯ. ಸೇವೆಗೆ ನಾನಾ ರೂಪ, ಹತ್ತಾರು ಸ್ವರೂಪ. ಜೀವನ ಪಾವನಕ್ಕೆ ಸೇವೆಯೇ ಹೊನ್ನಸಾಧನ, ಸಾರ್ವಜನಿಕ ಸೇವೆ, ಜನಾರ್ಧನ ಸೇವೆಗೆ ಸಮ. ಆ ಕೈಂಕರ್ಯಕ್ಕಾಗಿ ಬದುಕು ಮುಡಿಪಿಟ್ಟವರು ಸರ್ವಕಾಲಕ್ಕೂ ಮಾದರಿಯೇ. ಅಂತಹ ಮಾದರಿ ಪರಂಪರೆಗೆ ನೀರೆರೆದು ಪೋಷಿಸಿದವರಲ್ಲಿ ಡಾ. ನಾ. ಮೊಗಸಾಲೆ ಪ್ರಮುಖರು. ವೈದ್ಯಕೀಯ, ಸಾಹಿತ್ಯಕ ...
ವಿಕಲತೆ ಶಾಪವಲ್ಲ, ಅಸಮರ್ಥತೆ ದುರಾದೃಷ್ಟವಲ್ಲ, ಮನಸ್ಸಿದ್ದರೆ ಮಾರ್ಗ, ಛಲವಿದ್ದರೆ ಬಲ. ಆತ್ಮವಿಶ್ವಾಸವೇ ಬದುಕಿನ ಅಂತರ್ಜಲ, ಗುರಿಯೇ ಸಾಧನೆಗೆ ಮೂಲ ಎಂಬುದನ್ನು ಸಾಕ್ಷೀಕರಿಸಿದ ಸಾಧಕರ ಸಾಲಿನಲ್ಲಿ ಅಗ್ರಪಂಕ್ತಿಗೆ ಸೇರುವ ಚೇತನ ಮಾಲತಿ ಹೊಳ್ಳ. ಗಾಲಿಕುರ್ಚಿಯ ಕ್ರೀಡಾಪಟು, ಸಮಾಜಸೇವಕಿ, ಬ್ಯಾಂಕ್ ಉದ್ಯೋಗಿ, ಬದುಕನ್ನು ಗೆದ್ದ ಅಂಕವಿಕಲೆಯಾಗಿ ಅವರದ್ದು ಅದ್ವಿತೀಯ ಸಾಧನೆ, ಆದರ್ಶಮಯ ...