Categories
Ebook ಕರ್ನಾಟಕ ಗ್ಯಾಸೆಟಿಯರ್ ತುಮಕೂರು ಜಿಲ್ಲಾ

ಆರ್ಥಿಕ ಪ್ರವೃತ್ತಿಗಳು

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಆರ್ಥಿಕ ಪ್ರವೃತ್ತಿಗಳು ಎನ್ ಚಂದ್ರಶೇಖರ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 70

Download  View

ಯಾವುದೇ ಪ್ರದೇಶದ ಸಮಗ್ರ ಪ್ರಗತಿ ಅಲ್ಲಿನ ಆರ್ಥಿಕ ಅಭಿವೃದ್ಧಿಯನ್ನು ಅವಲಂಬಿಸಿರುತ್ತದೆ. ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ನೈಸರ್ಗಿಕ ಸಂಪತ್ತು, ಮಾನವ ಸಂಪತ್ತು, ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ವಾಣಿಜ್ಯ-ವ್ಯಾಪಾರ, ಸಾರಿಗೆ-ಸಂಪರ್ಕ, ಉಳಿತಾಯ ಕ್ಷಮತೆ, ಬಂಡವಾಳ ಹೂಡಿಕೆ, ನಗರೀಕರಣ, ಉದ್ಯೋಗ, ಕೂಲಿ, ತಲಾದಾಯ, ಬೆಲೆ, ಮುಂತಾದ ಹತ್ತು ಹಲವು ರಂಗಗಳಲ್ಲಿ ಕಂಡುಬರುವ ಏರಿಳಿತಗಳನ್ನು ಆಧರಿಸಿದ ಆರ್ಥಿಕ ಪ್ರವೃತ್ತಿಗಳು ಆಯಾ ಪ್ರದೇಶಗಳ ಆರ್ಥಿಕ ಮುನ್ನಡೆಯನ್ನು ಸೂಚಿಸುತ್ತವೆ. ಲಭ್ಯವಿರುವ ನೈಸರ್ಗಿಕ ಹಾಗೂ ಆರ್ಥಿಕ ಸಂಪನ್ಮೂಲಗಳ ಸಮಗ್ರ ಬಳಕೆಗೆ ಪೂರಕವಾದ ಮೂಲಭೂತ ಸೌಕರ್ಯಗಳು, ತಂತ್ರಜ್ಞಾನಗಳೇ ಮುಂತಾದ ಅಂಶಗಳು ಆರ್ಥಿಕ ಪ್ರವೃತ್ತಿಯ ದಿಸೆಯನ್ನು ನಿರ್ದೇಶಿಸುವ ಪ್ರಧಾನ ಅಂಶಗಳಾಗಿದ್ದು, ಆರ್ಥಿಕ ಅಭಿವೃದ್ಧಿ ಸಾಧಿಸುವಲ್ಲಿ ನೆರವಾಗುತ್ತವೆ. ಹೀಗೆ ಸಮಾಜದ ಬದಲಾವಣೆ ಮತ್ತು ಸುಧಾರಣೆಗಳಿಗೆ ಮಾರ್ಗಸೂಚಿಗಳಾಗಬಹುದಾದ ಆರ್ಥಿಕ ಪ್ರವೃತ್ತಿಗಳು ತುಮಕೂರು ಜಿಲ್ಲೆಯ ಸರ್ವಾಂಗೀಣ ಬೆಳವಣಿಗೆಯನ್ನು ಸಾಧಿಸುವ ನಿಟ್ಟಿನಲ್ಲಿ ವಹಿಸಿರುವ ಪಾತ್ರ ಹಾಗೂ ಬೀರಿರುವ ಪ್ರಭಾವಗಳನ್ನು ಇಲ್ಲಿ ಬಿಂಬಿಸಲು ಯತ್ನಿಸಲಾಗಿದೆ.

ಸಂಬಂಧಿತ ಪುಸ್ತಕಗಳು