ವಿಶ್ರಾಂತ ನ್ಯಾಯಾಧೀಶರು, ಕರ್ನಾಟಕ ಉಚ್ಛ ನ್ಯಾಯಾಲಯ ಸೇವೆಯೆಂಬುದು ಸಾರ್ವಕಾಲಿಕ ಮೌಲ್ಯ. ಪರಹಿತವೇ ಸೇವೆಯ ಅಂತಃಸತ್ವ. ಜನಸಮುದಾಯ ಮತ್ತು ಸಮಾಜದ ಹಿತರಕ್ಷಣೆಯ ಸಮಷ್ಠಿ ಪ್ರಜ್ಞೆಯಿಂದ ಬೆಳಗಿ “ಬೆಳಕಾದ” ಸೇವಾಮೂರ್ತಿಗಳು ಆನೇಕಾನೇಕ. ಸೇವೆಯೇ ಬಾಳಿನ ಬೆಳಕು, ಅದರಲ್ಲೇ ದೈವವ ಹುಡುಕೆಂಬ ಲೋಕನುಡಿಗೆ ಸಾಕ್ಷಿಯಾಗಿ ಬದುಕಿದವರ ಪುಣ್ಯಭೂಮಿ ಈ ಕರುನಾಡು. ಅಂತಹ ಸೇವಾಮೂರ್ತಿಗಳ ...
ಕನ್ನಡ ನಾಡಿನ ಸಾರಸ್ವರ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಿರುವ ಹಿರಿಯ ಸಾಂಸ್ಕೃತಿಕ ಚೇತನ ನ್ಯಾಯಮೂರ್ತಿ ಶ್ರೀ ನಿಟ್ಟೂರು ಶ್ರೀನಿವಾಸರಾವ್ ಅವರು. ಬೆಂಗಳೂರಿನಲ್ಲಿ ೧೯೦೩ರಲ್ಲಿ ಜನಿಸಿದ ಶ್ರೀಯುತರು ಮೈಸೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಸ್ನಾತಕ ಪದವಿಯನ್ನು, ಮದರಾಸು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನು ಪಡೆದು ವಕೀಲ ವೃತ್ತಿಯನ್ನು ಕೈಗೊಂಡರು. ಅನಂತರ ಅಡ್ವಕೇಟ್ ...