Categories
Ebook ಕರ್ನಾಟಕ ಗ್ಯಾಸೆಟಿಯರ್ ಕರ್ನಾಟಕದ ಮಿನುಗುನೋಟ

ಲಲಿತ ಕಲೆಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಲಲಿತ ಕಲೆಗಳು ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 14

Download  View

ಇತಿಹಾಸ ಪೂರ್ವಕಾಲದಷ್ಟು ಪ್ರಾಚೀನ ಜಾಡು ಹಿಡಿಯಬಹುದಾದ ವಾಸ್ತುಶಿಲ್ಪದ ದೀರ್ಘ ಸಂಪ್ರದಾಯವು ಕರ್ನಾಟಕದಲ್ಲಿದೆ. ಅಷ್ಟೇ ಅಲ್ಲ, ಮಾನವರು ಸೃಷ್ಟಿಸಿದ ಕೃತಕ ವಾಸದ ನೆಲೆಗಳ ಅತ್ಯಂತ ಪುರಾತನ ಸಾಕ್ಷಿಗಳು ರಾಜ್ಯದಲ್ಲಿವೆ. ಗುಲಬರ್ಗಾ ಜಿಲ್ಲೆಯ ಶೋರಾಪುರ ತಾಲ್ಲೂಕಿನ ಹುಣಸಗಿ, ಬೈಚಬಾಲ್, ಇಸ್ಲಾಂಪುರ್, ಮುಂತಾದ ಸ್ಥಳಗಳಲ್ಲಿ ನಡೆಸಲಾದ ಪುರಾತತ್ವ ಉತ್ಖನನಗಳು, ಪ್ರಾರಂಭಿಕ ಹೋಮಿನಿಡ್‍ಗಳು ನಿರ್ಮಿಸಿದ ರಚನೆಗಳ ಮೇಲೆ ಬೆಳಕು ಚೆಲ್ಲಿವೆ. ಸುಮಾರು ದಶಲಕ್ಷ ವರ್ಷಗಳಷ್ಟು ಪುರಾತನವಾದ, ಮಾನವ ಇತಿಹಾಸದ ಪ್ರಾರಂಭಿಕ ಸಾಂಸ್ಕೃತಿಕ ಹಂತಕ್ಕೆ ಸೇರಿದ ವರ್ತುಲಾಕಾರದ ಯೋಜನೆಯಲ್ಲಿ ಒಪ್ಪವಾಗಿ ವ್ಯವಸ್ಥೆಗೊಳಿಸಲಾಗಿದ್ದ ಶಿಲಾವೃತ್ತ ಗುರುತುಗಳು ದೊರೆತಿವೆ. ಈ ವರ್ತುಲಾಕಾರದ ರಚನೆಗಳು, ಬಹುಶಃ ಗಾಳಿಯಿಂದ ಹುಲ್ಲು ಅಥವಾ ಜೊಂಡಿನ ಆಶ್ರಯಗಳನ್ನು ರಕ್ಷಿಸಲು ನಿರ್ಮಿಸಲಾಗಿತ್ತೆಂದು ತೋರುತ್ತದೆ. ಪ್ರಾರಂಭಿಕ ಹೋಮಿನಿಡ್ ಪೂರ್ವಜರ ಕಟ್ಟಡ ನಿರ್ಮಾಣ ಚಟುವಟಿಕೆಯ ಕೆಲ ಸಾಕ್ಷಿಗಳು ದೊರೆತಿರುವ ಮತ್ತೊಂದು ಪ್ರದೇಶವೆಂದರೆ ಆಫ್ರಿಕಾ.

ಸಂಬಂಧಿತ ಪುಸ್ತಕಗಳು