ಮಕ್ಕಳ ಸಾಹಿತ್ಯ

Home/ಮಕ್ಕಳ ಸಾಹಿತ್ಯ
ಮಕ್ಕಳ ಸಾಹಿತ್ಯ2017-02-10T12:05:56+05:30

Project Description

ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು: ರಾಮ-ಭೀಮ

ಒಬ್ಬ ರಾಜನಿದ್ದ. ಎಷ್ಟು ಕಾಲವಾದರೂ ಅವನಿಗೆ ಮಕ್ಕಳಾಗಲಿಲ್ಲ. ಒಮ್ಮೆ ಒಬ್ಬ ಋಷಿ ಅವನ ಅರಮನೆಗೆ ಬಂದ. ರಾಜ ಅವನ್ನು ಭಕ್ತಿಯಿಂದ ಸತ್ಕರಿಸಿ, “ನನಗೆ ಮಕ್ಕಳಾಗುವವೋ ಇಲ್ಲವೋ ಹೇಳಬೇಕು’ ಎಂದು ಕೈ ಮುಗಿದು ಕೇಳಿಕೊಂಡ. ಆಗ ಋಷಿ, ‘ಇಷ್ಟರಲ್ಲೇ ರಾಜ್ಯ ನಿನ್ನ ಕೈ ತಪ್ಪಿ ಹೋಗಿ ನಿನಗೆ ವನವಾಸ ಪ್ರಾಪ್ತವಾಗುತ್ತದೆ. [...]

ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು: ರಾಜಶೇಖರ

ಒಂದೂರಲ್ಲಿ ಒಬ್ಬ ರಾಜನಿದ್ದ. ಅವನಿಗೊಬ್ಬ ಮಗಳಿದ್ದಳು. ಅವಳು ಬಹಳ ಸುಂದರಿ. ಅನೇಕ ರಾಜಕುಮಾರರು ಅವಳನ್ನು ಮದುವೆಯಾಗುವುದಕ್ಕೆ ಪ್ರಯತ್ನ ಮಾಡಿದರು. ಆದರೆ ರಾಜ ಮಗಳನ್ನು ಕೊಡಲೊಪ್ಪದೆ ಏನಾದರೊಂದು ನೆಪ ಹೇಳಿ ಇಲ್ಲವೆನ್ನುತ್ತಿದ್ದ. ಮನುಷ್ಯರಿಗೆ ನೀಗದ ಶರ್ತುಗಳನ್ನು ಹಾಕುತ್ತಿದ್ದ. ತಂದೆಯ ಇಂಥ ಸ್ವಭಾವದಿಂದ ಮಗಳಿಗೂ ನೋವಾಗುತ್ತಿತ್ತು. ಆದರೆ ತಂದೆ ಹೇಳಿದ ಹಾಗೆ [...]

ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು: ಕಾಗೆ ಮತ್ತು ಜಿಂಕೆ

ಒಂದು ಕಾಡಿನಲ್ಲಿ ಒಂದು ದೊಡ್ಡ ಮರವಿತ್ತು. ಅದರಲ್ಲಿ ಬಹಳ ದಿನಗಳಿಂದ ಒಂದು ಕಾಗೆ ವಾಸಮಾಡಿಕೊಂಡಿತ್ತು. ಮರದ ಕೆಳಗೆ ವಾಸ ಮಾಡಲಿಕ್ಕೆ ಹಿಂಡಿನಿಂದ ತಪ್ಪಿಸಿಕೊಂಡ ಒಂದು ಜಿಂಕೆಯೂ ಬಂತು. ಕೆಲವು ದಿನಗಳಲ್ಲಿಯೇ ಕಾಗೆಗೂ ಜಿಂಕೆಗೂ ಗೆಳೆತನ ಬೆಳೆಯಿತು. ಬೆಳಿಗ್ಗೆ ಎದ್ದರೆ ಒಂದರ ಮುಖ ಒಂದು ನೋಡುತ್ತಿದ್ದವು. ಪರಸ್ಪರ ನಮಸ್ಕಾರ ಮಾಡುತ್ತಿದ್ದವು. [...]

ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು: ಹುಚ್ಚಯ್ಯ

ಒಂದೂರಿನಲ್ಲಿ ಮೂರು ಜನ ಅಣ್ಣತಮ್ಮಂದಿದ್ದರು. ಕೊನೆಯವನೇ ಹುಚ್ಚಯ್ಯ. ಅವನ ಹೆಸರು ಏನಿತ್ತೋ, ಅವನು ಹುಚ್ಚನಾದ್ದರಿಂದ ಜನ ಅವನನ್ನು ಹುಚ್ಚಯ್ಯನೆಂದೇ ಕರೆಯುತ್ತಿದ್ದರು. ಹಾಗೆಂದು ಕರೆದರೆ ಅವನಿಗೂ ಸಿಟ್ಟಿಲ್ಲ. ಹುಚ್ಚಯ್ಯ ಮುಚ್ಚಿ ಆಡುವ ಮನುಷ್ಯನಲ್ಲ. ರಹಸ್ಯವೆಂಬುದು ಅವನಿಗೆ ಗೊತ್ತೇ ಇಲ್ಲ. ಕೆಲವರು ಊರಲ್ಲಿ ಹಬ್ಬಬೇಕಾದ ಸುದ್ದಿಗಳನ್ನು ಹುಚ್ಚಯ್ಯನಿಗೆ ಹೇಳಿ, ‘ಯಾರ ಮುಂದೆಯೂ [...]

ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು: ಅನ್ನದಾನ

ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು. ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು. ಮಗ ಹೀಗೇ ಬೆಳೆದು ದೊಡ್ಡವನಾದ. ವಯಸ್ಸಿಗೆ [...]

ಬೇಡರ ಹುಡುಗ ಮತ್ತು ಗಿಳಿ ಮತ್ತು ಇತರ ಮಕ್ಕಳ ಕತೆಗಳು: ಬೇಡರ ಹುಡುಗ ಮತ್ತು ಗಿಳಿ

ಒಂದು ಅಡವಿಯಲ್ಲಿ ಒಬ್ಬ ಬೇಡರ ಹುಡುಗನಿದ್ದ. ಅವನು ಗಿಳಿಗಳನ್ನು ಹಿಡಿದು ಪಟ್ಟಣದಲ್ಲಿ ಮಾರಿ ಉಪಜೀವನ ಸಾಗಿಸುತ್ತಿದ್ದ. ಒಂದು ಸಲ ಅವನ ಬಲೆಯಲ್ಲಿ ಒಂದು ಅಪರೂಪದ ಗಿಳಿ ಸಿಕ್ಕಿಬಿತ್ತು. ಇನ್ನೇನು, ಆ ಗಿಳಿಯನ್ನು ಹಿಡಿಯಬೇಕೆನ್ನುವಷ್ಟರಲ್ಲಿ ಆ ಗಿಳಿ ಮನುಷ್ಯರಂತೆ ಮಾತಾಡಿತು: “ಹುಡುಗಾ ಹುಡುಗಾ ನನ್ನನ್ನು ಹಿಡೀಬೇಡ. ನಿನಗೆ ಮುಂದೆ ಒಳ್ಳೆಯದಾದೀತು.’’ [...]

ಕಾಸಿಗೊಂದು ಸೇರು : ಕಾಸಿಗೊಂದು ಸೇರು

ಒಂದು ಪಟ್ಟಣವನ್ನು ಅವಿವೇಕಿ ರಾಜ ಆಳುತ್ತಿದ್ದ. ಅವಿವೇಕಿ ರಾಜನಿಗೆ ಒಬ್ಬ ಅಜ್ಞಾನಿ ಮಂತ್ರಿ ಇದ್ದ. ಆದ್ದರಿಂದ ಆ ಪಟ್ಟಣದಲ್ಲಿ ಎಲ್ಲದಕ್ಕೂ ಒಂದೇ ದರ; ಒಂದೇ ಮಾತು. ಯಾವುದೇ ಅಂಗಡಿಯಲ್ಲಿ ಏನೇ ಪದಾರ್ಥ ಕೊಂಡರೂ ಕಾಸಿಗೊಂದು ಸೇರು ಸಿಗುತ್ತಿತ್ತು. ಕಸ್ತೂರಿಯೂ ಕಾಸಿಗೊಂದು ಸೇರು. ಅಕ್ಕಿಯೂ ಕಾಸಿಗೊಂದು ಸೇರು. […]

ಕಾಸಿಗೊಂದು ಸೇರು : ಬಡತಮ್ಮ – ಸಾವ್ಕಾರಣ್ಣ

ಒಂದಾನೊಂದು ಕಾಲದಲ್ಲಿ ಇಬ್ಬರು ಅಣ್ಣ-ತಮ್ಮ ಇದ್ದರು. ಅಣ್ಣ ಶ್ರೀಮಂತ. ಆಳು ಕಾಳು ಧನ ದಾನ್ಯದಿಂದ ಅವನ ದೊಡ್ಡ ಮನೆ ತುಂಬಿ ತುಳುಕುತ್ತಿತ್ತು. ಅವನ ಕೊಟ್ಟಿಗೆಯ ತುಂಬ ದಷ್ಟಪುಷ್ಟವಾದ ಹಿಂಡುವ ದನಗಳಿದ್ದವು. ಅವನ ತೋಟ ಯಾವಾಗಲೂ ಹಸಿರಾಗಿರುತ್ತಿತ್ತು. ಅವನ ಮನೆಯಲ್ಲಿ ಅವನಾಯಿತು, ಅವನ ಹೆಂಡತಿಯಾಯಿತು. ಸಣ್ಣವಾಗಲಿ, ದೊಡ್ಡವಾಗಲಿ ಮಕ್ಕಳಿರಲಿಲ್ಲ. ಅವರು [...]

ಕಾಸಿಗೊಂದು ಸೇರು : ಅಡಕೊತ್ತಿನಲ್ಲಿ ಅಡಕೆ

ಒಂದೂರಿನಲ್ಲಿ ಒಬ್ಬ ಶೆಟ್ಟಿಯಿದ್ದ. ಅವನಿಗೆ ಇಬ್ಬರು ಹೆಂಡಂದಿರು. ಇಬ್ಬರ ಹೆಂಡಿಂದಿರಿದ್ದ ಮೇಲೆ ಜಗಳವಾಡದೆ ಹೇಗಿದ್ದಾರೆ? ಆಕೆ ಹೌದೆಂದದ್ದನ್ನು ಈಕೆ ಅಲ್ಲವೆನ್ನುತ್ತಿದ್ದಳು. ನಾನಂಥವಳು, ನೀನಿಂಥವಳು — ಮುಂತಾಗಿ ಸದಾ ಮನೆಯಲ್ಲಿ ಜಗಳ, ಗದ್ದಲ, ಗಲಾಟೆ. ಏನು ಮಾಡಬೇಕೆಂದು ತೋಚದೆ ಚಿಂತೆ ಮಾಡಿ ಮಾಡಿ ಶೆಟ್ಟಿಯ ಕೂದಲುದುರಿ ತಲೆ ಬೋಳಾಯಿತು. ಇಬ್ಬರೂ [...]

ಕಾಸಿಗೊಂದು ಸೇರು : ಆಮೆ ರಾಜಕುಮಾರ

ಒಂದೂರಿನಲ್ಲಿ ಒಬ್ಬ ರಾಜ ಮತ್ತು ಅವನ ಪ್ರಧಾನಿ ಇದ್ದರು. ಇಬ್ಬರಿಗೂ ಬಹಳ ದಿವಸ ಮಕ್ಕಳೇ ಆಗಲಿಲ್ಲ. ಸಾಧು, ಸನ್ಯಾಸಿಗಳನ್ನು ಕೇಳಿದರು. “ಶಿವಪೂಜೆ ಮಾಡಿದರೆ ಮಕ್ಕಳಾಗುತ್ತವೆ’’ ಎಂದು ಹೇಳಿದರು. ಅದರಂತೆ ಇಬ್ಬರೂ ಬಹಳ ಭಕ್ತಿಯಿಂದ ಶಿವಪೂಜೆ ಮಾಡಲಾಗಿ ರಾಜನ ಹೆಂಡತಿ ಮತ್ತು ಮಂತ್ರಿಯ ಹೆಂಡತಿ ಇಬ್ಬರೂ ಗರ್ಭಿಣಿಯರಾದರು. ಆಗಲೇ ರಾಜ [...]

Project Details

Copyright:

ಕಣಜ

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top