ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 58

Download  View

ಸರ್ಕಾರವು ರಾಜ್ಯದ ಜನತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖಾಂತರ ಸಮಗ್ರ ಆರೋಗ್ಯ ರಕ್ಷಣೆಯ ಸೇವೆಯನ್ನು ಒದಗಿಸುತ್ತಿದೆ. ಹಿಂದಿನ ಮೈಸೂರು ರಾಜ್ಯದಲ್ಲಿ ಹಿರಿಯ ತಜ್ಞರೊಬ್ಬರನ್ನು ಪದನಿಮಿತ್ತ ಸ್ಯಾನಿಟರಿ ಆಯುಕ್ತರನ್ನಾಗಿ 1887 ರಲ್ಲಿ ನೇಮಿಸಿ ಆರೋಗ್ಯ ಇಲಾಖೆಯು ಪ್ರತ್ಯೇಕವಾಗಿ ಇರಬೇಕೆಂಬುದನ್ನು ನಿರ್ಧರಿಸಲಾಯಿತು. 1898-1902 ಮಧ್ಯೆ ಪ್ಲೇಗ್ ರೋಗವನ್ನು ತಡೆಗಟ್ಟಲು ಪ್ಲೇಗ್ ಆಯೋಗವನ್ನು ರಚಿಸಲಾಯಿತು. ಸಾರ್ವಜನಿಕ ಆರೋಗ್ಯ ವಿಭಾಗವನ್ನು 1907 ರಲ್ಲಿ ವಿಸ್ತರಿಸಲಾಯಿತು. ರಾಜ್ಯವನ್ನು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಿಭಾಗಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಿ. ತುಮಕೂರು ಜಿಲ್ಲೆಯನ್ನು ಪೂರ್ವ ವಿಭಾಗಕ್ಕೆ ಸೇರಿಸಲಾಯಿತು. ಪ್ರತಿಯೊಂದು ವಿಭಾಗಕ್ಕೂ ವಿಭಾಗೀಯ ಸ್ಯಾನಿಟರಿ ಅಧಿಕಾರಿಯನ್ನು ನೇಮಕ ಮಾಡಲಾಯಿತು. ತುಮಕೂರು ಜಿಲ್ಲೆಯ ಸ್ಯಾನಿಟರಿ ಅಧಿಕಾರಿಯ ಹುದ್ದೆಯನ್ನು 1909-10 ರಲ್ಲಿ ಸೃಜಿಸಲಾಯಿತು. ನಂತರ ಜಿಲ್ಲಾ ಸ್ಯಾನಿಟರಿ ಅಧಿಕಾರಿ ಹುದ್ದೆಯ ಬದಲಾಗಿ ಮುಖ್ಯ ಸ್ಯಾನಿಟರಿ ಇನ್ಸ್‌ಪೆಕ್ಟರ್ ಹುದ್ದೆಯನ್ನು ಸೃಜಿಸಿ ಜಿಲ್ಲಾ ಬೋರ್ಡ್‍ಗಳ ಅಧೀನದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು.

ಸಂಬಂಧಿತ ಪುಸ್ತಕಗಳು