Categories
Ebook ಕರ್ನಾಟಕ ಕೈಪಿಡಿ ೨೦೧೨ ಕರ್ನಾಟಕ ಗ್ಯಾಸೆಟಿಯರ್

ಶಿಕ್ಷಣ ಮತ್ತು ಕ್ರೀಡೆ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಶಿಕ್ಷಣ ಮತ್ತು ಕ್ರೀಡೆ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 80

Download  View

ನಮ್ಮ ರಾಜ್ಯದಲ್ಲಿ ಪ್ರಾಚೀನ ಶಿಕ್ಷಣ ಸಂಸ್ಥೆಗಳಾದ ಅಗ್ರಹಾರ, ಶಿವಪುರಿ, ಬ್ರಹ್ಮಪುರಿ, ಘಟಿಕಸ್ಥಾನ ಮತ್ತು ಮಠಗಳು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗಳಲ್ಲಿ ಬೋಧಿಸುತ್ತಿದ್ದವು. ಮಠಗಳು ವಸತಿ ಶಾಲೆಗಳಾಗಿದ್ದು, ಗುರುಶಿಷ್ಯರು ಒಟ್ಟಿಗೆ ವಾಸಿಸುತ್ತಿದ್ದರು. ಅಗ್ರಹಾರ ಮತ್ತು ಬ್ರಹ್ಮಪುರಿಗಳು ಪಂಡಿತರ ವಸತಿಗಳಾಗಿದ್ದು, ವಿದ್ಯಾರ್ಥಿಗಳಿಗೆ ಅಧ್ಯಯನ, ಮನನ ಮತ್ತು ಪಠಣ(three R’s Reading, Writing and Arithmetic) ಗಳ ತರಬೇತಿ ನೀಡಲಾಗುತ್ತಿತ್ತು. ಗ್ರಾಮೀಣ ವಿದ್ಯಾರ್ಜನೆಗೆ ಪ್ರತ್ಯೇಕ ವ್ಯವಸ್ಥೆ ಇದ್ದಿತು. ಘಟಿಕಾ ಸ್ಥಾನಗಳಲ್ಲಿ ಪದವಿ ಪ್ರಧಾನ ಮಾಡುವುದು ಮತ್ತು ವಿದ್ವತ್ತನ್ನು ಗುರುತಿಸಿ ಅರ್ಹತಾ ಪತ್ರ ನೀಡಲಾಗುತ್ತಿತ್ತು. ಶ್ರೀಮಂತ ಕುಟುಂಬಗಳು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ತಾವೇ ಖಾಸಗಿಯಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ದೇವಸ್ಥಾನ, ಛತ್ರ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಮನೆಯಲ್ಲಿ ಉಪಾಧ್ಯಾಯರು ಶಾಲೆಗಳನ್ನು ನಡೆಸುತ್ತಿದ್ದರು. ಅವರಿಗೆ ಸುಗ್ಗಿಯ ಕಾಲದಲ್ಲಿ ದವಸ, ಧಾನ್ಯಗಳನ್ನೋ ಅಥವಾ ಹಣವನ್ನೋ ಜನರು ನೀಡುತ್ತಿದ್ದರು. ನಂತರ ಕೂಲಿಮಠ, ಸಾಲಿಮಠ ಅಥವಾ ಓದಿಸುವ ಮಠಗಳು ಪ್ರಾರಂಭಗೊಂಡವು. ಓದು, ಬರಹ ಮತ್ತು ಮಗ್ಗಿ ಅಥವಾ ಗಣಿತವನ್ನು ಹೇಳಿಕೊಡಲಾಗುತ್ತಿತ್ತು. ವಾಕ್ಯಗಳನ್ನು, ಪದ್ಯಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಬಾಯಿಪಾಠ ಮಾಡಿಸುವುದರ ಮೂಲಕ ಕಲಿಸಲಾಗುತ್ತಿತ್ತು. ತುಂಟ ಹುಡುಗರನ್ನು, ನಿಧಾನ ಕಲಿಕೆಯವರನ್ನು ಹತೋಟಿಯಲ್ಲಿಡಲು ಬೆತ್ತದ ಛಡಿ ಮುಖ್ಯ ಪಾತ್ರವಹಿಸುತ್ತಿತ್ತು.

ಸಂಬಂಧಿತ ಪುಸ್ತಕಗಳು