Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳು ಎಚ್. ಎಸ್. ರಾಘವೇಂದ್ರರಾವ್
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 196

Download  View

 ಕನ್ನಡ ಕಾವ್ಯದ ಇಂದಿನ ಸನ್ನಿವೇಶದಲ್ಲಿ ಪ್ರವೇಶ ಬಿಂದುಗಳು ಅನೇಕ. ಇವು ಆಯಾ ಕವಿಯ ತಾತ್ವಿಕತೆಯ ಸ್ವರೂಪದಿಂದ ತೀರ್ಮಾನವಾಗಿತ್ತಿವೆಯೇ ವಿನಾ ಆಕೃತಿ ಸಂಬಂಧಿಯಾದ ವಿಷಯಗಳಿಂದ ಅಲ್ಲ. ಕೊನೆಗೂ ಮುಖ್ಯವಾಗುವುದು, ಇಪ್ಪತ್ತೊಂದನೆಯ ಶತಮಾನದಲ್ಲಿ ಖಚಿತವಾದ ಆಕಾರಗಳನ್ನು ಪಡೆಯುತ್ತಿರುವ ನವ ಆಧುನಿಕತೆಯ ಸವಾಲುಗಳನ್ನು ಕವಿಯು ಎದುರಿಸುವ ಬಗೆಯೇ ಆಗಿದೆ. ಇಂಥ ಅನುಸಂಧಾನವು, ಗತ ಮತ್ತು ಪ್ರಸ್ತುತಗಳ ನಡುವೆ ಮಾಡಿಕೊಳ್ಳುವ ಆಯ್ಕೆಯು ತಂತಿಯ ಮೇಲಿನ ನಡಿಗೆಯೆನ್ನುವುದರಲ್ಲಿ ಅನುಮಾನವಿಲ್ಲ.