Categories
Ebook ಕರ್ನಾಟಕ ಕೈಪಿಡಿ ೨೦೧೨ ಕರ್ನಾಟಕ ಗ್ಯಾಸೆಟಿಯರ್

ಆಡಳಿತ

ಪುಸ್ತಕ ವಿವರ
ಕೃತಿಯ ಹೆಸರು ಲೇಖಕರ ಹೆಸರು
ಆಡಳಿತ ನೀಲಾ  ಮಂಜುನಾಥ್
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 94

Download  View

ಪ್ರಸ್ತುತ ಜಾರಿಯಲ್ಲಿರುವ ಅನೇಕ ಆಡಳಿತ ಸಂಸ್ಥೆಗಳು ಸಾಮಾನ್ಯವಾಗಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿರುವ ಪದ್ಧತಿಗಳ ಮುಂದುವರಿಕೆಯಾಗಿದೆ. ಪ್ರಾಚೀನ ಭಾರತದಲ್ಲಿ, ಅಂದರೆ ವೇದಗಳ ಕಾಲದಿಂದಲೂ ಹಿಂದೂ ಆಡಳಿತ ಪದ್ಧತಿಗಳನ್ನು ಅಧ್ಯಯನ ಮಾಡಿದರೆ ಅನೇಕ ಆಡಳಿತ ಸಂಸ್ಥೆಗಳ ಪರಿಚಯವಾಗುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರ, ಮನುವಿನ-ಮನುಸ್ಮೃತಿ, ಕಮಂಡಕನ ನೀತಿಶಾಸ್ತ್ರ, ವರಾಹಮಿಹಿರನ ಬೃಹತ್ ಸಂಹಿತಾ ಹಾಗೂ ಮುದ್ರಾಮಂಜೂಷಗಳಲ್ಲಿ ನಿರೂಪಿಸಿರುವ ಪ್ರಾಚೀನ ಭಾರತದ ಆಡಳಿತ ವ್ಯವಸ್ಥೆಗಳನ್ನು ಪರಿಶೀಲಿಸಿದರೆ ಅವುಗಳ ಅನಾದಿಕಾಲದ ಮುಂದುವರಿಕೆಯು ಸ್ವಯಂವೇದ್ಯವಾಗುತ್ತದೆ. ಭಾರತದಲ್ಲಿದ್ದಂತಹ ಆಡಳಿತ ವ್ಯವಸ್ಥೆಯು ಕರ್ನಾಟಕದಲ್ಲೂ ಪ್ರಾಚೀನಕಾಲದಿಂದ ಮುಂದುವರೆದಿರುವುದು ವ್ಯಕ್ತವಾಗುತ್ತದೆ. ಕರ್ನಾಟಕದಲ್ಲಿ ಲಭ್ಯವಿರುವ 1200 ವರ್ಷಗಳ ಹಿಂದಿನ ಶಾಸನಗಳಲ್ಲಿ ವ್ಯಕ್ತವಾಗಿರುವ ಮುಖ್ಯ ಆಡಳಿತ ಘಟಕವಾದ ‘ನಾಡು’ ಬಗ್ಗೆ ಹಲವಾರು ಉಲ್ಲೇಖಗಳಿವೆ.

ಸಂಬಂಧಿತ ಪುಸ್ತಕಗಳು