Categories
Ebook Scanned Book Text ಕನ್ನಡ ಸಾಹಿತ್ಯ ಪರಿಷತ್ತು

ದಲಿತ ಸಾಹಿತ್ಯ ಸಂಪುಟ – ಸಣ್ಣಕಥೆ

ಪುಸ್ತಕ ವಿವರ
ಕೃತಿಯ ಹೆಸರು ಸಂಪಾದಕರು
ದಲಿತ ಸಾಹಿತ್ಯ ಸಂಪುಟ – ಸಣ್ಣಕಥೆ  ನಾಡೋಜ ಡಾ. ಮನು ಬಳಿಗಾರ್, ಡಾ. ಸಣ್ಣರಾಮ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಸಾಹಿತ್ಯ ಪರಿಷತ್ತು
ಪುಟಗಳ ಸಂಖ್ಯೆ 276

Download    |    View

Ebook  |   Text

ಅಮಾಸ ಎಂಬುದು ಅಮಾಸನ ಹೆಸರು. ಅವನು ಕಪ್ಪುಗಿದ್ದುದಕ್ಕೊ ಅಮಾವಾಸೆ ದಿನ ಹುಟ್ಟಿದ್ದಕ್ಕೊ ಅವನಿಗೆ ಅಮಾಸ ಹೆಸರು ನಿಂತಿದೆ. ಅಮಾಸ ಹೆಸರು ಯಾಕೆ ಬಂತು ಎಂದು ಅವನ ಅಪ್ಪ, ಅವ್ವ ಬದುಕಿದ್ದರೆ ಕೇಳಬಹುದಿತ್ತು. ಆದರೆ ಅವನು ಹುಟ್ಟಿದ ಮೇಲೆ ನಡೆದಾಡೊ ವೇಳೆಗೆ ಅವನನ್ನು ಹೆತ್ತವಳು ಹುಟ್ಟಿಸಿದವನು ನಾನಾ ನಿಮಿತ್ತವಾಗಿ ದೈವಾಧೀನರಾದರು. ಅಗಲೀಗ ಆಮಾಸನಿಗೆ ಮಾರಿಗುಡಿ ಅಂದರೆ ಅಮಾಸ. ಅಮಾಸ ಅಂದರೆ ಮಾರಿಗುಡಿ ಎಂಬಂತಾಯ್ತು.