Categories
Scanned Book ಅಕಾಡೆಮಿ ಪುಸ್ತಕಗಳು  ಕನ್ನಡ ಪುಸ್ತಕ ಪ್ರಾಧಿಕಾರ

ಭರತೇಶನ ದಿನಚರಿ ತಪಸ್ಸಿನ ದಿನಗಳು

ಪುಸ್ತಕ ವಿವರ
ಕೃತಿಯ ಹೆಸರು ಅನುವಾದಕರು
ಭರತೇಶನ ದಿನಚರಿ ತಪಸ್ಸಿನ ದಿನಗಳು ಪಿ. ಕೆ. ನಾರಾಯಣ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 234

Download  View

 ಭರತೇಶ್ವರನು ಷಟ್ಖಂಡದ ಧಾತ್ರೀಪಾಲರನ್ನೆಲ್ಲ ಗೆದ್ದು ಶತ್ರುಗಳೇ ಇಲ್ಲವೆಂಬಂತೆ ಮಿತ್ರಭಾವದಲ್ಲೇ ಭೂಮಿಯನ್ನು ಏಕಛತ್ರದಡಿಯಲ್ಲಿ ಆಳುತ್ತಿದ್ದನು. ಆ ಮಹಾ ಸುಕೃತಿಯು, ನೆರೆದ ಹೆಣ್ಣು ಗಂಡು ಮಕ್ಕಳ ಮದುವೆ ಮಾಡುತ್ತ, ಹಸುಳೆಗಳನ್ನು ಮುದ್ದಾಡುತ್ತ, ಗುಂಗುರು ಕೂದಲಿನ ಆಬಲೆಯರೊಂದಿಗೆ ಲೀಲೆ ಮಾಡುತ್ತ, ಅಕ್ಕರೆಯಿಂದಿದ್ದನು. ದಿನಂಪ್ರತಿ ತೋರುವ ಹೊಸ ರೀತಿಯ ಒಸಗೆಯಾಟಪಾಟಗಳಲ್ಲಿ ಅಸಮ ಪುಣ್ಯದ ಫಲಪಾಕವನ್ನುಂಡು, ಆತ್ಮಸಾಕ್ಷಿಯಲ್ಲದನ್ನು ತೀರಿಸುತ್ತಿದ್ದನು.