Project Description
ನೆಲದ ಮರೆಯ ನಿದಾನ: ಮೊದಲ ಮಾತು
ಸನ್ಮಾನ್ಯ ಎಸ್.ಎಸ್. ಒಡೆಯರ್ ಅವರು ಕೊಟ್ಟ ವರದಿಯನ್ನು ಆಧರಿಸಿ ಕರ್ನಾಟಕ ಸರ್ಕಾರವು ೧೯೯೧ ನವೆಂಬರ್ ೧ ರಂದು ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತಷ್ಟೆ. ಅದರ ಪ್ರಥಮ ಕುಲಪತಿಯಾದ ಮೇಲೆ ವಿಶ್ವವಿದ್ಯಾಲಯದ ಸ್ವರೂಪ, ಉದ್ದೇಶ, ಸಂರಚನೆಗಳ ಬಗೆಗಿನ ಕೆಲವು ಪ್ರಶ್ನೆಗಳನ್ನು ಮುಖಾಮುಖಿಯಾಗಿ ಎದುರಿಸಿ ಸ್ಪಷ್ಟಪಡಿಸಿಕೊಳ್ಳುವ ಅನಿವಾರ್ಯತೆ ನನಗೆ ಉಂಟಾಯಿತು. ಅದರ ಫಲವೇ [...]
ನೆಲದ ಮರೆಯ ನಿದಾನ
ಸಾವಿರಾರು ಐತಿಹಾಸಿಕ ನೆನಪುಗಳನ್ನು ತುಂಬಿಕೊಂಡಿರುವ ಹಂಪಿಗೆ ಇನ್ನೂ ಜಾಗೃತಿ ಇದೆ. ೧೯೩೪ರಲ್ಲಿ ವಿಜಯನಗರ ಸಾಮ್ರಾಜ್ಯದ ೬೦೦ನೇ ಜಯಂತಿಯ ಉತ್ಸವವನ್ನು ಇಡೀ ಕನ್ನಡ ನಾಡು ಸಡಗರದಿಂದ ಆಚರಿಸಿತು. ಅಂದಿನಿಂದ ಹೊಸ ಕನಸುಗಳು ಗಾಳಿಯಲ್ಲಿ ತೇಲಿ ಬರುತ್ತಲೇ ಇವೆ. ಹಂಪಿಯ ನೆಲದ ದೈವದಲ್ಲಿ ನಮಗೆ ಅಪಾರವಾದ ನಂಬಿಕೆ ಇದೆ. ಕ್ಷೇತ್ರ ಶಕ್ತಿಯ [...]
ನೆಲದ ಮರೆಯ ನಿದಾನ: ಸಂಶೋಧನಾಂಗ
ಸಂಶೋಧನೆಯ ಸ್ವರೂಪ ಸಂಶೋಧನೆಯ ಸ್ವರೂಪದ ಬಗ್ಗೆಯೇ ನಾವೀಗ ಹೊಸದಾಗಿ ವಿಚಾರ ಮಾಡಬೇಕಾಗಿದೆ. ನಮ್ಮ ನಾಡಿನಲ್ಲಿ ನಡೆದಿರುವ ಸಂಶೋಧನೆ-ಅದರಲ್ಲಿಯೂ ಮುಖ್ಯವಾಗಿ ಮಾನವ ಶಾಸ್ತ್ರಗಳಲ್ಲಿ – ಅಷ್ಟೊಂದು ತೃಪ್ತಿಕರವಾಗಿಲ್ಲ. ಆದರೆ ನಮ್ಮಲ್ಲಿ ವಿಷಯಗಳಿಗೇನೂ ಕೊರತೆ ಇಲ್ಲ. ನಮಗೆ ಇರುವ ಕೊರತೆ ಎಂದರೆ ಈ ವಿಷಯಗಳನ್ನು ಕುರಿತು ಅಭ್ಯಾಸ ಮಾಡಲು ಅನುಕೂಲವಾಗುವ ಶಾಸ್ತ್ರ [...]
ನೆಲದ ಮರೆಯ ನಿದಾನ: ಪ್ರಸಾರಾಂಗ
ನಮ್ಮ ಸಂಶೋಧನೆಗಳ ಪ್ರಮುಖ ಪ್ರಯೋಜನ ಎಂದರೆ ಉಪಯುಕ್ತತೆಯೇ ಆಗಿದೆ. ಈ ಉಪಯುಕ್ತತೆ ಒಳ್ಳೆಯ ಪರಿಣಾಮಗಳನ್ನು ನೀಡಬೇಕಲ್ಲದೆ ಅದು ಬರಿಗಣ್ಣಿಗೇ ಕಾಣಿಸುವಷ್ಟು ಸ್ಪಷ್ಟವಾಗಿರಬೇಕೆಂದು ನಮ್ಮ ಆಶೆ. ಆದ್ದರಿಂದಲೇ ನಮ್ಮ ಪ್ರಸಾರಾಂಗಕ್ಕೆ ಸಂಶೋಧನಾಂಗದಷ್ಟೇ ಜವಾಬ್ದಾರಿ ಇದೆ. ಸಂಶೋಧನೆಯಿಂದ ದೊರೆತ ವಿದ್ಯೆಯನ್ನು ಪ್ರಸಾರಾಂಗ ಮೂರು ರೀತಿಗಳಲ್ಲಿ ಪ್ರಸಾರ ಮಾಡುತ್ತದೆ; ನಾಡಿನ ತಜ್ಞರಿಂದ ಗ್ರಂಥಗಳನ್ನು [...]
ನೆಲದ ಮರೆಯ ನಿದಾನ: ಆಡಳಿತಾಂಗ
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಆಡಳಿತಾಂಗಗಳು ಪಡೆದುಕೊಳ್ಳುತ್ತಿರುವ ಅನವಶ್ಯಕ ಪ್ರಾಮುಖ್ಯತೆ ಕಣ್ಣಿಗೆ ರಾಚುವಂತಿದೆ. ಅವುಗಳಿಗೆ ನಿರ್ಮಿಸುವ ಕಟ್ಟಡಗಳಿಂದ ಹಿಡಿದು ಅಲ್ಲಿ ಕೆಲಸ ಮಾಡುವವರಿಗೆ ದೊರಕುವ ವಿಶೇಷ ಸೌಲಭ್ಯಗಳವರೆಗೆ ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳು ಮತ್ತು ಆಡಳಿತಾಂಗ ಇವುಗಳಲ್ಲಿ ತಾರತಮ್ಯ ಬೆಳೆಯುತ್ತಲೇ ಬಂದಿದೆ. ಹೀಗಾಗಿ ಆಡಳಿತಾಂಗಗಳು ಆಡಳಿತವನ್ನು ಮಾತ್ರ ನಿರ್ವಹಿಸದೆ ಅಧ್ಯಯನಾಂಗಗಳ ಸ್ವಾಯತ್ತತೆಯನ್ನೂ ನುಮಗಿಹಾಕಿವೆ. [...]
ನೆನಪಿನ ದೋಣಿಯಲ್ಲಿ-೬೭(೫)
ಜೆಜ್ ಎಂ. ಮಾರ್ಸೆ ಸಾಟೋ ೨, ರೂ ಆಗಸ್ಟ್ ಮಾಕೆ ೨೫-೧೧-೧೯೩೭ ಪ್ರೀತಿಯ ಪುಟ್ಟಪ್ಪ, ಸ್ವಲ್ಪ ಸಮಯದ ಹಿಂದೆ ನಾನು ಕಳುಹಿಸಿದ ಕಾರ್ಡು ತಲುಪಿರಬೇಕು. ನೀವು ಉತ್ತರವನ್ನೇ ಬರೆದಿಲ್ಲ. ಗ್ರಹಸ್ಥಾಶ್ರಮವನ್ನು ಪ್ರವೇಶಿಸಿದ ಮೇಲೆ ಸ್ಥಿತಿಗತಿಗಳೆಲ್ಲ ಸಮರ್ಪಕವಾಗಿದೆ ಎಂದು ಭಾವಿಸಿದ್ದೇನೆ. ಮಾನಪ್ಪ ಹೇಗಿದ್ದಾರೆ? ಅವರ ಶ್ರೀಮತಿಯ ಆರೋಗ್ಯ ಉತ್ತಮಗೊಳ್ಳುತ್ತಿದೆ ಎಂದು [...]