ಪ್ರಕೃತಿಯಲ್ಲಿ ಶಬ್ದಗಳ ಮೂಲಕವೇ ಸಂವಹನ ಆರಂಭವಾಗಿದ್ದು, ಅಕ್ಷರ ನಾಗರಿಕತೆಗಳು ಆರಂಭವಾಗುವ ಮುನ್ನ ಮನುಷ್ಯರೂ ಶಬ್ದಗಳ ಏರಿಳಿತಗಳ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಇಂದಿಗೂ ಪ್ರಕೃತಿಯಲ್ಲಿನ ಬೇರೆ ಬೇರೆ ಪ್ರಾಣಿ ಪಕ್ಷಿಗಳು ತಮ್ಮ ತಮ್ಮದೇ ಆದ ವಿಶಿಷ್ಟ ಧ್ವನಿ ತರಂಗಗಳ ಮೂಲಕ, ಪ್ರೀತಿ- ಪ್ರೇಮ, ಅಪಾಯಗಳ ಮುನ್ಸೂಚನೆ ನೀಡುತ್ತದೆ. ಪ್ರಕೃತಿಯಲ್ಲಿನ ಲಯಕ್ಕೆ ಹೊಂದುವಂತೆ ಸ್ವರ ಭಾವ ಲಯಗಳ ಮೂಲಕ ಸಂಗೀತವನ್ನು ಮತ್ತು ಮಾಧುರ್ಯವನ್ನು ಸೃಷ್ಟಿಸಲಾಗುತ್ತದೆ. ಇಂದಿಗೂ ನಮಗೆ ಬೇರೆ-ಬೇರೆ ತರಂಗಗಳಲ್ಲಿ ಕೇಳಿ ಬರುವ ಕಂಪನಗಳೇ ಧ್ವನಿಗಳಾಗಿ ನಾಗರಿಕ ಸಮಾಜದ ಸಂವಹನಗಳಾಗಿದೆ. ಹಾಡುಗಳು, ಮಾತುಗಳು, ಪ್ರವಚನ ಉಪನ್ಯಾಸಗಳು, ಹೀಗೆ ವಿವಿಧ ಪ್ರಕಾರಗಳಲ್ಲಿ ಮನಸು ಬುದ್ಧಿಯ ಮೇಲೆ ತಮ್ಮ ತರಂಗಗಳ ಮೂಲಕ ಪ್ರಭಾವ ಬೀರುವ ಧ್ವನಿಗಳನ್ನು ಕಣಜದ ಮೂಲಕ ಕೇಳಿಸುವ ಆಶಯದ ಪ್ರಯತ್ನ e-ದನಿ.
