. ಹನ್ನೊಂದು ಮಕ್ಕಳ ಫಲಾ ನೀಡಿದ ಮೆಹಬೂಬ

ಮೇಧಿನಿಯೊಳು ಮೆಹಬೂಬ ಶರಣರು
ಸತ್ಯದಲ್ಲಿ ಪ್ರಖ್ಯಾತ ಅನಿಸಿದರು
ಬಹು ಪ್ರೇಮ ಇಟ್ಟ ಭಕ್ತರ ಮ್ಯಾಲಾ
ಏರು|| ಬಗದಾದ ಪಟ್ಟಣಾ ಇರುವಂತ ಠಿಕಾಣಾ
ಅಬೂ ಸಾಲೆಹಾನ ಪುತ್ರ ಮಹಾಮುದ ಮೋಹನಾ
ಎಳಕ ವಯದಾಗ ಬೆಳಕ ಆದ್ರ ತಮ್ಮ ಜುಳಕ ತೋರಸ್ಯಾರ ಶರಣಾ.
ಚ್ಯಾಲಿ | ಶಿವಾ ಬರೆದಿದ್ದು ತುದಿ ನಾಲಿಗೆ ಮ್ಯಾಲಿ
ಹುಸಿ ಬೀಳಲಿಲ್ಲ ನುಡಿದಿದ್ದು ಬಾಯಿಲಿ
ಗುರಿಇಟ್ಟ ನಿಂತ ಒಗದಾಂಗ ಬಾಲಾ || ೧ ||

ಇ|| ಪತಿವೃತಾ ಗರತಿ ಗಂಡುಳ್ಳ ಬಾಲಿ
ಯಾವ ಮಾತಿಗೆ ಕಡಿಮಿಲ್ಲ ಮನೆಯಲ್ಲಿ
ಒಂದ ಕೂಸ ಮಾತ್ರ ಇದ್ದಿದ್ದಿಲ್ಲಾ
ಏರು|| ರಾತ್ರಿ ಹಗಲಿ ಚಿಂತಿ ಮಾಡತಾಳ ಪತಿವ್ರತಿ
ಕಂಡ ಮಂದಿ ನನಗ ಬಂಜಿ ಅಂತ ಮಾರಿ ತಿರುವತೈತಿ
ಇಷ್ಟಯಿದ್ದ ಏನ ಸುಟ್ಟ ಬಿಡಬೇಕ ಕಷ್ಟಬಾಳ ಐತಿ
ಚಾಲಿ|| ಹೀಂಗ ಮನಿ ಬಿಟ್ಟಾಳ ಮೋಹನ್ನಾ
ಹೋದಾಳ ಅಲ್ಲಿ ಒಬ್ಬ ಇದ್ರೋ ಶರಣಾ
ಶಿರಬಾಗಿ ಬಾಗಿ ಬಾಗಿ ಗಟ್ಟಿ ಹಿಡಿದಾಳ ಕಾಲಾ || ೨ ||

ಇ|| ಬಂದೇನಿ ಕೇಳಿ ನಿಮ್ಮ ವಾಹಿನಾ
ಏನ ಬೇಡಿದ್ದ ಕೊಡತಾರಂತಾ ಶರಣಾ
ಕೊಡಬೇಕ ಬೇಕ ಬೇಕ ನನಗ ಒಂದು ಪುತ್ರಫಲಾ ||
ಏರು|| ಕೇಳಿ ಆ ಹೆಣ್ಣುಮಗಳ ಬಿನ್ನಾ
ಶಿವನ ಕಡಿಗೆ ಅರ್ಜ ಮಾಡ್ಯಾರ ಶರಣಾ
ಬಂತ ಉತ್ತರಾ ಈಕಿ ನಸೀಬದಾಗ ಇಲ್ಲ ಸಂತಾನ
ಅಂದ್ರೋ ಶರಣಾ ಅದಕ ಏನ ಮಾಡಲಿ ನಾನಾ
ಚ್ಯಾಲಿ|| ದಾರಿ ಹಿಡದಾಳ ಅತಗೊಂತ ಅಲ್ಲಿಂದಾ
ನಾಯೇನ ಮಾಡಿದ್ದೇನ ಅಂತಾದಾ
ಈ ಕೆಟ್ಟ ಜಲ್ಮಾ ಹುಟ್ಟೇನು ಫಲಾ || ೩ ||

ಇ|| ಕರಕೊಂಡ ಹುಡುಗರಿಗೆ ಸಣ್ಣಾ ಸಣ್ಣಾ
ಆಡುತ್ತಿದ್ದರು ಅಲ್ಲಿ ಮೆಹಬೂಬ ಶರಣಾ.
ಆಗ ಬಿತ್ತ ನಜರ ಬಂಜೆಯ ಮೇಲಾ
ಏರು|| ಆಡೂದು ಬಿಟ್ಟ ಬಂದಾ ಕೇಳತಾರ ಮೆಹಬೂಬ ಪ್ರೇಮದಿಂದಾ
ಹೇಳಬೇಕ ನೀ ಯಾಕ ಅಳತೀದಿ ದುಃಖ ಮನಸಿನಾಂದಾ
ದಾರಿ ಬಿಡ ನಿನಗ ಏನ ಹೇಳುದೈತಿ ಅದಿ ಸಣ್ಣ ಕಂದಾ
ಚ್ಯಾಲಿ|| ಹಟ ಹಿಡಿದಾರ ಮೆಹಬೂಬ ಕೇಳಲಿಲ್ಲಾ
ಒಂದ ಹೆಜ್ಜಿ ಮುಂದಕ ಬಿಡಲಿಲ್ಲಾ
ಇಷ್ಟ ಜುಲುಮಿ ಯಾಕಪ್ಪಾ ನನ್ನ ಮ್ಯಾಲಾ || ೪ ||

ಇ|| ನಾ ಹೋಗಿದ್ದೆ ಶರಣರಂತೇಕ ಮನಸಾಗಿ ಮಕ್ಕಳ ಬೇಡುದಕ
ಅವರು ಇಲ್ಲ ಇಲ್ಲ ಇಲ್ಲ ಅಂದ್ರ ನನಗ ಫಲಾ
ಅದಕಾಗಿ ದುಃಖದಾಗ ಹೋಗತಿದ್ದೆ ಚಿಂತಿವೊಳಗ
ಆಡೂದು ಬಿಟ್ಟುಬಂದ ತರಿಬಿರಿ ನೀವು ನನಗ
ಅಂದ್ರೋ ಮೆಹಬೂಬ ಒಂದಾ ಮಗಾ ಕೊಟ್ಟೇನಿ ನಾನು ನಿನಗ
ಚ್ಯಾಲಿ|| ಕೇಳಿ ಮೆಹಬೂಬಗಂತಾಳ ಹೆಣ್ಣಬಾಲಿ
ದುಃಖ ನಂದು ನಿನಗ ಆಗೈತಿ ನಕಲಿ
ಥರಾ ಅಲ್ಲಾ ಅಲ್ಲ ಅಲ್ಲ ಹುಡುಗಾಟ ಚಲೋದಲ್ಲಾ || ೫ ||

ಇ|| ಮತ್ತ ಮೆಹಬೂಬ ಅಂತಾರ ಮುಂದ ಬಂದಾ
ತಗೋ ಒಂದೇನ ಮಾಡತಿದಿ ಹನ್ನೊಂದಾ,
ಒಂದೊಂದಾ ಒಂದ ಬಂದ ಒಂದರಕ್ಕಿಂತ ಒಂದ ಮಿಗಿಲಾ
ಏರು|| ಇಷ್ಟು ಹೇಳಿ ಬಿಟ್ಟ ದಾರಿ ಮನಿಗೆ ಹೋದಾಳ ಬಿರಿಬಿರಿ
ಅದೇ ತಿಂಗಳದಾಗ  ಬಸರ ಆದಾಳ ಆ ಗಂಡುಳ್ಳ ನಾರಿ
ಹನ್ನೊಂದು ಮಕ್ಕಳ ಹಡದಾಳ ಕೂಸಿನರೂಪ ಚಂದ್ರ ಸರಿ
ಚ್ಯಾಲಿ|| ಹೌದ ಹೌದ ನಮ್ಮ ಮೆಹಬೂಬ ಶರಣಾ
ನನ್ನ ಹೊಟ್ಟೀಲಿ ಕೊಟ್ಟಾರ ಸಂತಾನಾ
ದಿಡ ಇಟ್ಟ ಇಟ್ಟ ಇಟ್ಟ ನಡದ ರಾತ್ರಿ ಹಗಲಾ || ೬ ||

ಇ|| ಈ ಸುದ್ದಿ ಕೇಳಿ ಅಲ್ಲಿ ಶರಣಾ ಕೇಳತಾರ ಸಾಂಬಗ ಆಕ್ಷಣಾ
ನನಗಿಲ್ಲ ಇಲ್ಲ ಇಲ್ಲ ಇಲ್ಲ ಅಂದಿರಿ ರಬ್ಬೀಲಲಾ
ಏರು|| ಇಲ್ಲಂತ ನನಗ ಹ್ಯಾಂಗ ಕೊಟ್ಟಿ ಮೆಹಬೂಬಗ
ಶಿವಾ ಅಂದಾ ಇದು ಮೆಹಬೂಬರ ವಚನಾ ಇಲ್ಲ ನನ್ನ ಕೈಯಾಗ
ಹುಸೆ ಹೋಗದಾಂಗ ಮೊದಲಿಗಿ ಬರದಿನಿ ತುದಿನಾಲಿಗಿ ಮ್ಯಾಲ
ಚ್ಯಾಲಿ|| ಹೀಂಗ ಕೇಳಿ ಶರಣಾ ಸುಮಕ ಕುಂತಾ
ದಸ್ತಗೀರ ಕೇಸುವೇರ ನಮಗ ವಲಿತಾ
ಏನು ಚಂದ ಚಂದ ಚಂದ ನಾಗೂ-ಗೌಸೂನ ಅಕಲಾ

* * *

. ನೀರಿನಲ್ಲಿ ಮುಳುಗಿ ಸತ್ತ ಮದುಮಗನನ್ನು ಬದುಕಿಸಿದ ಮೆಹಬೂಬರ ಪದಾ

ನೀತಿ ಮಾತು ಸಾರಿ ಹೇಳತೇನಿ ಕೇಳರಿ ದೈವೆಲ್ಲಾ
ಮೆಹಬೂಬರು ಮೀರಿ ತೋರಿದರು ಮರ್ತ್ಯದಾಗ ಲೀಲಾ || ಪಲ್ಲವಿ ||

ಏರು|| ಮೆಹಬೂಬ ಕರುಣಾ ಹೊಂಟಾಗ ಒಂದು ದಿನಾ ಭೆಟ್ಟಿ ಆದಾಳಲ್ಲಾ
ಅಳತಿತ್ತೊ ಮುದುಕಿ ಹಗಲೆಲ್ಲಾ ಮೆಹಬೂಬರು ವಿಚಾರ ಮಾಡಿ ಕೇಳತಾರ ಖುಲ್ಲಾ || ೧ ||

ಇ|| ಮುದುಕಿ ಅಳತಿದ್ದಳು ತನ್ನ ಮಗನ ನೆನಸಿ ಪೈಲಾ
ಯಾರ‍್ಯಾರು ಬಂದು ಹೇಳಿದರೂ ಬಿಡಲಿಲ್ಲಾ
ಏರು|| ಮೆಹಬೂಬ ಪೀರಾ ಮಾಡತಾರ ವಿಚಾರ ಹೇಳಬೇಕೋ ಬಂದುದೆಲ್ಲಾ
ಮುದುಕಿ ಜವಾಬ ಕೊಡಲಿಲ್ಲಾ | ಹಂತೇಲಿ ಇದ್ದೊಬ್ಬ ಹೇಳತನ ತಪಸೀಲಾ || ೨ ||

ಇ|| ಮುದುಕಿಗೆ ಒಬ್ಬ ಮಗ ಇದ್ದಾನೋ ಪ್ರಭೂಲಾ
ಮಗನ ಮೇಲೆ ಪ್ರೀತಿ ಬಹಳ ಇತ್ತೊ | ಬಿಟ್ಟ ಕ್ಷಣ ಇರತಿದ್ದಿಲ್ಲಾ
ಏರು|| ಮಗನ ಮದುವಿನಾ ಮಾಡಬೇಕಂತಾ ಮನಿಮಂದಿ ಕೊಡಸ್ಯಾಳಲ್ಲಾ
ನಿಬ್ಬಣ ಹೊಂಡಿಸ್ಯಾಳ ತತ್ಕಾಲಾ ಹಡಗದ ಮೇಲೆ ಪಯಣ ಮಾಡಿ ಮುಟ್ಯಾರಲ್ಲಾ || ೩ ||

ಇ|| ಲಗ್ನ ಮಾಡ್ಯಾರಾ ಅವರು ಗರ್ದಿಲೆ ಖುಷಿಯಾಲಾ
ಧನ ದೌಲತ್ತು ಕೊಟ್ಟಿದ್ದಾ ದೇವರು ಕಡಿಮೆ ಏನು ಇದ್ದಿಲ್ಲಾ
ಏರು|| ಊಟ ಉಪಚಾರ ಮಾಡಸ್ಯಾರೋ ಬಹು ಜನರಿಗೆಲ್ಲಾ
ದಾನ ಧರ್ಮ ಕೊಟ್ಟಾಳೋ ಮುದುಕಿ ಬಡಜನರಿಗೆಲ್ಲಾ || ೪ ||

ಇ|| ಲಗ್ನ ಮಾಡಿಕೊಂಡು ಮಂದಿ ತಿರುಗಿ ಬಂದೀತಲ್ಲಾ
ಹಡಗ ಏರಿ ಕುಂತಾರೋ ಜನರು ಬಂತು ಕಾಡು ಕಾಲಾ
ಏರು|| ನೀರು ಏರೇತಿ ಭರತಿ ನಡುವೆ ಒಂದೈತಿ ಹಡಗ ಮುಣುಗಿತಲ್ಲಾ
ಜನರು ಆದಾರೋ ಬುಡಮೆಲಾ | ಎಲ್ಲಾರು ಮುಣಗಿ ಹೋದರು ಆದೀತೊ ಗಾಲಮೇರಾ
ಇ|| ಮುದುಕಿ ದೈವಾ ನೋಡರಿ ಎಂತಾದು ಇದ್ದಿತಲ್ಲಾ
ಅದರೊಳು ಉಳದೀತೊ ಕಷ್ಟ ಪಡುವ ಕಾಲಾ.
ಏರು|| ಮುದುಕಿ ದೈವಾ ಇತ್ರಿ ಸಿಂಗಡಿ ಹತ್ತೈತಿ
ದೇವ ಉಳಿಸ್ಯಾನಲ್ಲಾ ನೀರು ದಾಟಿ ಬಂದಾಳಲ್ಲಾ
ಹಡಗ ಹೋತೋ ಗಾಲಮೇಲಾಗಿ ಕಾಣದಾಂಗ ಎಲ್ಲಾ || ೬ ||

ಇ|| ದಂಡಿ ಮೇಲೆ ಕುಂತು ಮುದುಕಿ ಶೋಕ ಮಾಡ್ಯಾಳಲ್ಲಾ
ದೇವರ ಧ್ಯಾನ ಮಾಡೂತ ಮನಸಿನ್ಯಾಗ ಹೊಂಟಾಳಲ್ಲಾ
ಏರು|| ದಿನಾ ಒಂದು ಸರತಿ ನೀರಿಗೆ ಬರತೈತಿ
ಕುಂತ ದಂಡಿಯ ಮೇಲೆ ಅಳತೈತಿ ಹೇಳಿದರೂ ಕೇಳಲಿಲ್ಲಾ
ಬಹು ಘೋರ ದುಃಖಾ ಒದಗೀತೋ ಬಂದು ಆಕಿಯಮ್ಯಾಲಾ || ೭ ||

ಇ|| ಇದರಂತೆ ಎಲ್ಲ ವಿಚಾರ ಒಡೆದು ಹೇಳ್ಯಾನಲ್ಲಾ
ಕೇಳಿ ಆಗ ಮೆಹಬೂಬರಿಗೆ ಕರುಣ ಬಂದಿತಲ್ಲಾ
ಏರು|| ಮುದುಕಿ ಮುಂದ ಹೇಳತಾರ ಬಂದ ಅಳಬ್ಯಾಡ ಹಗಲೆಲ್ಲಾ
ನಿನ್ನ ಮಗನ ಕೊಡುವೆನಲ್ಲಾ
ಹರುಷಾದ ಮುದುಕಿ ಆವಾಗ ಪಾದ ಹಿಡಿದಾಳಲ್ಲಾ || ೮ ||

ಇ|| ಹಡಗವು ಮುಣುಗಿ ಆಗಿತ್ತು ಇಪ್ಪತ್ತು ವರ್ಷಕಾಲ
ಆವಾಗ ಶರಣರು ಎಬಸಿದರು ತೋರಿ ಲೀಲಾ
ಏರು|| ಮೂರು ಸರತಿ ಧ್ಯಾನಾ ನೆನೆದಾರ ದೇವರನಾ
ಹಡಗ ಬಂದಿತಲ್ಲಾ ನಿಬ್ಬಣ ಸಹಿತ ಇತ್ತ ಅಸಲಾ || ೯ ||

ಇಂಥ ಕೌತೂಕ ಜಗದೊಳು ಯಾರು ತೋರಲಿಲ್ಲಾ
ಮದುಮಗನ ಕರಕೊಂಡು ಅವರು ದಾರಿ ಹಿಡಿದಾರಲ್ಲಾ
ಏರು|| ನಿಬ್ಬಣ ಬಂದೀತು ಊರಾಗ ಜನರು ನೋಡ್ಯಾರಲ್ಲಾ
ಹುರುಷಾಗಿ ಜನರೆಲ್ಲಾ | ಕೂಡಿ ಎಲ್ಲಾರು ಅಸಲಾ || ೧೦ ||

ಬಾಗಲಕೋಟ ರಂಗಲಾಲಾ | ಪೀರ ದಸ್ತಗೀರನ ಬಂಗಾರಗೋಲಾ
ನಾಗೂ-ಗೌಸು ಕವಿಗಳ ಮಿಗಿಲಾ | ವೈರಿಗೆ ಸೀರಿ ಉಡಿಸ್ಯಾರಲ್ಲಾ

* * *

. ಸತ್ತವನನ್ನು ಬದುಕಿಸಿದ ಮಾಬೂಬರ ಪದಾ

ಪಂಡಿತ ಪಂತರೆಲ್ಲಾ ಇಟ್ಟ ಕೇಳರಿ ಖ್ಯಾಲಾ
ತಿಳಿಸಿ ಹೇಳುವೆ ಖುಲ್ಲಾ ಸರೂಜನಕೆಲ್ಲಾ ||
ಏರು|| ಅಕ್ಷರ ನುಡಿ ಕಟಬಂದ ಬರಲಿ ಶ್ಯಾಹಿರ ಒಂದಕ ಒಂದ
ತಪ್ಪ ಆದರ ಪಡದೊಳು ನಂದು ಮಾಫ ಮಾಡರಿ ದೈವಾ ಇಂದಾ || ೧ ||

ಇ|| ಜಿಲಾನಿ ಊರಾಗ ಜೋಡಿ ಇದ್ದಾರು ಸತಿ ಪತಿ ಕೂಡಿ
ಮಾಬೂಬರ ಧ್ಯಾನ ಮಾಡಿ ನಿತ್ಯ ನಿರಕ
ಏರು|| ಮುತ್ತುಮಾಣಿಕ ಮನಿತುಂಬ ರತ್ನಾ ಕೊಟ್ಟಿದ್ದ ಆ ಭಗವಾನಾ
ಅವರಿಗೆ ಇದ್ದಿಲ್ಲೋ ಸಂತಾನಾ ನಿತ್ಯ ಮಾಡುವರೋ ಸಾಂಬನ ಧ್ಯಾನಾ
ಬಿಡದೆ ತೀವ್ರಾ ಬಿಟ್ಟ ಹೊಂಟಾರೋ ನಗರಾ
ಮಾಬೂಬರ ಪಾದಕ ಎರಗಿ ಸಂತಾನ ಬೇಡೂನು ಹೋಗಿ
ಬರೂನ ಮೂರು ದಿನದಾಗ ತಿರುಗಿ || ೨ ||

ಹೋಗುವಾಗ ಹಾದಿವೊಳಗ ಕೆಟ್ಟ ಬ್ಯಾಸಿಗಿ ಬಿಸಿಲ ಅಡವ್ಯಾಗ
ಸುರೂತ್ತಿತ್ತೊ ತೆಲಿಮ್ಯಾಗ ತಕ್ಷಣಕ
ಏರು|| ಉತ್ಪತ್ತಿ ವನದೊಳಗ ಹೋಗಿ ಕುಂತಾರೋ ಆಗ
ನಿದ್ದಿ ಬಂತೋ ಪತಿರಾಜಾಗ ಮಲಗ್ಯಾನ ತನ್ನ ಸತಿ ತೊಡಿಮ್ಯಾಗ
ನಿದ್ದಿ ಭರಪೂರ ಆಗ ಹತ್ತಿತೋ ತೀವ್ರಾ
ವನದೊಳು ಆಡೂತ ಚಂದ ಬಂದಿತ್ರಿ ಸರಪ ಒಂದ
ಕಡಿದಿತೋ ಆ ಪುರುಷಗ ಬಂದ ತಿಳಿಮನಕ || ೩ ||

ಇ|| ನೋಡ್ಯಾಳೋ ಆತನ ಮಡದಿ ಬಡಕೊಂತಾಳೊ ಎದಿ ಎದಿ
ಪತಿರಾಜಾ ಬಿಟ್ಟು ನಡದಿ ನಡಬರಕ
ಏರು|| ಅಳತಾಳೋ ಆ ಮೊಹನ ವ್ಯಾಳೇ ಬಂತು ಎಂಥ ಕಠಿಣಾ
ಹತ್ತಿ ದುಃಖದಲ್ಲೆ ಹೋಗುವ ಜನ ಬಂದು ಮಾಡ್ಯಾರೋ ಆತನ ಮಣ್ಣಾ
ಗೋರಿ ಹಂತೇಲಿ ಹಾಕ್ಯಾಳೋ ಚಪ್ಪರಾ
ದರದಿನಾ ಅಳತಾಳಲ್ಲಾ ಕುಂತಗೊಂಡ ಗೋರಿ ಹಿಂಬಾಲಾ
ಮಬೂಬರ ಮಾರಿ ನೋಡಲಿಲ್ಲ ಸುಡಲೀ ಮನಕ || ೪ ||

ಕುಡಿತ್ತಿತ್ತೊ ಕಣ್ಣೀನ ನೀರ ಉತ್ತತ್ತ ಗಿಡದ ಬೇರ
ಒಣಗಿ ಹೋಗಿತ್ರಿ ತಾರಾ ನೋಡಿ ದುಃಖಾ
ಏರು|| ಆಗ್ಯಾವ ಎಂಬತ್ತು ವರ್ಷಾ ದೈವಾ ಕೇಳರಿ ಇಟ್ಟ ಧ್ಯಾಸಾ
ಧೀರ ಪೀರ ಮಾಬುಬರ ಮನಸಾ ಬಿಟ್ಟ ಹೊಂಟಾರೋ ಬಗದಾದ ಖಾಸ
ಹಾದಿವೊಳಗ ಗೋರಿ ಕಂಡಾರೋ ಆಗ
ಇದು ಏನೋ ಚಮತ್ಕಾರಾ ನೋಡತಾರೋ ದಸ್ತಗೀರಾ
ಕುಂತಿದ್ದಳು ಹೆಣ್ಣು ಸುಂದರ ಬಾಡಿ ಮುಖವಾ || ೫ ||

ಇ|| ಯಾರವ್ವಾ ತಾಯಿ ನೀನು ಅಳೂದು ಏನು ಕಾರಣಾ
ಇದು ಯಾರದು ಐತಿ ವ್ಯಸನಾ ಹೇಳಬೇಕ
ಏರು|| ಇಷ್ಟು ಕೇಳಿ ತಗದಾಳೋ ಕಣ್ಣಾ | ಹೋಗಿ ಹಿಡಿದಾಳೋ ಚರಣಾ
ಸಂಗಲೀಲೆ ಕರಕೊಂಡು ನನ್ನ ಗಂಡನ್ನಾ
ಸಂತಾನ ಬೇಡಲಾಕ ಹೊಂಟಿದ್ದೆ ನಾನಾ
ಹೋಗುವಾಗ ದಾರಿವೊಳಗ ಬಿಸಲಹತ್ತಿ ನನ್ನ ಗಂಡಗ
ಉತ್ತತಿ ವನದೊಳಗೆ ನಿದ್ರಿ ಜುಳಕ || ೬ ||

ಇ|| ವನದೊಳು ಆಡೂತ ಚಂದ | ಬಂದಿತ್ರಿ ಸರ್ಪವೊಂದ
ಕಡದೀತೋ ಪುರುಷಗ ಬಂದ ತಿಳಿಮನಕ
ಏರು|| ಇಷ್ಟು ಕೇಳಿ ಮಾಬೂಬರಾಗ | ನೆನೆದಾರೋ ಸಾಂಬಗ
ಎಬಿಸಬೇಕೋ ಈಕಿಯ ಗಂಡಗ ಬ್ಯಾಗ
ಪಂತ ಹಾಕ್ಯಾರೋ ದಸ್ತಗೀರ ಆಗ
ಮಾಬೂಬರ ವಚನ ಕೇಳಿ ಮೆಚ್ಚಾನೋ ಶಿವನು
ಎರಡು ಹೋಳು ಆದೀತೋ ಗೋರಿ | ಹೊರಗ ಬಂದಾನೋ ದೊರಿ
ಎರಗಿ ಮಾಡ್ಯಾನೋ ಮುಜರಿ ಬಿದ್ದ ಪಾದಕ || ೭ ||

ಇ|| ಸತಿ ಪತಿ ಹೇಳ್ಯಾರೋ ತೀವ್ರಾ ಕೊಡಬೇಕ್ರಿ ಒಂದ ಪುತ್ರಾ
ಇಡತೇವರಿ ನಿಮ್ಮ ಹೆಸರಾ ಬಿದ್ದ ಪಾದಕ
ಏರು|| ಇಷ್ಟು ಕೇಳಿ ಮಾಬೂಬರಾಗ
ಕೊಟ್ಟೇನೋ ಹೋಗು ಸಂತಾನ ನಿಮಗ
ದೇಶದಲ್ಲಿ ದಸ್ತಗೀರನ ಬೆಳಕ
ಎರಗಿ ಹಾಡುವರೋ ಸಭಾದೊಳು ಕಡಕ
ಹಡಕ ಶಾಹೀರಾ ಹುಡಕ ಇಂಥ ಅಕ್ಷರಾ
ಬಾಗಲಕೋಟೆ ಕಡಕ ಲಚ್ಚಮನಸಿಂಗನ ಕವಿಗಳ ತೊಡಕ
ಶಾಹೀರಿ ನಿಂದರೋ ಎಡಕ ತೊಟ್ಟ ಬುಲಾಕ || ೮ ||

* * *

೧೦. ಮೆಹಬೂಬ ಸುಬಹಾನಿಯವರು ಮಾಡಿದ ಪವಾಡ ಪದಾ

ಕಂದ ಬಾಲಕ ಇಂದ ಮಾಡುವೆ ಶರಣಾ
ಖ್ಯಾಲ ಇಡರಿ ಬಾಲ ಲೀಲಾನ ವರಣಾ ||
ಏರು|| ಪಂಚರೆಲ್ಲರೂ ಕೂಡಿರಿ ಚೌಕಾಸಿ ಮಾಡಿರಿ
ಮಿಕ್ಕಿಪಡದೊಳು ಸಿಕ್ಕಿಶಾಹಿರಾ | ಬಲ್ಲೆನು ನಾನು ನಿನ್ನ ಅಡಗೇರಿ
ಚ್ಯಾಲಿ|| ಕಲಿಸಾಲಿ ಹುಚ್ಚಪ್ಯಾಲಿ | ತಿಳಿವಲ್ಲಿ ಮನದಲ್ಲಿ ನೀ ಜಿಗದಾಡಿ ಖಾಲಿ
ಬಂದ ಫಡಕ ಆಗೀದಿ ಎಡಕ | ನಿಂದರೋ ಏ ಹುಚ್ಚಪ್ಯಾಲಿ
ನಿನಗ ಎಷ್ಟು ಹೇಳಲಿ ದರವರ್ಷ ಆಗಿ ಹೊಲಸ ಕಳಕೊಂತಿ ಮಾನಾ || ೧ ||

ಮುಖ್ಯ ಮುಸಲ್ಮಾನಿ ಬಗದಾದ ವತನಾ
ಧೀರ ಪೀರಗುರು ದಸ್ತಗೀರ ಮೆಹಬೂಬ ಶರಣಾ
ಏರು|| ಮುಕ್ತಿ ಕೊಡುವರೋ ಭಕ್ತರಿಗೆ ಸಮಸ್ತ ಆ ಮೆಹಬೂಬವಲಿ
ಹುಟ್ಟ ಬಂಜಿಗೆ ಕೊಟ್ಟ ಫಲಗಳು ಎಷ್ಟು ಹೇಳಲಿ ಬಾಯಲಿ
ಮಹಾಶಮರಂತ ಭೂಕಾಂತ ಸದಾ ಸಂಬರಾದರೊ
ಚ್ಯಾಲಿ || ಆ ಮೆಹಬೂಬ ಶರಣರು ಜಗಪಾಲ ಜಗಭರಿತ
ಜಗದಲ್ಲಿ ಆದಾರೋ ಆ ಸತ್ಯಶರಣರೋ
ಒಂದು ದಿನಾ ಆಗಿ ಮನಾ ಹೊಂಟಾರೋ ಶರಣಾ || ೨ ||

ಶಾರ ನೋಡೂತ ಹೊಂಟಾರ ಶರಣರು ಒಂದಿನಾ
ಧೀರ ಶುಕ್ರವಾರ ದಿನಾ ಮಾಡಿ ನಮಾಜನಾ ||
ಏರು|| ಹಿಡಿದ ದಾರಿ ನಡದಾರೋ ನೆನಸಿ ಸಾಂಬನ ಮನದಲಿ
ಒಂದ ಮುದುಕಿ ಬಂದು ಅಂತಾಳೋ ಬಿದ್ದು ಅವರ ಪಾದದ ಮ್ಯಾಲೆ
ಬಂದ ಕಷ್ಟ ಮಾಡ್ಯಾರೋ ನಷ್ಟ ಸೃಷ್ಟಿಕರ್ತ ಸಾಂಬನೋ
ನನ್ನ ಮ್ಯಾಲೆ ಮುನದಾನೋ ಹನ್ನೆರಡು ಕೂಸು ಆಗ್ಯಾವೋ
ಮೋಸ ಹೊಂದೇನೋ ನಾ ಏನು ಹೇಳಲಿ ಇನ್ನ
ಇ|| ನನ್ನ ಗೋಳ ಶಿವಬಲ್ಲ ಅವನೇ ಭಗವಾನಾ || ೩ ||

ನನ್ನ ಸಂಗ ನಡೀರಿ ಹೀಂಗ ತೋರಿಸುವೆ ನಾನಾ
ಕೇಳಿ ವಚನಾ ಹತ್ತಿ ಬೆನ್ನಾ ಹೊಂಟಾರೋ ಶರಣಾ
ಏರು|| ಹೋಗಿ ನೋಡ್ಯಾರೋ ಶರಣಾ ನಿಂತ ಆ ಮುದುಕಿ ಮನೆಯಲ್ಲಿ
ಶ್ರೇಷ್ಟ ಸಾಂಬನ ಆಟ ನಾ ಎಷ್ಟಂತ ಹೇಳಲಿ ಬಾಯಲಿ
ಸುತ್ತಮುತ್ತ ನೋಡ್ಯಾರೋ ನಿಂತ ಹೆಣ ಬಿದ್ದಾವೋ ಸಾಲಾ
ಆ ಹನ್ನೆರಡು ಬಾಲಾ ತುಂಡಾಗಿ ಬಿದ್ದಾವೋ ರುಂಡ ಕಡಕ
ಮುರದ ಕೈಕಾಲಾ ಚೆಲ್ಲಿ ಹೋಗ್ಯಾರೋ ಮೊದಲಾ
ಇ|| ನನ್ನ ಗೋಳ ಶಿವ ಬಲ್ಲಾ ಅವನೇ ಭಗವಾನಾ || ೪ ||

ಕೇಳಿ ಮುದುಕಿ ಹೇಳ್ಯಾರಾಗ ಆದಂತ ಕಥನಾ
ಈ ಊರ ಅರಸ ಬಂದು ಕೊಂದಾನ ಕೂಸಿನ್ನಾ
ಏರು|| ಕೈಯ್ಯ ಜೋಡಿಸಿ ನಾನು ಹೇಳಿದೆ ಕೊಲಬ್ಯಾಡ್ರಿ ಕೂಸಿನ್ನಾ
ಕಡದ ಹ್ವಾದಾನೋ ನಡದ ಹ್ವಾದಾನೋ ಸುಮ್ಮನಾ
ಎಷ್ಟಂತ ಹೇಳಲಿ ನಾನಾ ಆ ಅರಸ ಹಂತೇಲಿ ಏನು ಕಾರಣಾ
ಇ|| ಕೊಂದಿ ಕೂಸಿನ್ನ ಹೇಳಬೇಕೊ ನೀನಾ || ೫ ||

ಕೇಳಿ ಅರಸಾ ಆಗಿ ರೌಸಾ ಹೇಳ್ಯಾನ ಬೇಮಾನಾ||
ನನ್ನ ರಾಜೇಕ ನಾನು ಇದ್ದಾಂಗ ಭಗವಾನಾ
ಏರು|| ಮುಸಲ್ಮಾನರ ಅಂಶ ಇಡುವುದಿಲ್ಲ ನನ್ನ ಊರಲ್ಲಿ
ಆದಕಾರಣ ಕೊಂದೇನಿ ನಾನ ಏನ್ಮಾಡತೀದಿ ನನ್ನ ಮ್ಯಾಲಿ
ಸಂತಾಪ ಕೋಪಲಿಂದ ಶ್ರಾಪ ಕೊಟ್ಟಾರೋ ಶರಣಾ
ಸರಪಾ ಆದ ಹೈವಾನ ಅವನ ರಾಜ್ಯದೊಳಗ
ಬೆಂಕಿಮಳೆ ಸುರಿಸ್ಯಾರೋ ಶರಣಾ ಮಾಡಿ ಬಿಟ್ಟಾರೋ ಹಸನಾ
ಇ|| ಹೇಳ್ಯಾರೋ ಮುದುಕಿಗೆ ಧೈರ್ಯ ಅಂಜಬ್ಯಾಡವ್ವಾ ನೀನಾ || ೬ ||

ಹನ್ನೆರಡು ಕೂಸಿಗೆ ಆಗ ಜೋಡಿಸಿ ಶರಣಾ
ಶ್ಯಾಲ ಹೊಚ್ಯಾರೋ ಮ್ಯಾಲೆ ನೆನಸುತ್ತಾ ಶಿವನಾ
ಏರು|| ಅರಜಮಾಡ್ಯಾರೋ ಸಾಂಬಗ ಸತ್ಯವಂತ ಆ ಮೆಹಬೂಬವಲಿ
ಜೀವತುಂಬಿ ಕಂದ ಎದ್ದಾವೋ ಬಿದ್ದಾವೋ ಅವರ ಪಾದದ ಮ್ಯಾಲೆ
ಶ್ರೇಷ್ಟ ಬಾಗಲಕೋಟೆವೊಳಗ ದಸ್ತಗೀರವಲಿ
ಬೀಳ ಅವರ ಪಾದದ ಮ್ಯಾಲಿ ಕೊಡತೇವಿ ರಣಹೇಡಿ
ಹುಡಿಕ್ಯಾಡಿ ಪಡದಲ್ಲಿ ಇಂದ ತೀರಿ ಹೋಗಲಿ
ಲಚಮನಸಿಂಗ ಕವಿ ಹೊಡದಾಂಗ ಬಾಣ || ೭ ||

* * *

೧೧. ಹಸನ ಬಸರಿ ಮತ್ತು ಚೋಳಿನ ಪದಾ

ಶ್ರೀಮಂತ ಸಭಾ ಕುಂತಿರಿ ಬುದ್ಧಿವಂತೆಲ್ಲಾ
ಕೇಳರಿ ಮಾಡದೆ ನೀವು ಗುಲ್ಲಾ || ಪಲ್ಲವಿ ||

ಏರು|| ತಿಳಿಸುವೆ ಶಾಸ್ತರ ಸರಿ ಸಾರಿ ಸಭೆದಾಗ ಮಿತಿಮೀರಿ
ಅಕ್ಷರ ನುಡಿ ಕಟಬಂಧಾ | ಕವಿ ಮಾಡಿ ಹಾಡುವೆ ದುಂದಾ
ತಗೋ ತೋಡಿ ಶಾಹೀರ ನಿಂದಾ | ಎಷ್ಟ ಹಾಡಿ ನನ್ನ ಮುಂದಾ
ಜಿಗಿಬ್ಯಾಡ ಹುಗದೇನೋ ಮುರದ ಹಲ್ಲಾ || ೧ ||

ಇ|| ಖ್ವಾಜಾ ಹಸನ ಬಸರಿ ಹೊಂಟಾರ ಮನಸ ಆಗಿ ಮೊದಲಾ
ಹವಾಸೀರಿ ಸಮುದ್ರ ದಂಡಿ ಮ್ಯಾಲಾ
ಏರು|| ತಿರುಗುವರೋ ಅತ್ತ ಇತ್ತ ನಿಂತ ನೋಡ್ಯಾರ ಸೊಂತ
ಬಿಟ್ಟಿದ್ದು ಹೆಂಟೆಯ ಬಿರಕ | ಅದರ ಒಳಗಿಂದ ಬಂತರಿ ಮ್ಯಾಕ
ಚೋಳ ಒಂದು ಒಳೇ ನಾಜೂಕ | ಕಣ್ಣೀಲೆ ಕಂಡಾಕ್ಷಣಕ
ಸಿಟ್ಟೇಲೆ ಹೆಂಟಿ ಒಗದಾರಲ್ಲಾ || ೨ ||

ಇ|| ತಪ್ಪಿತ್ತ ಏಟ ಬಿತ್ತ ಹೊಟ್ಯಾಗ ಭುಗಿಲಾ
ಮತ್ತ ಬೆನ್ನ ಹತ್ಯಾರ ಬಿಡಲಿಲ್ಲಾ
ಏರು|| ಚೋಳ ಕೊಂಡಿಯೆತ್ತಿ ಒತ್ತಿ ನಡಿತೋ ಹತ್ತಿ ಭ್ರಾಂತಿ
ಒಗುವತಾರ ಹೆಂಟೆಯ ಒಗತಾ | ತಾಕಲಿಲ್ಲ ನಿಂತಾರ ಬೆರತಾ
ನಡಿತೋ ಚೋಳ ಹರದಾಡಿಕೊಂತಾ | ಪೆಟ್ಟೆಲ್ಲಾ ತಪ್ಪಸಿಕೊಂತಾ
ಶಿವನ ಆಟ ಯಾರಿಗೆ ತಿಳೂದಿಲ್ಲಾ || ೩ ||

ಇ|| ಬಂತರಿ ಚೋಳ ಸಮುದ್ರ ದಂಡಿಯಮ್ಯಾಲಾ
ಹಸನ ಬಸರಿ ಹಿಂದ ಉಳಿದಾರಲ್ಲಾ ||
ಏರು|| ಅಂತಾರ ಮನಸಿನ್ಯಾಗ ಈಗ ಹೋಗಿ ಬ್ಯಾಗ
ಬಿಡೂದಿಲ್ಲಾ ಹೊಡುತೇನಿ ತುಳದ | ನನ್ನ ಕೈಯಾಗ ಹೋಗಲೇ ಉಳದ
ಎಲ್ಲಿ ಹ್ವಾದರ ತಗೋತೇನಿ ಎಳದ | ಅಂತ ಓಡಿ ಬಂದಾರ ಹಿಂದಾ
ಜಿಗಿತ ಚೋಳ ಕುಂತ ಕಪ್ಪಿಯ ಮ್ಯಾಲಾ || ೪ ||

ಇ|| ಆ ಕಪ್ಪಿ ದಿಕ್ಕು ತಪ್ಪಿ ಸುತ್ತ ನಡಿತಲ್ಲಾ
ಕುಂತ ಚೋಳ ಮ್ಯಾಲೆ ಆಗಿ ಡೌಲಾ
ಏರು|| ಕಂಡಾರ ಹಸನ ಬಸರಿ ಮೀರಿ ಹೌಹಾರಿ
ಜೀವದ ಕಬರಿಲ್ಲಾ | ಸಮುದ್ರ ಜಿಗಿದಾರಲ್ಲಾ
ನಡದಾರ ನೀರಿನ ಮ್ಯಾಲಾ ಅಂತಾರ ಬೆನ್ನ ಹತ್ತೇನಿ ಮೊದಲಾ
ಹೊಡೂತೇನಿ ಪ್ರಾಣಾ ಬಿಡೂದಿಲ್ಲಾ || ೫ ||

ಇ|| ಆ ಚೋಳ ಆಚಿ ದಂಡಿಗೆ ಹೋಗಿ ಬಿಟ್ಟ ಜಲ್ಲಾ
ಕಪ್ಪೆ ನೀರಾಗ ಉಳಿತಲ್ಲಾ
ಏರು|| ಚೋಳ ದಂಡಿಯೇರಿ ಹಾರಿ ಹಿಡಿದ ದಾರಿ
ಹೋಗುತ್ತಿತ್ತ ಅವಸರಲಿಂದ ಹಸನ ಬಸರಿ ಉಳದಾರ ಹಿಂದ
ಓಡುತ್ತ ದಂಡಿಗೆ ಬಂದ ಅಂತಾರ ನನಕ್ಕಿಂತ ಮುಂದ
ಹೋಗತೈತಿ ಚೋಳ ಬಟಾಬೈಲಾ || ೬ ||

ಇ|| ಒಬ್ಬ ಪುರುಷ ಶೆರೆಸಿಂಧಿ ಕುಡದ ಆಗಿ ಅಮಲಾ
ಬಿದ್ದಾನ ಜೀವದ ಕಬರಿಲ್ಲಾ ||
ಏರು|| ಚೋಳ ಪುರುಷನಲ್ಲೇ ಅಲ್ಲೆ ಅವನ ಬದಿಯಲ್ಲೇ
ತಿರಗತಿತ್ತ ಸುತ್ತಮುತ್ತ ಅಷ್ಟರೊಳಗ ಸರ್ಪ ಒಂದ ಬಂತ.
ಚೋಳ ಡಂಕ ಸಿಟ್ಟೇಲೆ ನಿಂತ ಹೊಡೆದ ಕ್ಷಣಕ ತುಣಕ ಆಗಿ ಬಿತ್ತ
ಹಸನ ಬಸರಿ ಕಣ್ಣೀಲೆ ಕಂಡಾರಲ್ಲಾ || ೭ ||

ಇ|| ಕಂಡ ಹಸನ ಬಸರಿ ದಂಗ ಆಗಿ ನಿಂತಾರಲ್ಲಾ
ಅಂತಾರ ಕಾಣಬಾರದೆ ಕಂಡೆನಲ್ಲಾ ||
ಏರು|| ಚೋಳ ಆಗ ಪುನಾ ಆದಿನಾ ಹಸನ ಬಸರಿನಾ
ಮಾತಾಡಿ ಹೀಂಗ ಅಂತು | ಶಿವನ ಅಪ್ಪಣೆ ನನಗ ಆಗಿತ್ತು.
ಅಂದಲ್ಲೆ ತಪ್ಪಿಸಿಕೊಂತ ಬಂದು ಕೊಂದೆ ಸರಪಿಗೆ ನಿಂತು
ಅಂದಲ್ಲೆ ಪುರುಷ ಉಳದಾನಲ್ಲಾ || ೮ ||

ಇ|| ನಾ ತಪ್ಪಿಸಿಕೊಂತ ಬಂದಿದಕ ಸಿಟ್ಟಾಗಿರಲ್ಲಾ
ಬಂದಿsರಿ ಬೆನ್ನಹತ್ತಿ ಬಿಡಲಿಲ್ಲಾ
ಏರು|| ಬೇಕಾದಾಂಗ ನನ್ನ ಇನ್ನಾ ಹೊಡಿರಿ ಪ್ರಾಣಾ
ಕೇಳಿ ಹಸನಬಸರಿ ಆಗ ನೆನಸ್ಯಾರ ಶಿವ ಸಾಂಬಗ
ನಿನ್ನ ಮಹಿಮಿ ಒಪ್ಪುದು ನಮಗ | ಉಳಿಸಿದಿ ಈ ಪುರುಷಗ
ಹರುಷಾದೆ ಕಂಡ ಇಷ್ಟೆಲ್ಲಾ || ೯ ||

ಆ ಕುಡುಕ ಅಲ್ಲೆ ಬಿದ್ದಲ್ಲೆ ಕೇಳಿ ಇಷ್ಟೆಲ್ಲಾ
ಅಡರಾಶಿ ಎದ್ದ ನಿಂತಾನಲ್ಲಾ |
ಏರು|| ಹಾವಿನ ಮೂರು ನಾಲ್ಕು ತುಣಕ | ಕಂಡಾಕ್ಷಣಕ
ಅಂತಾನ ನೆನಸಿ ಶಿವನಾ ಎಷ್ಟ ನಿನ್ನ ಅಂತಃಕರುಣಾ
ಕೆಟ್ಟ ಇದ್ದು ನನ್ನ ಗುಣಾ | ಉಳಿಸಿದಿ ನನ್ನ ಪ್ರಾಣ
ಬಿಟ್ಟ ಇಂದಿಗೆ ಕುಡೂದಿಲ್ಲಾ || ಪಲ್ಲವಿ || ೧೦ ||

ಇ|| ಹೊಡೆಯುವನಕ್ಕಿಂತ ಉಳಸಾಂವಾ ಶಿವನ ಹೊರತಿಲ್ಲಾ
ಅಂತಾನ ಬಡಕೊಂಡ ಗಲ್ಲಾ ಗಲ್ಲಾ
ಏರು|| ಬಾಗಲಕೋಟೆ ಶಾರ-ಹೆಸರ-ಜಾಹೀರ
ಪೀರ ಮಲ್ಲೇಕಲ್ಲ ಹುಸೇನಾ | ಹುಸೇನ ಮಿಯ್ಯಾನ ಕವಿ ಒಳೇ ರಚನಾ
ತಿಳಿದಾಂವಾ ಅವನೆ ಜಾಣಾ | ವೈರಿಗೆ ಬಡದಾಂಗ ಬಾಣಾ
ಕ್ವಾಚಿನಾಚಕಿ ನಿಮಗ ಇಲ್ಲಾ || ೧೧ ||

* * *

೧೨. ಹಸನ ಬಸರಿ ಮತ್ತು ರಾಬಿಯಾ ಬಸರಿ ನಮಾಜು ಮಾಡಿದ ಪದಾ

ಹರುಷದಿಂದ ದೈವದ ಮುಂದಾ | ತಿಳಿಸುವೆ ಮಾಡಿ ಆದ ಸೂಚನಾ || ಪಲ್ಲವಿ ||

ಏರು|| ಮಿಸರದೇಶ ಇರುವುದು ಖಾಸ | ವಲಿಗಳ ವಚನಾ |
ಹಸನ ಬಸರಿ ವಿದ್ಯೆದಲ್ಲಿ ಭಾರಿ | ದೈವಕ ಮೀರಿ | ಹೇಳುವರೋ ಸಾರಿ |
ನನ್ನ ಹತ್ತಿರ ಕಲಿಬೇಕು ಉತ್ತರ | ವಿದ್ಯೆದ ಮಟ್ಟಿ |
ಕೊಡತೇನಿ ಘಟ್ಟಿ | ಮಾಡಿ ಪೂರ್ಣಾ | ಕೇಳಿ ವಚನಾ |
ರಾಬಿಯಾ ಬಸರಿ ಬಂದ್ರೋ ಆಕ್ಷಣಾ || ೧ ||

ಇ|| ಆ ದೇಶದೊಳಗ ಸಮುದ್ರದಾಂಗ | ಇದ್ರೋ ಹಸನ ಬಸರಿಯುವರು ||
ಆ ವ್ಯಾಳೇಕ ವಿದ್ಯೆ ಕಲಿಯಾಕ | ರಾಬಿಯಾ ಬಸರಿ ದರ್ಶನವಾದರು |
ಚ್ಯಾಲಿ|| ಗುರುಶಿಷ್ಯೆ ಕೂಡಿ ಸೂಚನಾ | ಕಲಿತ ವಿದ್ಯೆ ಹೇಳಲಿಯೇನಾ
ಮಾಡಿ ಕಲ್ಪನಾ | ನೀವು ಹರುಷದಿಂದ | ಮನಕ ತಂದ ಕೇಳಿ ಯೋಚನಾ
ಗುರು ಹೇಳಿ ಶಿಷ್ಯೆ ಕೇಳಿ | ಮನನ ಮಾಡಿ ಮುಟ್ಟಿದ ವರ್ತಮಾನಾ
ಏರು|| ಆತ್ಮಧ್ಯಾನಾ ತಿಳಿಸಿ ದಿನಾ ಮುಕ್ತಿ ಮಾರ್ಗನಾ
ಗುರುವಿನ ದಾರಿ | ಶಿಷ್ಯಳಿಗೆ ತೋರಿ | ಪರಮಾತ್ಮ ಸೇರಿ
ಆಗಿ ಓಂಕಾರಿ | ಸರ್ವ ದೈವಕ ತಿಳಿಸಿ ಚುರುಕ
ವಿದ್ಯೆದ ಮಟ್ಟಿ | ಕಟ್ಯಾಳೋ ಘಟ್ಟಿ | ಮಾಡಿ ರಚನಾ
ತಿಳಿ ಜತನಾ | ರಾಬಿಯಾ ಬಸರಿ ಆಗಿದಾರೋ ಪಾವನಾ || ೨ ||

ಇ|| ಗುರು ಶಿಷ್ಯೆಯರು ಮಾತನಾಡಿದರು | ಹೊರಗ ದಾರಿ ಹಿಡಿದರು
ಆ ವ್ಯಾಳೇಕ | ನಮಾಜ ಮಾಡಾಕ | ಸಮುದ್ರದ ದಡಕ ಮುಟ್ಟಿದರು
ಚ್ಯಾಲಿ|| ಗುರುವು ಹೇಳತಾನ ಮಥನಾ | ನಮಾಜ ಮಾಡುವ ಯತನಾ
ನೀರ ಮ್ಯಾಲಿನ್ನಾ | ಗುರು ಶಿಷ್ಯೆಯರು | ಕೂಡಿ ಮಾಡ್ಯಾರು
ನಮಾಜ ಮಾಡಿ ಪರಮಾತ್ಮನಾ | ಶಿಷ್ಯಳು ಚಂದ
ಅಂತರದಿಂದ | ನಮಾಜ ಮಾಡಿ ಪಾರಗಾಣುನಾ
ಏರು|| ಗುರುವು ನೀರಿನ ಮೇಲೆ | ಶಿಷ್ಯಳು ಅಂತರಲಿ
ನಡೆಸಿದ ಧ್ಯಾನಾ | ನೋಡಿ ಭಗವಾನಾ
ಮೆಚ್ಚಿದ ತಾನಾ | ಸತ್ಯದ ಸವನಾ | ಆಗುವದೇನಾ
ಗುರುವು ಶಿಷ್ಯರು ನಡಿದು ಉತ್ತರ ಎದ್ದು ಬಂದಾರು
ಮಾಡಿ ವಿಚಾರಾ | ಇಲ್ಲ ಸವನಾ | ಗುರುವಿನ ಮನಾ ||
ರಾಬಿಯಾ ಬಸರಿ ತಿಳಿಸಿ ಸತ್ಯವನಾ || ೩ ||

ಆ ನೀರೊಳಗಿನಾ | ಕಪ್ಪಿ ಮನಾ | ಮಾಡತಾವು ಧ್ಯಾನಾ
ಎಂದರು ಆ ಅಂತರದಲಿ ಗುಬ್ಬಿ ಕಾಗಿ ಮ್ಯಾಲೆ
ಹಾಡುಗಳ ಬಾವಲಿ ಮಾಡುವುದು ತಿಳಿಸಿದರು
ಚ್ಯಾಲಿ || ಗುರುವಿಗೆ ಶಿಷ್ಯ ಭಕ್ತಿ ಬೇಡಿ | ಗುರುವಿನ ಮನ ಆತ ಮಾಡಿ
ಪ್ರೀತಿ ಪಾವನಾ | ಗದಗ ಶ್ಯಾರ
ಮೆಹಬೂಬ ಪೀರ ದಯವು ಮಾಡಿಕೊಟ್ಟ ಬುದ್ದಿಯನ್ನಾ || ೪ ||

* * *