ಮುಖಪುಟ

‘ಕರ್ನಾಟಕ ಸಂಭ್ರಮ-೫೦’ ಲಾಂಛನ(ಲೋಗೋ) ಮಾದರಿಗಳ ಆಹ್ವಾನ.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ ೫೦” “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಆಸಕ್ತರಿಂದ ಸುಂದರವಾದ ಲಾಂಛನ(ಲೋಗೋ) ಮಾದರಿಗಳನ್ನು ಆಹ್ವಾನಿಸಲಾಗಿದ್ದು, ಎಲ್ಲಾ ಆಸಕ್ತರು ತಮ್ಮ ಪರಿಕಲ್ಪನೆಯ ಲಾಂಛನ(ಲೋಗೋ)ವನ್ನು ಕಳುಹಿಸುವ ಮೂಲಕ ಈ ಸುವರ್ಣ ಸಂಭ್ರಮದ ಯಶಸ್ಸಿಗೆ ಕೈಜೋಡಿಸಬೇಕಾಗಿ ಕೋರಿದೆ.

  1. ‘ಕರ್ನಾಟಕ ಸಂಭ್ರಮ-೫೦’ ಎಂದು ಕಡ್ಡಾಯವಾಗಿ ನಮೂದಿಸಬೇಕು.
  2. ಲಾಂಛನ(ಲೋಗೋ)ವನ್ನು ಬಹುವರ್ಣದಲ್ಲಿ ವಿನ್ಯಾಸಗೊಳಿಸಬಹುದು.
  3. ಲಾಂಛನ(ಲೋಗೋ)ವನ್ನು ನಮ್ಮ ನಾಡು-ನುಡಿ,ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಮಾದರಿಯಲ್ಲಿ ರಚಿಸಬೇಕು.
  4. ತಾವು ರಚಿಸುವ ಲಾಂಛನ(ಲೋಗೋ)ವನ್ನು ಆನ್‌ಲೈನ್‌ನಲ್ಲಿಯೇ ಕಡ್ಡಾಯವಾಗಿ ಹೈ ರೆಸೊಲ್ಯೂಷನ್‌ (high resolution) ಪಿಡಿಎಫ್‌/ ಪಿ.ಎನ್.ಜಿ/ಜೆ.ಪಿ.ಜಿ. ಮಾದರಿಯಲ್ಲಿಯೇ ಸಲ್ಲಿಸಬೇಕು. (2 MB max)
  5. ವಿನ್ಯಾಸಗೊಳಿಸುವ ಲಾಂಛನ(ಲೋಗೋ)ದ ಅಳತೆಯು ಕಡ್ಡಾಯವಾಗಿ 1000X1000 pixel, 300DPI (Resolution) ನಲ್ಲಿ ಇರತಕ್ಕದ್ದು.
  6. ಆಯ್ಕೆಯಾದ ಲಾಂಛನ(ಲೋಗೋ)ದ ಹಕ್ಕು ಮತ್ತು ಸ್ವಾಮ್ಯ ಸಂಪೂರ್ಣ ಸರ್ಕಾರದ್ದಾಗಿರುತ್ತದೆ.
  7. ಆಸಕ್ತರಿಂದ ಬಂದಂತಹ ಎಲ್ಲಾ ಮಾದರಿಗಳನ್ನು ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ ಅಂತಿಮವಾಗಿ ಒಂದು ಮಾದರಿಯನ್ನು ಆಯ್ಕೆ ಮಾಡಲಾಗುವುದು. ತಜ್ಞರ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
  8. ಆಯ್ಕೆಯಾದ ಉತ್ತಮ ಗುಣಮಟ್ಟದ ಲಾಂಛನ(ಲೋಗೋ)ಕ್ಕೆ ಇಲಾಖೆಯಿಂದ ರೂ.25,000/-ಗಳ ಬಹುಮಾನ ನೀಡಲಾಗುವುದು.
  9. ಆಯ್ಕೆಯಾದ ಲಾಂಛನ(ಲೋಗೋ)ದ ಮಾದರಿಯನ್ನು ಬದಲಾವಣೆ ಮಾಡುವ ಹಕ್ಕು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದಾಗಿರುತ್ತದೆ.
  10. ಆಯ್ಕೆಯಾದ ಲಾಂಛನ(ಲೋಗೋ)ದ ಸಾಫ್ಟ್‌ಪ್ರತಿಗಳನ್ನು ಹೈ-ರೆಸೊಲ್ಯೂಷನ್‌ ಮೂಲಕ ಕೋರಲ್‌ ಡ್ರಾ/ ಪೋಟೋಶಾಪ್ ಮಾದರಿಯಲ್ಲಿ ಕಡ್ಡಾಯವಾಗಿ ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು.
  11. ಲಾಂಛನ(ಲೋಗೋ) ಮಾದರಿ ಸಲ್ಲಿಸಲು ಕೊನೆಯ ದಿನಾಂಕ: 02/10/2023 ಆಗಿರುತ್ತದೆ.