ಪುಸ್ತಕ ವಿವರ
ಕೃತಿಯ ಹೆಸರು | ಲೇಖಕರ ಹೆಸರು |
---|---|
ನಮಗರಿವಿಲ್ಲದೆ ಬರುವ ಆರು ರೋಗಗಳು | ಡಾ. ನಾ. ಸೋಮೇಶ್ವರ |
ಕೃತಿಯ ಹಕ್ಕುಸ್ವಾಮ್ಯ | ಕನ್ನಡ ಪುಸ್ತಕ ಪ್ರಾಧಿಕಾರ |
ಪುಟ ಸಂಖ್ಯೆ | 144 |
ನಮಗೆ ಬರುವ ರೋಗಗಳಲ್ಲಿ ಸೋಂಕುರೋಗಗಳು ಮುಖ್ಯವಾದವು. ನಮ್ಮ ಬರಿಗಣ್ಣಿಗೆ ಕಾಣದ ಬ್ಯಾಕ್ಟೀರಿಯಾ, ವೈರಸ್, ಶಿಲೀಂಧ್ರ ಮುಂತಾದ ಜೀವಿಗಳು ಸಿಡುಬು, ಕಾಲರ, ಟೈಫಾಯ್ಡ್, ಪ್ಲೇಗ್, ಕ್ಷಯ, ಫ್ಲೂ ಮುಂತಾದ ರೋಗಗಳನ್ನು ಉಂಟು ಮಾಡುತ್ತವೆ. ಈ ಸೋಂಕು ರೋಗಗಳು ಎಂತಹ ಮಾರಕ ಪಿಡುಗು ರೂಪದಲ್ಲಿ ಬರುತ್ತಿದ್ದವು ಎಂದರೆ ಹಳ್ಳಿಗೆ ಹಳ್ಳಿಯೇ ನಾಶವಾಗಿ ಬಿಡುತ್ತಿದ್ದವು. ಈಗ ಅಂತಹ ದುರ್ಬರ ದಿನಗಳಿಲ್ಲ. |